ಪಿಂಜಾರ ಅಭಿವೃದ್ಧಿ ನಿಗಮ ಸೇರಿ ವಿವಿಧ ಬೇಡಿಕೆಗಳಿಗೆ ಪ್ರತಿಭಟನೆ
1 min readಚಿತ್ರದುರ್ಗ ಮಾ. ೦೨
ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ, ಹಾಸಿಗೆ ಕೂಲಿ ಕಾರ್ಮಿಕರ ಕಾರ್ಡ್ ಹಾಗೂ ಪ್ರವರ್ಗ-೧ ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪಿಂಜಾರ್ ನದಾಫ/ಮನ್ಸೂಲಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ.ರಜಾಕ್ ಸಾಬ್, ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ದುದೇ ಕುಲ ಒಂಚಾರಿ, ನದಾಫ ಸಂಘ ಹಾಗೂ ನದಾಫ/ಪಿಂಜಾರೆ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷರುಗಳ ಮತ್ತು ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಸುಮಾರು ೩೮ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಒಂಚಾರ ನದಾಫ್ ಸಮುದಾಯವು ಹತ್ತಿಯಿಂದ ಗಾದಿ, ಗುಡಾರ, ಹಗ್ಗ ತಯಾರಿಸಿ, ಕೂಲಿ ಕೆಲಸವನ್ನು ಮಾಡಿ ಉಪಜೀವನ ಮಾಡುವ ನಮ್ಮ ಆಲಮಾರಿ ಪಿಂಜಾರ್, ನದಾಫ್, ಮನ್ಸೂರಿ, ಇದೇ ಕುಲ ಜನಸಂಖ್ಯೆಗೆ ಹಾಗೂ ಹಿಂದುಳಿದ ಸಮಾಜವಾಗಿದ್ದರಿಂದ ಪ್ರಮುಖ ಬೇಡಿಕೆಯಾದ ಪಿಂಜಾರ ಅಭಿವೃದ್ಧಿ ನಿಗಮ, ಪ್ರವರ್ಗ-೧ ಜಾತಿ ಪ್ರಮಾಣ ಪತ್ರ ಗಾಜದಲ್ಲಿ ಎಲ್ಲ ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಪ್ರವರ್ಗ-೧ರ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ಹಾಗೂ ನಮ್ಮ ಸಮಾಜದ ಕುಲ ಕಸುಬು ಹಾಸಿಗೆ ಹೊಲಿಯುವ ಕೂಲಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್‌ಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಗಳಿಗಾಗಿ ಮಾ.೦೪ ರಂದು ಗುರುವಾರ ಬೆ.೧೦ಕ್ಕೆ ಬೆಂಗಳೂರಿನ ಸಂಗೋಳ್ಳಿರಾಯಣ್ಣ ರೈಲು ನಿಲ್ದಾಣದ ಆನಂದರಾವ್ ಸರ್ಕಲ್‌ನಲ್ಲಿರುವ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆವರೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಮಧ್ಯ ಕರ್ನಾಟಕದ ಅಧ್ಯಕ್ಷರಾದ ಎಂ.ರಾಜಾ ಸಾಬ್, ದಾದಪೀರ್,ಮುರ್ತಜಾಲಿ,ಟಿ.ಷಪೀವುಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು.