ಅಮೃತಾಪುರದಲ್ಲಿ ವಿಜ್ಞಾನಿಗಳಾದ ಶಾಲಾ ಮಕ್ಕಳು.
1 min readವಿಜ್ಞಾನಿಗಳಾದ ಶಾಲಾ ಮಕ್ಕಳು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೃತಾಪುರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ
ಹೊಳಲ್ಕೆರೆ : ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕ ಟಿ.ಪಿ.ಉಮೇಶ್ ರವರ ಪರಿಶ್ರಮದಲ್ಲಿ ರೂಪಗೊಂಡಿರುವ ಮಕ್ಕಳ ವಿಜ್ಞಾನ ಪ್ರಯೋಗಾಲಯದಲ್ಲಿ ಶಾಲಾ ವಿದ್ಯಾರ್ಥಿಗಳು ಸೂಕ್ಷ್ಮ ದರ್ಶಕದ ಮೂಲಕ ಸೂಕ್ಷ್ಮಜೀವಿಗಳ ವೀಕ್ಷಿಸುವ ಮೂಲಕ ಅರ್ಥಪೂರ್ಣವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಿದರು. ವಿದ್ಯಾರ್ಥಿಗಳು ವಿಜ್ಞಾನಿಗಳ ಜೀವನ ಚರಿತ್ರೆ ಓದುವ ಮೂಲಕ ವಿಜ್ಞಾನಕ್ಕೆ ಮಹನೀಯರ ಕೊಡುಗೆಗಳನ್ನು ದಿನವಿಡೀ ಸ್ಮರಿಸಿದರು.
ಮುಖ್ಯಶಿಕ್ಷಕರಾದ ಶ್ರೀ ಸಿದ್ಧಪ್ಪ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಲೋಕೇಶ್ವರಪ್ಪ ಸಹಶಿಕ್ಷಕಿ ಜಿ.ಎನ್. ರೇಷ್ಮ ದಿನಾಚರಣೆಯಲ್ಲಿ ಭಾಗಿಯಾದರು.