ಸ್ವಚ್ಛ ಭಾರತ್ ಮಿಷನ್ ಯೋಜನೆ: ಜಿಲ್ಲೆಗೆ ರೂ.7.37 ಕೋಟಿ ಅನುದಾನ ಬಿಡುಗಡೆ
1 min readಚಿತ್ರದುರ್ಗ,ಮಾರ್ಚ್03:
ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಚಿತ್ರದುರ್ಗ ಜಿಲ್ಲೆಗೆ ಒಟ್ಟು ರೂ.7.37 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಒಟ್ಟು ರೂ 6.29 ಕೋಟಿ ಅನುದಾನ ವೆಚ್ಚವಾಗಿದ್ದು, ಶೇ.78.86 ರಷ್ಟು ಪ್ರಗತಿಯಾಗಿದೆ.
ಸ್ವಚ್ಛ ಭಾರತ್ ಮಿಷನ್ ಕೇಂದ್ರ ಸರ್ಕಾರದ ಮಹತ್ವ ಪೂರ್ಣ ಯೋಜನೆಯಾಗಿದ್ದು, ಈ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಮೊಟ್ಟ ಮೊದಲ ಬಾರಿಗೆ 2014ರ ಅಕ್ಟೋಬರ್ 2 ರಂದು ದೆಹಲಿಯ ರಾಜ್ ಘಾಟ್‍ನಲ್ಲಿ ಆರಂಭಿಸಿದರು.
ಬಯಲು ಶೌಚ ನಿರ್ಮೂಲನೆ, ಮಲಹೊರುವ ಪದ್ಧತಿ ನಿರ್ಮೂಲನೆ, ಘನತ್ಯಾಜ್ಯ ನಿರ್ವಹಣೆ, ಮರುಬಳಕೆ, ಸಂಸ್ಕರಣೆ, ಹೀಗೆ ಒಟ್ಟಾರೆಯಾಗಿ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಪ್ರಗತಿ ವರದಿ: ಚಿತ್ರದುರ್ಗ ನಗರಸಭೆಗೆ ರೂ.1.64 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ.1.62 ಕೋಟಿ ವೆಚ್ಚವಾಗಿದೆ. ಶೇ. 98.78 ಪ್ರಗತಿಯಾಗಿದೆ. ಚಳ್ಳಕೆರೆ ನಗರಸಭೆಗೆ ರೂ.2,45 ಕೋಟಿ ಅನುದಾನ ಹಂಚಿಕೆಯಾಗಿದ್ದು, ಬಿಡುಗಡೆಯಾದ ಅಷ್ಷು ಮೊತ್ತ ವೆಚ್ಚವಾಗಿದೆ ಶೇ.100 ರಷ್ಟು ಪ್ರಗತಿಯಾಗಿದೆ. ಹಿರಿಯೂರು ನಗರಸಭೆಗೆ ರೂ.1.04 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ. 83 ಲಕ್ಷ ವೆಚ್ಚವಾಗಿದೆ ಶೇ.79.8ರಷ್ಟು ಪ್ರಗತಿಯಾಗಿದೆ. ಹೊಸದುರ್ಗ ಪುರಸಭೆಗೆ ರೂ. 68 ಲಕ್ಷ ಅನುದಾನ ಹಂಚಿಕೆಯಾಗಿದೆ, ಅದರಲ್ಲಿ ರೂ. 35 ಲಕ್ಷ ವೆಚ್ಚವಾಗಿದೆ ಶೇ 52.1 ರಷ್ಟು ಪ್ರಗತಿಯಾಗಿದೆ. ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ರೂ.26 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ. 21 ಲಕ್ಷ ವೆಚ್ಚವಾಗಿದೆ ಶೇ. 80.76 ರಷ್ಟು ಪ್ರಗತಿಯಾಗಿದೆ. ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಗೆ ರೂ. 56 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ. 33 ಲಕ್ಷ ವೆಚ್ಚವಾಗಿದೆ ಶೇ. 59.56ರಷ್ಟು ಪ್ರಗತಿಯಾಗಿದೆ. ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ರೂ. 77 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಬಿಡುಗಡೆಯಾದ ಅನುದಾನದಲ್ಲಿ ಶೇ.65.33ರಷ್ಟು ಪ್ರಗತಿಯಾಗಿದೆ. ಜಿಲ್ಲೆಗೆ ಒಟ್ಟು ರೂ. 7.37 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ರೂ.6.29 ಕೋಟಿ ವೆಚ್ಚವಾಗಿದ್ದು, ಶೇ. 78.86 ರಷ್ಟು ಪ್ರಗತಿ ಸಾಧಿಸಿದೆ.
ವೈಯಕ್ತಿಕ ಶೌಚಾಲಯ ಶೇ.95ರಷ್ಟು ಪ್ರಗತಿ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 12035 ಗುರಿ ಹೊಂದಲಾಗಿದ್ದು, ಇದರಲ್ಲಿ ಒಟ್ಟು 11546 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿದ್ದು, 489 ಶೌಚಾಲಯ ನಿರ್ಮಾಣ ಬಾಕಿ ಇದ್ದು, ಒಟ್ಟಾರೆಯಾಗಿ ಶೇ.95.93 ರಷ್ಟು ಪ್ರಗತಿ ಸಾಧಿಸಲಾಗಿದೆ.
ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ 2938 ವೈಯಕ್ತಿಕ ಶೌಚಾಲಯಗಳ ಗುರಿಯನ್ನು ಹೊಂದಿದ್ದು, ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ 3933 ಶೌಚಾಲಯಗಳ ಗುರಿ ಹೊಂದಿದ್ದು, ಅದರಲ್ಲಿ 3723 ಶೌಚಾಲಯಗಳ ಸಾಧನೆಯಾಗಿದೆ ಇನ್ನುಳಿದಂತೆ 200 ಬಾಕಿ ಇದೆ. ಶೇ. 94.66 ರಷ್ಟು ಪ್ರಗತಿಯಾಗಿದೆ. ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 1519 ವೈಯಕ್ತಿಕ ಶೌಚಾಲಯಗಳ ಗುರಿ ಹೊಂದಿದ್ದು, ಶೇ.100 ರಷ್ಟು ಪ್ರಗತಿಯಾಗಿದೆ. ಹೊಸದುರ್ಗ ಪುರಸಭೆ ವ್ಯಾಪ್ತಿಯಲ್ಲಿ 1075 ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಗುರಿ ಹೊಂದಿದ್ದು, ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 434 ವೈಯಕ್ತಿಕ ಶೌಚಾಲಯಗಳ ಗುರಿ ಹೊಂದಿದ್ದು, ಶೇ.100 ರಷ್ಟು ಪ್ರಗತಿಯಾಗಿದೆ. ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 981 ವೈಯಕ್ತಿಕ ಶೌಚಾಲಯಗಳ ಗರಿ ಹೊಂದಿದ್ದು, ಶೇ. 100 ರಷ್ಟು ಪ್ರಗತಿಯಾಗಿದೆ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1155 ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಗುರಿ ಹೊಂದಿದ್ದು, ಅದರಲ್ಲಿ 876 ಶೌಚಾಲಯಗಳು ಸಾಧನೆಯಾಗಿದೆ. ಇನ್ನು 279 ಬಾಕಿ ಉಳಿದಿದ್ದು ಶೇ. 75.84 ರಷ್ಟು ಪ್ರಗತಿಯಾಗಿದೆ.