ಯುವ ಕ್ರೀಡಾಪಟುವಿನ ಮನವಿಗೆ ಸ್ಪಂದಿಸಿ ಸಹಕಾರ ನೀಡಿದ ಸಚಿವ ಶ್ರೀರಾಮುಲು.
1 min readಮೊಳಕಾಲ್ಮುರು:ಯುವ ಕ್ರೀಡಾಪಟು ವಿರುಪಾಕ್ಷ ಎಂಬ ಯುವಕ ಒಲಂಪಿಕ್ ನಲ್ಲಿ ಭಾಗವಹಿಸಲು ಸಹಾಕಾರ ನೀಡಲು ಮಾಡಿದ ಮನವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಬಿ ಶ್ರೀರಾಮುಲು ತನ್ನ ವೈಯಕ್ತಿಕವಾಗಿ 25,000 /- ರೂಗಳನ್ನು, ಧನಸಹಾಯ ನೀಡಿದ್ದಾರೆ, ವಿರೂಪಾಕ್ಷ ಬಿನ್ ಪಾಲಯ್ಯ ತಳವಾರಹಳ್ಳಿ ಗ್ರಾಮ ಮೊಳಕಾಲ್ಮೂರು ತಾಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪಂಜಾಬಿನ ಪಾಟಿಯಾಲ ಮತ್ತು ಸಂಗೋರ ನಲ್ಲಿ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ಇಂಡಿಯನ್ ಗ್ರಾಂಡ್ ಫಿಕ್ಸ್ (ಐಜಿಪಿ 1 ಐಜಿಪಿ 2) ಸ್ಪರ್ಧೆಯ 1500 ಮೀಟರ್ 5000 ಮೀಟರ್ ಓಟ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆಯಾಗಿದ್ದು ಇದನ್ನು ಸಚಿವರ ಗಮನಕ್ಕೆ ಬಂದ ಕೂಡಲೇ 25 ಸಾವಿರ ರೂಗಳನ್ನು ನೀಡಿದ್ದಾರೆ, ಪಂಜಾಬಿನ ಪಟಾಯನಲ್ಲಿ ಕ್ರೀಡಾಕೂಟದಲ್ಲಿ ಆಯ್ಕೆಯಾದರೆ ಮುಂದಿನ ಅಂತರಾಷ್ಟ್ರೀಯ ಮಟ್ಟದ ತೆರಳಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಚಿವ ಬಿ ಶ್ರೀರಾಮುಲು ಅವರು ದೂರವಾಣಿ ಮುಖಾಂತರ ತಿಳಿಸಿದ್ದಾರೆ, ಈ ಸಂದರ್ಭದಲ್ಲಿ ಬಿಜೆಪಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾದ ಡಾ. ಪಿ ಎಮ್ ಮಂಜುನಾಥ್, ಸಚಿವರ ಆಪ್ತ ಸಹಾಯಕರಾದ ಪಾಪೇಶ್ ನಾಯಕ, ಬಿಜೆಪಿ ಮುಖಂಡರಾದ ಶಾಂತರಾಮ್, ತುಮಕೂರ್ಲಹಳ್ಳಿ, ಮಂಜುನಾಥ್, ಭರತ್, ಇನ್ನು ಮುಂತಾದವರು ಇದ್ದರು.