September 16, 2024

Chitradurga hoysala

Kannada news portal

ಕಬೀರಾನಂದಾಶ್ರಮದಲ್ಲಿ ಮಾ.7 ರಿಂದ ಆರು ದಿನಗಳ ಶಿವರಾತ್ರಿ ಮಹೋತ್ಸವ.

1 min read

ವರದಿ: ಸುರೇಶ್ ಪಟ್ಟಣ್ ಚಿತ್ರದುರ್ಗ ಫೆ. ೦೫: ನಗರದ ಶ್ರೀ ಕಬೀರಾನಂದಾಶ್ರಮದ ವರ್ಷಾಚರಣೆಯಾದ ೯೧ನೇ ಮಹಾ ಶಿವರಾತ್ರಿ ಮಹೋತ್ಸವವೂ ಫೆ. ೦೭ ರಿಂದ ೧೨ರವರೆಗೆ ಶ್ರೀಮಠದ ಆವರಣದಲ್ಲಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ ನಡೆಯಲಿದ್ದು ಮಾ. ೧೧ ರಂದು ಆರೂಢಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ಆಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಆಶ್ರಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಫೆ. ೦೭ ರಿಂದ ಪ್ರಾರಂಭವಾಗಿ ಫೆ. ೧೨ರವರೆಗೆ ವಿವಿಧ ರೀತಿಯ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ, ಕಳೆದ ೯೦ ವರ್ಷದಿಂದ ಶಿವರಾತ್ರಿ ಮಹೋತ್ಸವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಇದ್ದ ಮಹೋತ್ಸವ ಇತ್ತೀಚೀನ ದಿನದಲ್ಲಿ ಭಕ್ತಾಧಿಗಳ ಸಹಕಾರದಿಂದ ಬೃಹತ್ ಆಗಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಪ್ರತಿ ದಿನ ಸಂಜೆ ವಿವಿಧ ಮಠಾಧೀಶರಿಂದ ಜ್ಞಾನವನ್ನು ನೀಡುವ ಸಂದೇಶಗಳು, ಸನ್ಮಾನ ಮತ್ತು ನಾಟಕ, ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಸಿದ್ದಾರೂಢರ ಸಂಕಲ್ಪದಂತೆ ಪ್ರತಿ ವರ್ಷವೂ ಮಹಾಶಿವರಾತ್ರಿ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ನಾಳೆಯಿಂದ ೧೨ ರವರೆಗೆ ಆರು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಸಂತರು, ಸಾಹಿತಿಗಳು, ವಿದ್ವಾಂಸರು, ಕಲಾವಿದರು, ರಾಜಕಾರಣಿಗಳು ಆಗಮಿಸಲಿದ್ದಾರೆ. ಮಾಘ ಮಾಸದಲ್ಲಿ ಬರುವ ಶಿವರಾತ್ರಿ ಮಹೋತ್ಸವ ಅತ್ಯಂತ ಪಾವನವಾದುದು. ಎಷ್ಟೋ ರಾತ್ರಿಗಳನ್ನು ಕಳೆಯುವುದು ಮುಖ್ಯವಲ್ಲ. ಮಹಾಶಿವರಾತ್ರಿಯಂದು ರಾತ್ರಿಯಿಡಿ ಶಿವನನ್ನು ಧ್ಯಾನಿಸುವುದು ಪವಿತ್ರವಾದುದು. ಹಿಂದಿನ ಕಾಲದಲ್ಲಿ ಋಷಿಮುನಿಗಳು ಸದ್ಗತಿಗಳನ್ನು ಹೇಳುತ್ತಿದ್ದರು. ಕಬೀರಾನಂದ ಸ್ವಾಮಿಗಳು ಇಲ್ಲಿಗೆ ಬಂದಿದ್ದೆ ಗೋಶಾಲೆ ಆರಂಭಿಸುವುದಕ್ಕಾಗಿ ಆದ್ದರಿಂದ ಕಾತ್ರಾಳು ಸಮೀಪ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ್ ಶ್ರೀಗಳು ಗೋಶಾಲೆಯನ್ನು ನಿರ್ಮಿಸಿ ಜಾನುವಾರುಗಳಿಗೆ ಮೇವು ನೀರು ಒದಗಿಸುವ ಕೆಲಸ ಪ್ರಾರಂಭಿಸಿದ್ದು ಇದು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಗೋಸಂಪತ್ತಿಗಿಂತ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಯಾಂತ್ರಿಕ ಉಪಕರಣದ ಮೇಲೆ ಇಂದಿನ ಕೃಷಿ ಂತಿರುವುದರಿಂದ ಜಾನುವಾರುಗಳನ್ನು ಬಳಸುವವರೆ ಕಡಿಮೆಯಾಗಿದ್ದಾರೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅದಕ್ಕಾಗಿ ೨೦೦೬ ರಲ್ಲಿ ಗೋಶಾಲೆ ನಿರ್ಮಿಸಿ ಅನೇಕ ಜಾನುವಾರುಗಳನ್ನು ಸಲಹಲಾಗುತ್ತಿದೆ. ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷ ನಗರಸಭೆ ಸದಸ್ಯ ವೆಂಕಟೇಶ್ ಇದ್ದರು..

About The Author

Leave a Reply

Your email address will not be published. Required fields are marked *