September 16, 2024

Chitradurga hoysala

Kannada news portal

ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಹಣಿಯಾಗಿ: ಜೆ.ವೈಶಾಲಿ

1 min read

ವಿಶೇಷ ಲೇಖನ: ವೈಶಾಲಿ.ಜೆ. ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಚಿತ್ರದುರ್ಗ ಜಿಲ್ಲೆ

ರಾಷ್ಟ್ರೀಯ ಮಹಿಳಾ ದಿನಾಚರಣೆ:

ಬದುಕಿನ ಪಯಣದ ಹಾದಿಯಲ್ಲಿ ಮಹಿಳೆಯರು ಎಲ್ಲಾ ಸ್ವೀಕರಿಸಲು ಸಿದ್ದವಾಗಿರಿ. ನಮ್ಮ ಜೀವನ ರೂಪಿಸಿಕೊಳ್ಳುವ ಎಲ್ಲವೂ ಸಹ ನಮ್ಮ ಕೈಯಲಿರುತ್ತದೆ. ನಮ್ಮ ಬದುಕು ನಾವು ಕಟ್ಟಿಕೊಳ್ಳಬೇಕು. ಪರರ ಮೇಲೆ ಎಂದು ಅವಲಂಬನೆಯಾಗದೆ ಬದುಕು ಬಂಡಿ ಸಾಗಿಸುವ ಗುಣ ಬೆಳೆಸಿಕೊಳ್ಳಿ ಪ್ರಸ್ತುತ ಸಮಾಜದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿ ಪುರುಷನಿಗೆ ಸಮಾನಳಾಗಿ ನಿಂತಿದ್ದಾಳೆ. ಕ್ರೀಡೆ, ಸಿನಿಮಾ, ರಾಜಕೀಯ, ಸಾಮಾಜಿಕ, ಸೇನೆ, ಉದ್ಯಮ ಹೀಗೆ ಎಲ್ಲಾ ವಿಭಾಗಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ‘ಮಹಿಳೆ ಅಡುಗೆ ಮನೆಗಷ್ಟೇ’ ಎಂಬ ಪುರುಷ ದಬ್ಬಾಳಿಕೆ ಮೀರಿ ತಾನು ಆಡಳಿತವನ್ನು ನಡೆಸಬಲ್ಲೆ ಎಂದುದನ್ನು ಸಾಧಿಸಿ ತೋರಿಸಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗಿಂತಲು ಮಿಗಿಲು ಎಂಬುದನ್ನು ಆಗಾಗ ಸಾಬೀತು ಮಾಡುತ್ತಲೇ ಇದ್ದಾಳೆ.

ಇಂದು ಭಾರತದ ಮಹಿಳೆಯರು ಎಷ್ಟು ಸ್ಟ್ರಾಂಗ್‌ ಆಗಿದ್ದಾರೆ? ಸಾಮಾಜಿಕ ಪಿಡುಗನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ಮಹಿಳೆಯ ಸಬಲೀಕರಣಗೊಳ್ಳುತ್ತಿದ್ದಾರೆ . ಇಂದು ಮಹಿಳೆ ಒಂಟಿಯಾಗಿ ಮಾರುಕಟ್ಟೆ, ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದಾಳೆ, ಇಷ್ಟವಾದ ಸ್ಥಳಗಳಿಗೆ ಪ್ರವಾಸ ಹೋಗುತ್ತಿದ್ದಾಳೆ, ಟ್ರೆಕ್ಕಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾಳೆ, ಯಾರ ಮೇಲೂ ಅಲಂಬಿತಳಾಗದೆ ಸ್ವತಂತ್ರ ಬದುಕನ್ನು ಸಾಗಿಸುತ್ತಿದ್ದಾಳೆ. ಇದು ಮಹಿಳೆಯರಿಗಷ್ಟೇ ಅಲ್ಲ, ಭಾರತಕ್ಕೆ ಸಂದ ಜಯ ಎಂದರೆ ತಪ್ಪಗಲಾರದು.

ಮಹಿಳಾ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಮಹಿಳೆಯ ದೇಹದ ಮೇಲೆ ದಬ್ಬಾಳಿಕೆ ನಡೆಸದೆ, ಆಕೆಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಪ್ರತಿಯೊಂದು ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂಬುದು ಸತ್ಯ, ಆದರ ಜೊತೆಯಲ್ಲಿ ಗಂಡು ಮಕ್ಕಳು ಸಹ ಹೆಣ್ಣಿನ ಬೆಳವಣಿಗೆಯಲ್ಲಿ ಸಹಕಾರಿಯಾಗಿರುತ್ತಾರೆ. ಹೆಣ್ಣಿಗೆ ಗಂಡು ಸವಾರಿ ಮಾಡದೆ ಸಹಕಾರದಿಂದ ಇಬ್ಬರು ಸಂತೋಷದಿಂದ ಇರಲು ಸಾಧ್ಯ.

ಮಹಿಳೆಯರು ಯಾವಗಲೂ‌ ಆತ್ಮವಿಶ್ವಾಸದಿಂದ. ಬದುಕನ್ನು ಸಾಗಿಸಬೇಕು. ಜೀವನದಲ್ಲಿ ಸಂತೋಷ ಮತ್ತು ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೆಣ್ಣು ಹೊಂದಿರಬೇಕು.ಒಂದು ಹೆಣ್ಣು ಮನೆಯ ಸಮತೋಲನವನ್ನು ಕಾಪಡಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿರುವುದು ಅನೇಕ ಉದಾಹರಣೆ ಮೂಲಕ ನಾವು ನೋಡಬಹುದು.

ಮಹಿಳೆಯ ದಿನಾಚರಣೆ ಶುಭಾಷಯಗಳನ್ನು ತಿಳಿಸುತ್ತ ಪ್ರತಿಯೊಂದು ಮಹಿಳೆಯು ಸಹ ತನ್ನ ಬೆಳವಣಿಗೆ ಮತ್ತು ಸಮಯ ಸಂದರ್ಭವನ್ನು ಅರಿತು ಬದುಕಿನ‌ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ನಿರ್ಧಾರಗಳು ಅಚಲವಾಗಿರಲಿ. ಒಂದು ನಿರ್ಧಾರ ಬದುಕಿನಲ್ಲಿ ಎಲ್ಲಾವನ್ನು ಬದಲಾವಣೆ ಮಾಡುವ ಶಕ್ತಿ ಇದೆ ಎಂದು ಅರಿತುಕೊಳ್ಳಿ ನಾವೆಲ್ಲರೂ ನಡೆಯೋಣ..

About The Author

Leave a Reply

Your email address will not be published. Required fields are marked *