ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದ ಎಲ್ಲಿ ಗೊತ್ತೆ?
1 min readಚಿತ್ರದುರ್ಗ ಮಾ. ೦೬
ಅಕ್ಕನ ಮೇಲೆ ಸದಾ ಅನುಮಾನ ಪಡುತ್ತಿದ್ದ ಭಾವನ ವರ್ತನೆಯಿಂದ ಬೇಸತ್ತ ಅಪ್ರಾಪ್ತ ಬಾಮೈದ ತನ್ನ ಭಾವನ ಕಿವಿಯನ್ನೇ ಕಚ್ಚಿ ತುಂಡರಿಸಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ.
ಮೈಲಾರಿ (೩೯) ಭಾಮೈದನಿಂದ ಹಲ್ಲೆಗೊಳಗಾಗಿ ಕಿವಿಯನ್ನೇ ಕಳೆದುಕೊಂಡ ವ್ಯಕ್ತಿ. ಮೈಲಾರಿ ತನ್ನ ಪತ್ನಿಯನ್ನು ಅನುಮಾನಿಸುತ್ತಿದ್ದನಲ್ಲದೇ ಹಲವು ಬಾರಿ ತನ್ನ ಪತ್ನಿ ಬೇರೆಯವರ ಜೊತೆ ಓಡಾಡುತ್ತಿದ್ದಾಳೆ ಎಂದು ಆರೋಪಿಸುತ್ತಿದ್ದ. ಇದೇ ಕಾರಣಕ್ಕಾಗಿ ಪತಿ-ಪತ್ನಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.
ಇದರಿಂದ ಬೇಜಾರಾದ ಬಾಮೈದ ತನ್ನ ಭಾವನ ಮೇಲೆ ಹಲ್ಲೆ ನಡೆಸಿದ್ದಾನೆ ಮಾತ್ರವಲ್ಲ ಆತನ ಕಿವಿಯನ್ನೇ ತುಂಡರಿಸಿದ್ದಾನೆ. ತನ್ನ ತುಂಡಾದ ಕಿವಿಯನ್ನು ಬಾಟಲ್‌ನಲ್ಲಿ ತಂದಿರುವ ಮೈಲಾರಿ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.