ಕಂಚೋ ಬಲೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿಗೆ ೧ ಲಕ್ಷದ ಡಿಡಿ ವಿತರಣೆ.
1 min readಚಿತ್ರದುರ್ಗ : ಮಾ ೦೬
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಮುದ್ದಾಪುರ ಗ್ರಾಮದ ದೇವಸ್ಥಾನವಾದ ಕಂಚೋ ಬಲೇಶ್ವರ ದೇವಸ್ಥಾನಕ್ಕೆ ಸಿರಿಗೆರೆ ಯೋಜನಾಧಿಕಾರಿಳಾದ ಪ್ರವೀಣ್ ಎ ಜಿ ರವರು ೧ ಲಕ್ಷ ಮೊತ್ತದ ಡಿಡಿ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಕಂಚು ಓಬಳೇಶ್ ಅಯ್ಯನವರು ಮುದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ ಓಬಳೇಶ್ ಅವರು ಬಿಜೆಪಿ ಮುಖಂಡರಾದ ಮಂಜುನಾಥ್ ಮೇಲ್ವಿಚಾರಕರಾದ ಮಂಜುನಾಥ್ ಎನ್ ಸೇವಾ ಪ್ರತಿನಿಧಿಗಳು ರೂಪ ಮಹಾಲಕ್ಷ್ಮಿ ಒಕ್ಕೂಟದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮತ್ತು ಗುರು ಮಲ್ಲೇಶಣ್ಣ ಸ್ವಸಹಾಯ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ರೇವಣಸಿದ್ದಪ್ಪ ನವರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂಘಗಳಿಂದ ಆಗುತ್ತಿರುವ ಅನುಕೂಲಗಳು ಉದ್ದೇಶಿಸಿ ಮಾತನಾಡಿ ಸ್ವ ಸಹಾಯ ಸಂಘದ ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು, ಕೃಷಿ ಚಟುವಟಿಕೆಗಳನ್ನು ಮಾಡಲು ನೇರವಾಗಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಜನರ ಜೀವನ ಮಟ್ಟ ಸುಧಾರಿಸಿದೆ, ಬರಪೀಡಿತ ವಾಗಿದ್ದರು ಸ್ವ ಸಹಾಯ ಸಂಘಗಳನ್ನು ಮಾಡಿ ಕುರಿ/ಆಡು , ಹಸು,ಮಿನಿ ಡೈರಿ ಮಾಡುವುದರ ಮೂಲಕ ಜನರು ಬದುಕು ಕಟ್ಟಿ ಕೊಂಡಿದ್ದಾರೆ. ಎಂದು ತಿಳಿಸಿದರು.