March 3, 2024

Chitradurga hoysala

Kannada news portal

ರಾಜಹುಲಿ ಬಜೆಟ್ ನ ಹೆಡ್ ಲೈನ್ಸ್ ನಲ್ಲಿ ಏನಿದೇ ನೋಡಿ.

1 min read

ಕರ್ನಾಟಕ ಬಜೆಟ್-2021: ಮುಖ್ಯಾಂಶಗಳು

►ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನnull

►ಎಸ್ ಎಲ್ ಭೈರಪ್ಪನವರ ಪರ್ವ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ರೂ. ಮೀಸಲು

►ಮುಂದಿನ ಐದು ವರ್ಷದಲ್ಲಿ 43 ಸಾವಿರ ನೇರ ಉದ್ಯೋಗ ಸೃಷ್ಟಿ.

►ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ

►ರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ 43 ಸಾವಿರ ನೇರ ಉದ್ಯೋಗ ಸೃಷ್ಟಿ

►ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ, ಖಾಸಗಿ ಸಹಭಾಗಿತ್ವದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ

► ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ.

►60 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯವುಳ್ಳ ಮತ್ತು 10 ತಾಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮರ್ಥ್ಯವುಳ್ಳ ಐಸಿಯು ಸೌಲಭ್ಯ

►ಮಂಗಳೂರು- ಪಣಜಿ ಜಲಮಾರ್ಗ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿ

►ರೈಲ್ವೆ ಯೋಜನೆಗಳಿಗೆ 3,991 ಕೋಟಿ ರೂಪಾಯಿ ಅನುದಾನ

►ರೈಲ್ವೆ ಯೋಜನೆಗಳ ಭೂಸ್ವಾಧಿನಕ್ಕಾಗಿ 2,260 ಕೋಟಿ ರೂಪಾಯಿ.

►ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಗೆ 150 ಕೋಟಿ. ರೂ.

►ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ ರೂ., ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ. ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ.

► ಕುರಿಗಾಹಿಗಳಿಗೆ ನೆರವಾಗುವ ‘ ಅನುಗ್ರಹ’ ಯೋಜನೆ ಮತ್ತೆ ಮುಂದುವರಿಕೆ

► ಉಪ್ಪಿನಕಾಯಿ ಮಾರುವ ಮಹಿಳೆಯರಿಗೆ 25 ಸಾವಿರ ರೂ. ಸಹಾಯಧನ

► ಕರಾವಳಿ ಭದ್ರತಾ ಪಡೆ ತಂತ್ರಜ್ಞಾನ ಅಭಿವೃದ್ದಿಗೆ ಎರಡು ಕೋಟಿ. ರೂ.

►ಬೆಂಗಳೂರಿನ ಮೂರು ಕಡೆ ಮೇಲ್ಸೇತವೆ ನಿರ್ಮಾಣ

►ಸರಕಾರಿ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಶಸ್ತ್ರಚಿಕಿತ್ಸೆ

►ಬಿಎಂಟಿಸಿ ಮತ್ತು ನಮ್ಮ ಮೆಟ್ರೋಗೆ ಒಂದೇ ರೀತಿಯ ಸ್ಮಾರ್ಟ್‌ ಟಿಕೆಟ್‌

►ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗೆ ಕೇಂದ್ರಗಳ ಆರಂಭ

►ಕಟ್ಟಡ ಕಾರ್ಮಿಕರಿಗಾಗಿ 25 ಸಂಚಾರಿ ಆರೋಗ್ಯ ಕೇಂದ್ರ ಸ್ಥಾಪನೆ

►ರಾಜ್ಯದ ಎಂಟು ಜೈಲುಗಳ ಸಾಮರ್ಥ್ಯ ಹೆಚ್ಚಿಸಲು ಅನುದಾನ

► ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ

► ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ 10ರಷ್ಟು ಮೀಸಲಾತಿ

► ಬೆಂಗಳೂರಿನ ಹೆಸರಘಟ್ಟದಲ್ಲಿ  ಥೀಮ್‌ ಪಾರ್ಕ್‌ ನಿರ್ಮಾಣ

►ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಆದ್ಯತೆ

►ಮಹದಾಯಿ ಯೋಜನೆಗೆ 1677ಕೋಟಿ ರೂ. ಅನುದಾನ

►ಜೈನ ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ 50ಕೋಟಿ ರೂ.

►ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳ ಸ್ಮೃತಿ ವನ ಸ್ಥಾಪಿಸಲು 2 ಕೋಟಿ ರೂ. ಅನುದಾನ

► ತ್ರಾಸಿ, ಮರವಂತೆ, ಒತ್ತಿನೆಣೆ, ಸೋಮೇಶ್ವರ ಕಡಲ ತೀರ ಅಭಿವೃದ್ದಿಗೆ 10 ಕೋಟಿ ರೂ.

► ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ 500ಕೋಟಿ ರೂ. ಮೀಸಲು

► ಮ್ಯೂಸಿಯಂ ನಿರ್ಮಾಣಕ್ಕೆ 2ಕೋಟಿ ರೂ. ಅನುದಾನ

►2.5ಕೋಟಿ ರೂ. ವೆಚ್ಚದಲ್ಲಿ ತಾಯಂದಿರ ಎದೆಹಾಲು ಬ್ಯಾಂಕ್‌ ನಿರ್ಮಾಣ

►ಗೋ ಹತ್ಯೆ ತಡೆಯಲು, ಗೋವುಗಳನ್ನು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ

►ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2ಕೋಟಿ ರೂ.

►ಕೃಷಿ ಸಿಂಚಾಯ್‌ ಯೋಜನೆಗೆ 831ಕೋಟಿ ರೂ.

►ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಲ್ಲಿ ಅಡಿಕೆ ಮರಗಳಿಗೆ ಹಳದಿ ರೋಗ ಬಾಧಿಸಿರುವುದರ ಸಂಶೋಧನೆಗೆ 25ಕೋಟಿ ರೂ. 

►ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2ಕೋಟಿ ರೂ.

►ನೂತನ 52 ಬಸ್‌ ನಿಲ್ದಾಣಗಳ ನಿರ್ಮಾಣ

►ಕ್ರಿಶ್ಚಿಯನ್‌ ಸಮುದಾಯದ ಅಭಿವೃದ್ಧಿಗೆ 200ಕೋಟಿ ರೂ.

►ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ ರೂ. ಮೀಸಲು

►ಗರ್ಭಿಣಿಯರ ಸ್ಕ್ಯಾನಿಂಗ್‌ ಉತ್ತೇಜನಕ್ಕೆ 10ಕೋಟಿ ರೂ.ಯ ಚಿಗುರು ಕಾರ್ಯಕ್ರಮ

►ಮುಖ್ಯಮಂತ್ರಿಗಳ ಮೇಲ್ವಿಚಾರಣೆಯಲ್ಲಿ ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಕಾರ್ಯಕ್ರಮಗಳ ಪ್ರಾರಂಭ

►ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಸಲು ʼಎಲಿವೇಟ್‌ ವುಮನ್ʼ‌ ಎಂಬ ಕಾರ್ಯಕ್ರಮ ಜಾರಿಗೆ. 

►ಮಹಿಳಾ ಉದ್ಯೋಗಿಗಳಿಗೆ 6 ತಿಂಗಳ ಪ್ರಸೂತಿ ರಜೆ

►ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ಗಸ್ತು  ತೀವ್ರಗೊಳಿಸಲಾಗುವುದು

► ಒಕ್ಕಲಿಗರ ಅಭಿವೃದ್ದಿ ನಿಗಮಕ್ಕೆ 500 ಕೋಟಿ. ರೂ

► ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.

► ಫ್ಲ್ಯಾಟ್ ಗಳ ಮುದ್ರಾಂಕ ಶುಲ್ಕದಲ್ಲಿ ಇಳಿಕೆ

►ಶಾಲಾ ಕಾಲೇಜುಗಳ ಶೌಚಾಲಯ ಅಭಿವೃದ್ಧಿಗೆ 100 ಕೋಟಿ. ರೂ ಅನುದಾನ

►ಸ್ಮಾರ್ಟ್ ಕ್ಲಾಸ್ ರೂಮುಗಳಿಗಾಗಿ 50 ಕೋಟಿ ರೂ

►ಫಸಲ್ ಭೀಮಾ ಯೋಜನೆಗೆ 900 ಕೋಟಿ ರೂ.

►ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ

►ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ವನಿತಾ ಸಂಗಾತಿ ಬಸ್ ಪಾಸ್ ವ್ಯವಸ್ಥೆ.

►2 ಕೋಟಿ ರೂ.ವರೆಗೆ 4% ಬಡ್ಡಿದರದಲ್ಲಿ ಮಹಿಳಾ ಉದ್ಯಮಿಗಳಿಗೆ ಸಾಲ

► ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸಲು ನಮ್ಮ ಸರ್ಕಾರ ಪ್ರಯತ್ನಿಸಿದೆ: ಸಿಎಂ ಯಡಿಯೂರಪ್ಪ

►ಒಟ್ಟು 2.5 ಲಕ್ಷ ಕೋಟಿ ರೂ.ಯ ರಾಜ್ಯ ಬಜೆಟ್

►ಬಜೆಟ್ ಮಂಡನೆಯ ಪ್ರಾರಂಭದಲ್ಲೇ ಕಾಂಗ್ರೆಸ್ ನಿಂದ ತೀವ್ರ ವಿರೋಧ.

►ಸದನದಲ್ಲಿ ಗದ್ದಲ”ಸರಕಾರವು ಅನೈತಿಕವಾಗಿದೆ. ಸರಕಾರಕ್ಕೆ ಬಜೆಟ್ ಮಂಡಿಸುವ ಹಕ್ಕಿಲ್ಲ. ನಾವು ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟಿಸುತ್ತಿದ್ದೇವೆ”: ಸಿದ್ದರಾಮಯ್ಯ ಹೇಳಿಕೆ, ಸದನದಿಂದ ಹೊರನಡೆದ ಕಾಂಗ್ರೆಸ್‌ ಸದಸ್ಯರು

►ಬಜೆಟ್ ಮಂಡನೆ ಭಾಷಣವನ್ನು ಪ್ರಾರಂಭಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. 

About The Author

Leave a Reply

Your email address will not be published. Required fields are marked *