October 16, 2024

Chitradurga hoysala

Kannada news portal

ರೈತರ ಅಭಿವೃದ್ಧಿ 31,021 ಕೋಟಿ ರೂಪಾಯಿ ಮೀಸಲು.

1 min read

ಕರ್ನಾಟಕ ಬಜೆಟ್‌-2021ರಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ಹೊಸ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ಕೃಷಿ ವಲಯಕ್ಕೆ ಈ ಬಾರಿಯ ಪ್ರಮುಖ ಯೋಜನೆಗಳು

  • *’ಸಿಂಗೇನ ಅಗ್ರಹಾರದಲ್ಲಿ ಹಣ್ಣು ಮಾರುಕಟ್ಟೆ ನಿರ್ಮಾಣ
  • *ಚಾಮಾರಾಜನಗರದಲ್ಲಿ ಅರಿಶಿನ ಮಾರುಕಟ್ಟೆ ನಿರ್ಮಾಣ
  • *ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ ಸ್ಥಾಪನೆ
  • *ಉತ್ತರ ಕರ್ನಾಟಕದ 6 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಒದಗಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಜಾರಿಗೆ ಯೋಜನೆ ಕೈಗೊಳ್ಳಲಾಗಿದೆ.
  • *ತುಮಕೂರು, ಚಿಕ್ಕಬಳ್ಳಾಪು, ಬೆಂಗಳೂರು ನಗರ ಕೆರೆಗಳಿಗೆ ನೀರು ಹರಿಸುವ ಯೋಜನೆಗಳು.
  • *ರಾಜ್ಯದ ಎಲ್ಲ ಏತ ನೀರಾವರಿ ಯೋಜನೆಗಳ ಸೂಕ್ತ ನಿರ್ವಹಣೆಗೆ ಯೋಜನೆ.
  • *ಏತ ನೀರಾವರಿ ಮೂಲಕ ರಾಜ್ಯದ 5 ಲಕ್ಷ ಹೆಕ್ಟೇರ್‌ ಭೂಮಿಗೆ ಹೆಚ್ಚುವರಿ ನೀರಾವರಿ ಒದಗಿಸುವ ಗುರಿ.
  • ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಯೋಜನೆ.

About The Author

Leave a Reply

Your email address will not be published. Required fields are marked *