ಹನಿ ಹನಿ ನೀರು ಅಮೂಲ್ಯ ದುರ್ಬಳಕೆ ಮಾಡಬೇಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ ಮಾ. ೦೮
ನೀರನ್ನು ಯಾವುದೇ ರೀತಿಯಿಂದಲೂ ದುರ್ಬಳಕೆ ಮಾಡದೇ ಸದುಪಯೋಗವನ್ನು ಮಾಡಿ ನೀರು ಅತಿ ಅಮೂಲ್ಯವಾದ ವಸ್ತುವಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ನಗರದ ಚಳ್ಳಕೆರೆ ರಸ್ತೆಯ ವಸಂತ ನಗರದಲ್ಲಿ sಸೋಮವಾರ ನಗರಕ್ಕೆ ವಾಣಿವಿಲಾಸ ಸಾಗರದ ಕುಡಿಯುವ ನೀರಿನ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ದಿನಮಾನದಲ್ಲಿ ನೀರು ಅತಿ ಮುಖ್ಯವಾದ ವಸ್ತುವಾಗಿದೆ, ಇದನ್ನು ಮಿತವಾಗಿ ಬಳಕೆ ಮಾಡಬೇಕಿದೆ. ಈ ಬಡಾವಣೆ ಖಾಸಗಿಯವರದ್ದಾಗಿದ್ದು, ಇಲ್ಲಿನ ನಿವಾಸಿಗಳಿಗೆ ವಿ.ವಿ.ಸಾಗರದ ನೀರು ಇರಲಿಲ್ಲ ಇವರು ನಗರಸಭೆಗೆ ನೀರಿನ ತೆರಿಗೆಯನ್ನು ಕಟ್ಟಿದ್ಧಾರೆ ಇವರಿಗೆ ಈಗ ನೀರನ್ನು ನೀಡಲಾಗಿದೆ ಎಂದರು.
ಈ ಭಾಗದಲ್ಲಿ ಉತ್ತಮವಾದ ರಸ್ತೆಗಳು ಇಲ್ಲ ಇಲ್ಲಿ ಸಿ.ಸಿ. ರಸ್ತೆಯನ್ನು ನಿರ್ಮಾಣ ಮಾಡಬೇಕಿದೆ ಇದಕ್ಕೆ ಲಕ್ಷಾಂತರ ರೂ. ವೆಚ್ಚವಾಗಲಿದೆ ಇದರಿಂದ ಮುಂದಿನ ಸಾಲಿನಲ್ಲಿ ಇದರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗವುದು ಎಂದು ತಿಳಿಸಿದ ಶಾಸಕ ತಿಪ್ಪಾರೆಡ್ಡಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ತಾರಕೇಶ್ವರಿ, ಪೌರಾಯುಕ್ತರಾದ ಹನುಮಂತರಾಯ್, ಇಂಜಿನಿಯರ್ ಕಿರಣ್, ಬಡಾವಣೆಯ ಮುಖಂಡರಾದ ನಾಯ್ಡು, ಕಿರಣ್ ರೆಡ್ಡಿ, ಜಗದೀಶ್, ಮಾರುತಿ, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.