ಜನ ಬಯಸಿದ್ದು ಸರ್ಕಾರಿ ಮೆಡಿಕಲ್ ಕಾಲೇಜು, ಖಾಸಗಿ ಸಹಭಾಗಿತ್ವದ್ದಲ್ಲ: ನೂಲೆನೂರು ಶಂಕರಪ್ಪ
1 min readಬಜೆಟ್ ಮಾತು
ಚಿತ್ರದುರ್ಗ: ಜಿಲ್ಲೆಯ ಜನ ಬಯಸಿದ್ದು ಸರ್ಕಾರಿ ಮೆಡಿಕಲ್ ಕಾಲೇಜು,ಸರ್ಕಾರ ಕೊಟ್ಟಿದ್ದುಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು,ಇದು ಜನರ ಸೋಲು ಅಲ್ಲ ಬದಲಾಗಿ ಆಯ್ಕೆ ಅದ ಜನಪ್ರತಿನಿಧಿಗಳ ಸೋಲು.ಸರ್ಕಾರ ಪರಿಷ್ಕೃತ ಬಡ್ಜೆಟ್ ನಲ್ಲಿ ಜಿಲ್ಲಾ ಖನಿಜ ನಿಧಿಯನ್ನು ಬಳಸಿಕೊಂಡು ಸರ್ಕಾರಕ್ಕೆ ಆರ್ಥಿಕ ಹೊರೆ ಆಗದಂತೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲಿ ತನ್ಮೂಲಕ ಬಡ ಜನರ ಆರೋಗ್ಯ ರಕ್ಷಣೆ ಮಾಡಲಿ. ಈಗಾಗಲೆ ಖಾಸಗಿ ಮೆಡಿಕಲ್ ಕಾಲೇಜು ಚಿತ್ರದುರ್ಗದಲ್ಲಿ ಇದ್ದು,ಇನ್ನೊಂದು ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜ್ ತೆರೆದರೆ ಬಡವರಿಗೆ ಆಗುವ ಅನುಕೂಲ ಏನು ಎಂದು ರೈತ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ ಸರ್ಕಾರವನ್ನು ಪ್ರಶ್ನಿಸಿದ್ದಾರೆ.