ಕೇಂದ್ರ ಸರ್ಕಾರದ ಕಾನೂನುಗಳು ರೈತ ವಿರೋಧಿಯಾಗಿವೆ:ರಾಕೇಶ್ ಟಿಕಾಯಿತ್
1 min readಕೇಂದ್ರ ಸರ್ಕಾರ ವಿರುದ್ಧ ಬಹಳಷ್ಟು ದಿನ ರೈತ ಚಳವಳಿ ನಡೆಯುತ್ತದೆ : ರಾಕೇಶ್ ಟಿಕಾಯಿತ್ ಹೇಳಿಕೆ.
ಹಿರಿಯೂರು : ಕಳೆದ ನಾಲ್ಕು ತಿಂಗಳುಗಳಿಂದ ರೈತರು ದೆಹಲಿ ಮುತ್ತಿಗೆ ಹಾಕಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಹೋರಾಟ ಬಹಳಷ್ಟು ದಿನ ರೈತ ಚಳವಳಿ ನಡೆಯುತ್ತದೆ ಎಂದು ಕರ್ನಾಟಕ ಪ್ರವಾಸದಲ್ಲಿರುವ ಭಾರತಿಯ ಕಿಸಾನ್ ಯುನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯಿತ್ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವರವಲಯದಲ್ಲಿರುವ ಮಾಜಿ ಸಚಿವ ಏಕಾಂತಯ್ಯ ತೋಟದಲ್ಲಿ ಮಾತನಾಡಿದ ಅವರು
ಬಹಳ ಮುಖ್ಯವಾದ ಕೃಷಿ ಮತ್ತು ಬದುಕಿಗೆ ಸಂಬಂಧಪಟ್ಟ ಮೂರು ಕಾನೂನುಗಳು ಬಂದಿದವೆ. ಈ ಕಾನೂನುಗಳು ಸಂಪೂರ್ಣ ರೈತರ ವಿರೋಧಿಯಾಗಿವೆ. ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದರು. ಕನಿಷ್ಠ ಬೆಂಬಲ ಬೆಲೆ ನೀತಿ ಜಾರಿಗೆ ತರಬೇಕು ಎನ್ನುವ ಉದ್ದೇಶದಿಂದ ನಾವು ಹೋರಾಟ ಮಾಡುತಿದ್ದೆವೆ. ನಮ್ಮ ಹೋರಾಟ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ಕಳೆದ ಎರಡು ತಿಂಗಳಿಂದ ಸರ್ಕಾರ ನಮ್ಮ ಜೊತೆ ಮಾತುಕತೆ ಆಡುತ್ತಿಲ್ಲ. ಮೊದಲು ನಾಲ್ಕೈದು ಸುತ್ತಿನ ಮಾತುಕತೆ ಮಾತ್ರ ನಡೆದವು ಎಂದು ತಿಳಿಸಿದರು. ಕರ್ನಾಟಕದ ಬೆಳೆಗಳಾದ ರಾಗಿ, ಜೋಳ,ಸಜ್ಜೆ, ಇತರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಸರ್ಕಾರ ಘೋಷಣೆ ಮಾಡುತ್ತದೆ ಅಷ್ಟೇ, ಇದಕ್ಕೆ ಕಾನೂನು ಇಲ್ಲ, ಯಾವ ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳುವ ನಿಯಮ ಇಲ್ಲ. ಕೇವಲ ಘೋಷಣೆಗೆ ಅಷ್ಟೇ ಸೀಮಿತವಾಗಿದೆ ಎಂದು ಹೇಳಿದರು.
ರೈತರಿಗೆ ಪ್ರತಿ ಕ್ವಿಂಟಲ್ ಗೆ 700-800 ರೂ ನಷ್ಟ ಉಂಟಾಗುತ್ತದೆ.ಹಾಗಾಗಿ ಶಾಸನಬದ್ಧ ವಾಗಬೇಕು ಎಂದರು. ಈ ಚಳುವಳಿಗೆ ದೇಶದ ಅನೇಕ ಭಾಗಗಳಲ್ಲಿ ಬೆಂಬಲ ಸೂಚಿಸಿದ್ದಾರೆ ಎಂದರು. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರೈತರ ಸಂಘಟನೆ ತುಂಬಾ ಬಲಿಷ್ಠವಾಗಿದವೆ. ಈ ಚಳುವಳಿ ಸರ್ಕಾರ ಮತ್ತು ಮೂರು ಕಾನೂನುಗಳ ವಿರುದ್ಧ ಮಾತ್ರ ವಾಪಸ್ ಪಡೆಯಲು ನಡೆಯುವ ಚಳುವಳಿಯಲ್ಲ, ಜೊತೆಗೆ ದುಡಿಯುವ ವರ್ಗ ಹಾಗೂ ಲೂಟಿ ಕೊರರ ವಿರುದ್ಧ ನಡೆಯುವ ಚಳುವಳಿ ಎಂದು ತಿಳಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿಗೆ ದಕ್ಷಿಣ ಭಾರತದ ರೈತರು ಹೆಚ್ಚು ಬಲ ಕೊಡಬೇಕು ಎಂದು ರೈತರಿಗೆ ಕರೆ ನೀಡಿದರು.
ಈ ಸಭೆಯಲ್ಲಿ ಮಾಜಿ ಸಚಿವ ಏಕಾಂತಯ್ಯ, ನಂಜುಂಡಸ್ವಾಮಿ ಪುತ್ರಿ ಚುಕ್ಕಿ, ನಂದಿನಿ ಜಯರಾಮ್, ವಿಜಯಕುಮಾರ್, ಸುರೇಶ್, ಹೆಚ್.ಆರ್. ತಿಮ್ಮಯ್ಯ, ಕೆ.ಟಿ. ತಿಪ್ಪೇಸ್ವಾಮಿ, ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.