March 28, 2024

Chitradurga hoysala

Kannada news portal

ವಿಕಲಚೇತನರು ಸರ್ಕಾರದ ಸೌಲಭ್ಯ ಸದುಪಯೋಗ ಮಾಡಿಕೊಳ್ಳಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

1 min read

ಚಿತ್ರದುರ್ಗ:ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಎಲ್ಲಾರಂತೆ ಬದುಕಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. 
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ,ಜಿಲ್ಲಾ ಪಂಚಾಯತ ಅಭಿವೃದ್ಧಿ ಅನುದಾನ ಯೋಜನೆಯಡಿಯಲ್ಲಿ 51  ದೈಹಿಕ ವಿಕಚೇತನರಿಗೆ 74 .78 ಲಕ್ಷ ವೆಚ್ಚದಲ್ಲಿ ನೀಡಿದ  ಯಂತ್ರ ಚಾಲಿತ ದ್ವಿಚಕ್ರ (ರೆಟ್ರೋಫಿಟ್ ಮೆಂಟ್) ಸಹಿತ ವಾಹನಗಳನ್ನು ವಿತರಿಸಿ ಮಾತನಾಡಿದರು. 
ಸರ್ಕಾರದಿಂದ ವಿಕಲಚೇತನರಿಗೆ ಸಾಕಷ್ಟು ಹಣವನ್ನು ಕಾಯ್ದಿರಿಸಿ ನಿಮ್ಮ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಪಡದುಕೊಂಡು ಜೀವನವನ್ನು ರೂಪಿಸಿಕೊಂಡು ಎಲ್ಲಾ ರಂಗದಲ್ಲಿ ಪ್ರವೇಶ ಪಡೆಯಬೇಕು ಎಂದರು.  
ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ ವಿಕಚೇತನರಿಗೆ ಜಿಲ್ಲಾ ಪಂಚಾಯತ ಅಭಿವೃದ್ಧಿ ಹಣದಲ್ಲಿ ವಿಕಚೇತನರಿಗೆ  5% ಮೀಸಲು ಹಣದಲ್ಲಿ 2017-18, 2018-19, 2019-20 ನೇ ಸಾಲಿನ ಹಣದಲ್ಲಿ   ಎಲ್ಲಾ ಜಿಲ್ಲಾ ಪಂಚಾಯತ ಕ್ಷೇತ್ರದಿಂದ ವಿಕಲಚೇತನರನ್ನು ಗುರುತಿಸಿ ಆಯ್ಕೆ ಮಾಡಿ ದ್ವಿಚಕ್ರ ವಾಹನ ನೀಡಿದ್ದೇವೆ. ಎಲ್ಲಾರೂ ಸಹ ಸಹ ತಮ್ಮ ದ್ವಿಚಕ್ರ ವಾಹನ ಬಳಸಿಕೊಂಡು ಉದ್ಯೋಗಗಳಿಗೆ ತೆರಳಲು ವಾಹನ ಅನುಕೂಲವಾಗಲಿದೆ‌. ವಿಕಲಚೇತನರು ಸಮಾಜದಲ್ಲಿ  ಸಮಾನವಾಗಿ ಬದುಕಬೇಕು ಎಂಬುದು ಎಲ್ಲಾರ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ.ವೈಶಾಲಿ ಮಾತನಾಡಿ ಎಲ್ಲಾ ಜಿಲ್ಲಾ ಪಂಚಾಯತ ಕ್ಷೇತ್ರದ ,ಸೇರಿ 51 ಫಲಾನುಭವಿಗಳನ್ನು ಗುರುತಿಸಿ    ವೈದ್ಯಕೀಯ ತಪಾಸಣೆ ನಡೆಸಿ ಅರ್ಹರನ್ನು ಗುರುತಿಸಿದ್ದೇವೆ. ಒಟ್ಟು 74.78 ಲಕ್ಷ ವೆಚ್ಚದಲ್ಲಿ  ದ್ವಿಚಕ್ರ ವಾಹನಗಳನ್ನು ನೀಡಿದ್ದೇವೆ. ಯಾರು ಸಹ ವಾಹನ ದುರ್ಬಳಕೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು‌. ಜಿಲ್ಲಾ ಪಂಚಾಯತ ಸದಸ್ಯರಾದ ನರಸಿಂಹರಾಜು, ವಿಜಯಲಕ್ಷ್ಮಿ ಪ್ರಕಾಶ್, ಗುರುಮೂರ್ತಿ, ಜಯಪ್ರತಿಭಾ, ಸುಮಲಿಂಗರಾಜು, ನಾಗೇಂದ್ರ ನಾಯ್ಕ, ಜಿಲ್ಲಾ ಪಂಚಾಯತ ಮುಖ್ಯ ಯೋಜನಧಿಕಾರಿ ಸಿ.ಎಸ್.ಗಾಯಿತ್ರಿ, ಉಪಕಾರ್ಯದರ್ಶಿ ಮಹಮ್ಮರ್ ಮಬೀನ್ ಮತ್ತು ಎಲ್ಲಾ VRW ಮತ್ತು MRW ಹಾಜರಿದ್ದರು.

About The Author

Leave a Reply

Your email address will not be published. Required fields are marked *