Recent Posts

October 17, 2021

Chitradurga hoysala

Kannada news portal

ಉತ್ತಮ ಆರೋಗ್ಯ ಉತ್ತಮ ಜೀವನ- ಆರೋಗ್ಯದ ಭಾಗ್ಯ ಅರಿತವರೇ ಯೋಗ್ಯ

1 min read

ವಿಶ್ವದಾದ್ಯಂತ ಏಪ್ರಿಲ್ 7 ರಂದು ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.
2021 ವರ್ಷದ ಆಚರಣೆಯ ತಿರುಳು “ಸದೃಢ ಸಮಾಜಕ್ಕಾಗಿ ಉತ್ತಮ ಅರೋಗ್ಯ” ಎಂಬುದಾಗಿದೆ.
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸರ್ವರನ್ನು ಆರೋಗ್ಯವಂತರನ್ನಾಗಿಸುವುದು ಅಗತ್ಯ. ಇಡೀ ವಿಶ್ವದ ಮನುಕುಲವನ್ನೇ ಕಾಡಿ ನುಂಗಿ ಹಾಕುತ್ತಿರುವ ಕರೋನದ ಸಂಕಷ್ಟದ ಅವಧಿಯಲ್ಲಿ ಆರೋಗ್ಯದ ಮಹತ್ವವನ್ನು ಸಾರುವ ಸಲುವಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಮನದಟ್ಟು ಮಾಡಬೇಕಾದ ವಿಶೇಷ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

1950 ಎಪ್ರಿಲ್ 7ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ‘ಸರ್ವರಿಗೂ ಆರೋಗ್ಯ’ ಎಂಬ ಘೋಷಣೆಯಡಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ಕನಸನ್ನು ನನಸಾಗಿಸಬೇಕಿದೆ. ಜಾಗತಿಕ ಜನಸಂಖ್ಯೆಯಲ್ಲಿನ 100 ಮಿಲಿಯನ್ ಮಂದಿ ಬಡತನ ರೇಖೆಗಿಂತಲೂ ಕೆಳಗಿನವರಾಗಿದ್ದು, ಅಧಿಕ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ, ಬಡತನ ರೇಖೆಯು ಕೆಳಗೆಯೇ ಉಳಿಯುವಂತಾಗಿದೆ. ದುಡಿದ ಹಣವೆಲ್ಲಾ ಆರೋಗ್ಯ ಸಂಬಂಧಿ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸಿ ಎಲ್ಲವನ್ನೂ ಕಳೆದುಕೊಂಡು ಬೀದಿ ಬದಿಯಲ್ಲಿ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ತಲುಪಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಬಡವ-ಬಲ್ಲಿದ ಎಲ್ಲರೂ ಸೇರಿದಂತೆ ಉತ್ತಮ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಸಾಧ್ಯ.

ಜೀವನ ಶೈಲಿ ಮತ್ತು ಆರೋಗ್ಯ:
ಬದಲಾದ ಜೀವನಶೈಲಿ ಆಹಾರ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ. ಹೊಸ ರೋಗಗಳ ಸಂಖ್ಯೆ ಅಧಿಕವಾಗುತ್ತಿದೆ ರೋಗಗಳೊಂದಿಗೆ ಬದುಕು ಸಾಗಿಸುವ ಅನಿವಾರ್ಯತೆ ಬಂದೊದಗಿದೆ. ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗ ಬರುವ ರೋಗಗಳಾದ ಮಧುಮೇಹ ರಕ್ತದೊತ್ತಡ, ಹೃದಾಯಾಘಾತ, ಖಿನ್ನತೆ ಮುಂತಾದ ರೋಗಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಆಹಾರದ ಪ್ರಮಾಣಕ್ಕಿಂತ ಔಷಧಿಯ ಪ್ರಮಾಣ ಸೇವಿಸುವ ಜನರೇ ಅಧಿಕವಾಗಿದ್ದಾರೆ.

 1. ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ. ಆರೋಗ್ಯವೇ ಭಾಗ್ಯ ಆರೋಗ್ಯಕ್ಕಿಂತ ಮಿಗಿಲಾದ ವಸ್ತು ಇನ್ನಾವುದೂ ಇಲ್ಲ.
 2. ಧೂಮಪಾನ ಮದ್ಯಪಾನಕ್ಕೆ ತಿಲಾಂಜಲಿ ಇಡಿ. ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ಬಲಿಯಾಗಬೇಡಿ.
 3. ದೈನಂದಿನ ಜೀವನದಲ್ಲಿ ಯೋಗ, ಪ್ರಾಣಯಾನ ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್ ಸೈಕ್ಲಿಂಗ್, ಮುಂತಾದವುಗಳನ್ನು ಅಳವಡಿಸಿಕೊಂಡು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತ ದೂರವಾಗಿಸೋಣ ಹತ್ತಿರ ಸುಳಿಯುವುದಿಲ್ಲ.
 4. ಹಸಿ ತರಕಾರಿ, ಹಸಿರು ಸೊಪ್ಪು, ಕಾಳು ಬೇಳೆ ಇರುವ ಆಹಾರ ಸೇವಿಸಿ. ಮೂಲಹಾರಕ್ಕೆ ಹೆಚ್ಚು ಒತ್ತು ಕೊಡಿ. ನಾರಿನಂಶ ಮತ್ತು ಪೌಷ್ಠಿಕಾಂಶ ಇರುವ ಆಹಾರ ಜಾಸ್ತಿ ಸೇವಿಸಿ.
 5. ಕೃತಕ ಆಹಾರ ಪದ್ಧತಿ ಸಿದ್ಧ ಆಹಾರ, ದಿಢೀರ್ ಆಹಾರ, ಕೃತಕ ಪೇಯಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಿ. ಜಂಕ್ ಪುಡ್ ಸಹವಾಸ ಬೇಡ.
 6. ‘ಬೇಗ ಮಲಗಿ ಬೇಗ ಏಳು’ ಎಂಬ ಹಿರಿಯರ ಮಾತನ್ನು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿ.
 7. ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ.
 8. ಸ್ವಯಂ ಔಷಧಿಗಾರಿಕೆ ಮಾಡುವುದೇ ಬೇಡ, ಡಾ| ಗೂಗಲ್ ಸಹವಾಸ ಬೇಡವೇ ಬೇಡ. ನಮ್ಮ ಆರೋಗ್ಯ ಉತ್ತಮವಾಗಿರಲು ನಮ್ಮ ಜೀವನಶೈಲಿಯನ್ನು ಮಾರ್ಪಾಟು ಮಾಡಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಉತ್ತಮ ಆಹಾರ ಪದ್ಧತಿ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳೋಣ ರೋಗದಿಂದ ಮುಕ್ತರಾಗೋಣ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಮೂಲ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಉತ್ತಮ. ಆರೋಗ್ಯ ಎನ್ನುವುದು ಹಣ ನೀಡಿದರೆ ಸಿಗುವ ವಸ್ತುವಲ್ಲ. ಕಾಯಿಲೆ ಬಂದಾಗ ನರಳುವ ಪರಿಸ್ಥಿತಿಗಿಂತ ಕಾಯಿಲೆ ಬರದಂತೆ ತಡೆಗಟ್ಟುವುದು ಉತ್ತಮ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನೈರ್ಮಲ್ಯದಿಂದ ಇಟ್ಟುಕೊಂಡಾಗ ರೋಗಗಳನ್ನು ತಡೆಗಟ್ಟಬಹುದು ಈ ನಿಟ್ಟಿನಲ್ಲಿ ಆರೋಗ್ಯವಂತ ಸಮಾಜಕ್ಕಾಗಿ ನಾವೆಲ್ಲರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ರೂಢಿಸಿಕೊಂಡು ಎಲ್ಲರೂ ಆರೋಗ್ಯವಂತರಾಗೋಣ
  ಆರೋಗ್ಯವಂತ ಸಮಾಜಕ್ಕಾಗಿ ಕೈಜೋಡಿಸೋಣ
  ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು

ಲೇಖಕರು
ಮಹೇಶ್ ಕಡ್ಲೆಗುದ್ದು

Leave a Reply

Your email address will not be published. Required fields are marked *

You may have missed