April 25, 2024

Chitradurga hoysala

Kannada news portal

ಏಪ್ರಿಲ್ 20ರೊಳಗೆ ಕಡ್ಡಾಯವಾಗಿ ವಿಕಲಚೇತನರ ಮಾಹಿತಿ ನೊಂದಯಿಸಿಕೊಳ್ಳಿ:ಜೆ.ವೈಶಾಲಿ

1 min read

ಏ. 20 ರೊಳಗೆ ವಿಕಲಚೇತನರ ದತ್ತಾಂಶವನ್ನು ಕುಟುಂಬ ಗುರುತಿನ ಸಂಖ್ಯೆ ಯೋಜನೆಯಡಿ ನೊಂದಾಯಿಸಲು ಸೂಚನೆ
***
ಚಿತ್ರದುರ್ಗ,ಏಪ್ರಿಲ್09:
ವಿಕಲಚೇತನರ ಕುಟುಂಬ ಗುರುತಿನ ಸಂಖ್ಯೆ ಯೋಜನೆಯಡಿ ಜಿಲ್ಲೆಯಲ್ಲಿನ ಎಲ್ಲಾ ವಿಕಲಚೇತನರ ಮಾಹಿತಿಯನ್ನು ಇ-ಆಡಳಿತ ಇಲಾಖೆಯು ಹೊಸದಾಗಿ ಸೃಜಿಸಿರುವ https://kutumba-apps.karnataka.gov.in/forms/    ತಂತ್ರಾಂಶದಲ್ಲಿ  ಏಪ್ರಿಲ್ 20 ರೊಳಗೆ ನೊಂದಾಯಿಸಬೇಕಾಗಿರುತ್ತದೆ.
ಈಗಾಗಲೇ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು(ಎಮ್‍ಆರ್‍ಡಬ್ಯೂ) ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರ(ವಿಆರ್‍ಡಬ್ಯೂ) ಮೂಲಕ ವಿಕಲಚೇತನರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸುವ ಕಾರ್ಯ ಪ್ರಾರಂಭವಾಗಿರುತ್ತದೆ.
 ಈವರೆಗೆ ತಂತ್ರಾಂಶದಲ್ಲಿ ಮಾಹಿತಿ ನೊಂದಾಯಿಸದ ಎಲ್ಲಾ ವಿಕಲಚೇತನರು ತುರ್ತಾಗಿ ಅಂದರೆ ಏಪ್ರಿಲ್ 20 ರೊಳಗೆ ಅವಶ್ಯಕ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿಕಲಚೇತನರ ಗುರುತಿನ ಚೀಟಿ ಅಥವಾ ಯುಡಿಐಡಿ ಕಾರ್ಡ್, ಯುಡಿಐಡಿ ನೊಂದಣಿ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಮಾಸಿಕ ಪಿಂಚಣಿ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ದಾಖಲಾತಿಗಳನ್ನು ತಂತ್ರಾಂಶದಲ್ಲಿ ನಮೂದಿಸಲು ವಿಕಲಚೇತನರು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಖ್ಯೆ- ಚಿತ್ರದುರ್ಗ-9880821934, ಚಳ್ಳಕೆರೆ-9611266930, ಹಿರಿಯೂರು-9902888901, 9902898901, ಹೊಳಲ್ಕೆರೆ- 9140030227, ಹೊಸದುರ್ಗ-9741829990, ಮೊಳಕಾಲ್ಮೂರು-9742725576 ಗೆ ಸಂಪರ್ಕಿಸುವುದು.
ಜಿಲ್ಲೆಯ ಪ್ರತಿಯೊಬ್ಬ ವಿಕಲಚೇತನರು ಕಡ್ಡಾಯವಾಗಿ ತಂತ್ರಾಂಶದಲ್ಲಿ ಮಾಹಿತಿ ನೊಂದಾಯಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಬಾಲಭವನ ಆವರಣ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ದೂರವಾಣಿ ಸಂಖ್ಯೆ 08194-235286 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *