March 29, 2024

Chitradurga hoysala

Kannada news portal

ನವಭಾರತದ ನಿರ್ಮಾತೃ ಅಂಬೇಡ್ಕರ್: ಗ್ರಾ.ಪಂ.ಅಧ್ಯಕ್ಷ ಪಾಲಯ್ಯ

1 min read

ಚಳ್ಳಕೆರೆ: ಭಾರತದ ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ಅಸ್ಪೃಶ್ಯತೆಯ ನಿವಾರಕ ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಷ್ಟೇ ಅಲ್ಲದೇ ಸ್ವಾತಂತ್ರ್ಯ ನಂತರದ ನವಭಾರತದ ನಿರ್ಮಾತೃ ಆಗಿದ್ದಾರೆ ಎಂದು ಕಾಲುವೇಹಳ್ಳಿ ಗ್ರಾಮ ಪಂಚಾಯತಿ ಸೊಪ್ಪಿನ ಪಾಲಯ್ಯ

ಚಳ್ಳಕೆರೆ ತಾಲೂಕಿನ  ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 130ನೇ ಜಯಂತಿಯನಲ್ಲಿ ಮಾತನಾಡಿ

ಅಂಬೇಡ್ಕರ್ ಅವರು ಸ್ವತಃ ಅಸ್ಪೃಶ್ಯತೆಯ ತಮ್ಮ ಬದುಕಿನಲ್ಲಿ ಅನುಭವಿಸಿದರು,ಅಷ್ಟೇ ಅಲ್ಲದೇ ಜಗತ್ತಿನ ಅತಿ ಹೆಚ್ಚು ಸಂವಿಧಾನಗಳನ್ನು ಓದಿದ್ದರು, ಅವರ ಪಾಂಡಿತ್ಯ ಪಡೆದ ಪದವಿಗಳಿಗೆ ಲೆಕ್ಕವೇ ಇಲ್ಲ ಹಾಗಾಗಿ ಭಾರತದ ಎಲ್ಲಾ ಸಮಸ್ಯೆಗಳನ್ನು ಮನಗಂಡು ಅವುಗಳನ್ನು ತೊಡೆದು ಹಾಕಲು ಸೂಕ್ತ ಕಾಯ್ದೆ ಕಾನೂನುಗಳನ್ನು ಭಾರತದ ಸಂವಿಧಾನದಲ್ಲಿ ಅತ್ಯಮೂಲ್ಯವಾಗಿ ತಂದಿದ್ದಾರೆ

ಒಬ್ಬ ಪತ್ರಕರ್ತನಾಗಿ,ಸಮಾಜದ ಸುಧಾರಕರಾಗಿಯೂ ಅವರು ಕೆಲಸ ಮಾಡಿದರು,ಅವರು ಧರ್ಮದ ವಿಚಾರದಲ್ಲಿ ಹಿಂದೂವಾಗಿ ಸಾಯಲಾರೆ ಎಂಬ ಮಾತಿನ ಹಿಂದೆ ಹಿಂದೂ ಧರ್ಮದ ಒಳಗಿನ ಕೆಲ ತಲ್ಲಣ ತಾರತಮ್ಯಗಳ ನೋವು ಸೇರಿಕೊಂಡಿತ್ತು,ಅಂಬೇಡ್ಕರ್ ಅವರನ್ನು ಕ್ರಿಶ್ಚಿಯನ್, ಹಾಗೂ ಮುಸ್ಲಿಂ ಜಗತ್ತಿನ ಬೇರೆ ಬೇರೆ ಧರ್ಮದವರು ತಮ್ಮ ಧರ್ಮಕ್ಕೆ ಸೇರಲು ಆಹ್ವಾನಿಸಿದಾಗ ಅವರು ಭಾರತದ್ದೇ ಆದ ಬೌದ್ಧಧರ್ಮ ಸೇರುವ ಮೂಲಕ ಭಾರತವನ್ನು ಅವರು ಗಟ್ಟಿಯಾಗಿ ಪ್ರತಿನಿಧಿಸಿದ ಅವರ ನಿಲುವು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ರಾಜಕೀಯವಾಗಿ ಅವರನ್ನು ಸೋಲಿಸಲು ಅಂದಿನ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಎರಡು ಗುಂಪುಗಳು ಕೆಲಸ ಮಾಡಿದವು ಆದರೆ ಇಂದು ಅದೇ ಗುಂಪುಗಳು ಅಂಬೇಡ್ಕರ್ ಅವರ ಹೆಸರನ್ನು ಮಾತ್ರ ಹೇಳುತ್ತವೆ ಆದರೆ ಅವರ ಕನಸನ್ನು ಹಾಗೂ ದಲಿತ ,ತಳ ಸಮುದಾಯಗಳನ್ನು ಆಳುವ ವರ್ಗಗಳಾಗಿಸುವಲ್ಲಿ ವಿಫಲವಾಗಿವೆ.

ಒಟ್ಟಾರೆ ಸಂವಿಧಾನವೇ ನಮ್ಮ ದೇಗುಲ,ಅಂಬೇಡ್ಕರ್ ಅವರು ದೇವರ ಸ್ಥಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಕಾಣಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸೊಪ್ಪಿನ ಪಾಲಯ್ಯ ಆರ್ ಮತ್ತು
ಉಪಾಧ್ಯಕ್ಷರಾದ ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಹಾಗೂ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿಕಾಂತ್ ಡಿ‌‌‌ ಕೆ ,
ಕಾಲುವೇಹಳ್ಳಿ ಸದಸ್ಯರುಗಳಾದ
ಎನ್ ಗಾದ್ರಿಪಾಲಯ್ಯ, ತಿಪ್ಪಕ್ಕ,‌
ರೇಣುಕಮ್ಮ ಎಸ್ ಹೊನ್ನೂರಸ್ವಾಮಿ , ಗೌಡರ ಹಟ್ಟ ಸದಸ್ಯರುಗಳಾದ ತಿಪ್ಪೇಸ್ವಾಮಿ
ದ್ರಾಕ್ಷಾಯಿಣಿ ಎಂ ಗ್ರಾದಿಪಾಲಯ್ಯ,
ಕ್ಯಾತಗೊಂಡನಹಳ್ಳಿ ಸದಸ್ಯರುಗಳಾದ
ಜಂಪಣ್ಣ , ಮುಕ್ಕಣ್ಣ,‌ ತ್ರಿವೇಣಿ, ಗಂಗಮ್ಮ, ಯಾದಲಗಟ್ಟಿ ಸದಸ್ಯರುಗಳಾದ ಬೊಮ್ಮಜ್ಜ , ಶಾಂತಮ್ಮ,‌
ದೊಡ್ಡ ಭೀಮಣ್ಣ ಎಸ್ ಟಿ , ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಮುಖಂಡರು ಇನ್ನು ಮುಂತಾದವರು ಇದ್ದರು,

About The Author

Leave a Reply

Your email address will not be published. Required fields are marked *