April 23, 2024

Chitradurga hoysala

Kannada news portal

685 ನೇ ವರ್ಷದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ

1 min read

ವಿಶೇಷ ವರದಿ:
ಗಂಡುಗಲಿ ಕುಮಾರರಾಮ, ಹಕ್ಕ ಬುಕ್ಕ, ಶ್ರೀ ಕೃಷ್ಣ ಯಚದೇವರಾಯ ರ ಸ್ಮರಣೆ

*ಎಪ್ರಿಲ್ ೧೮ ರಂದು ನಾಯಕ 

ಸಮುದಾಯದ ಮನೆಮನೆಗಳಲ್ಲಿ ಸಂಘಗಳಲ್ಲಿ ೬೮೫ ನೇ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಆಚರಿಸಲು ಕರೆ*…

ನಾಯಕ ರತ್ನಗಳಾದ ಹರಿಹರ ಬುಕ್ಕರಾಯ (ಹಕ್ಕ-ಬುಕ್ಕ), ಗಂಡುಗಲಿ
ಕುಮಾರರಾಮ, ಶ್ರೀಕೃಷ್ಣದೇವರಾಯರ ಸ್ಮರಣೆ


ಕರ್ನಾಟಕ ರಾಜ್ಯಾದ್ಯಂತ ವಾಲ್ಮೀಕಿ ನಾಯಕ ಸಮುದಾಯದಿಂದ ಪ್ರತಿ ವರ್ಷ
ವಿಜೃಂಭಣೆಯಿಂದ ವಿಜಯನಗರ ಸಾಮ್ರಾಜ್ಯ( ಕರ್ನಾಟಕ ಸಾಮ್ರಾಜ್ಯ ) ಸಂಸ್ಥಾಪನಾ 
ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. 
ಆದರೆ, ಕಳೆದ ವರ್ಷ ಕೋವಿಡ್ ನಿಯಮಗಳು ಇದ್ದ
ಕಾರಣ ಸರಳವಾಗಿ ವಿಜಯನಗರ ಸಾಮ್ರಾಜ್ಯ  ಸಂಸ್ಥಾಪನಾ ದಿನಾಚರಣೆಯನ್ನು ಮಾಡಲಾಗಿತ್ತು.
ಈ ವರ್ಷವೂ ಸಹ ಬೇಡ ವಂಶದ ರಾಜರಾದ ಹಕ್ಕ ಬುಕ್ಕ ರಿಂದ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ಸ್ಮರಣೋತ್ಸವವನ್ನು ಸರಳವಾಗಿ ಆಚರಿಸಬೇಕು…

 ಪ್ರತಿ ವರ್ಷದಂತೆ ಈ ವರ್ಷವು ಸಹ ೧೮/೦೪/೨೦೨೧ರಂದು ೬೮೫ ನೇ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಯನ್ನು  ಕೋವಿಡ್
 ನಿಯಮಗಳನ್ನು ಪಾಲಿಸುವ ಮೂಲಕ ಇಡೀ ರಾಜ್ಯದ ವಾಲ್ಮೀಕಿ ನಾಯಕ ಸಮುದಾಯದ ಪ್ರತಿಯೊಂದು ಮನೆ ಮನೆಗಳಲ್ಲಿ, ಸಮುದಾಯದ ಸಂಘಗಳು ಹಾಗೂ ಸಂಘಟನೆಗಳ ಕಾರ್ಯಾಲಯಗಳಲ್ಲಿ ಗಂಡುಗಲಿ ಕುಮಾರರಾಮ, ಹಕ್ಕ-ಬುಕ್ಕ ಮತ್ತು ಶ್ರೀಕೃಷ್ಣದೇವರಾಯರ ಪೋಟೋಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.

 ಇಡೀ ರಾಜ್ಯದಲ್ಲಿರುವ  ವಾಲ್ಮೀಕಿ ನಾಯಕ ಸಮುದಾಯದವರು ಜಿಲ್ಲೆ,ತಾಲ್ಲೂಕು,ಗ್ರಾಮಗಳಲ್ಲಿ  ತಮ್ಮ ತಮ್ಮ ಮನೆಗಳಲ್ಲಿ ಹಾಗೂ ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಗಳ ಕಚೇರಿಗಳಲ್ಲಿಯೂ ಸಹ ಹಕ್ಕ ಬುಕ್ಕ, 
ಗಂಡುಗಲಿ ಕುಮಾರರಾಮ ಹಾಗೂ ನರಸನಾಯಕನ ಮಗ 
ಶ್ರೀಕೃಷ್ಣದೇವರಾಯರ ಪೊಟೋಗಳನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಯನ್ನು 
ಸರಳವಾಗಿ ಆಚರಿಸಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷರಾದ ಜಿ.ಟಿ.ಚಂದ್ರಶೇಖರಪ್ಪ ಹಾಗೂ ಹಕ್ಕ ಬುಕ್ಕ ಸೇನೆ ಸಾಂಸ್ಕೃತಿಕ ವೇದಿಕೆಯ ರಾಜ್ಯಾಧ್ಯಕ್ಷರಾದ ಹರ್ತಿಕೋಟೆ ವೀರೇಂದ್ರಸಿಂಹ ರವರು ಜಂಟಿ ಪತ್ರಿಕಾ ಹೇಳಿಕೆ ಮೂಲಕ ಕರೆ ನೀಡಿರುತ್ತಾರೆ…

ಇತಿಹಾಸ
ಕುಮ್ಮಟ ದುರ್ಗದ ರಾಜ ಮತ್ತು ಹಕ್ಕಬುಕ್ಕರ ಸೋದರ ಮಾವನಾಗಿದ್ದ ಗಂಡುಗಲಿ ಕುಮಾರ ರಾಮನ ಕನಸಾದ ವಿಜಯನಗರ ಸಾಮ್ರಾಜ್ಯವನ್ನು ಅವರ ಮಾರ್ಗದರ್ಶನದಲ್ಲಿ ಹಕ್ಕ- ಬುಕ್ಕರು ೧೩೩೬ ರಲ್ಲಿ ಸ್ಥಾಪನೆ ಮಾಡಿ ೧೮/೦೪/೨೦೨೧ ಕ್ಕೆ ೬೮೫ ವರ್ಷಗಳಾದವು. 
ಕಂಪಲಿ ಸಂಸ್ಥಾನದ ಪುವ್ವಲ ಬೆಡಗಿನ ಬೇಡ ನಾಯಕ ವಂಶದ ರಾಜಾ ಮುಮ್ಮಡಿ ಸಿಂಗೇಯನಾಯಕನ ಮಗ ವೀರ ಕಂಪಿಲರಾಯನ ಮೊಮ್ಮಕ್ಕಳೇ ಹಕ್ಕ-ಬುಕ್ಕರು. ಅಂದರೆ ಗಂಡುಗಲಿ ಕುಮಾರರಾಮನ  ಹಿರಿಯ ಸಹೋದರಿ ಮಾರೆವ್ವೆಯನ್ನು ಅವರ ಹತ್ತಿರದ ಸಂಭದಿಕರಾದ
ಬುಕ್ಕಭೂಪಾಲನಾಯಕನ ಮಗ 
ಸಂಗಮದೇವನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ಈ ಸಂಗಮದೇವ ಕುಮಾರರಾಮನ ಭಾವ ಆಗಿದ್ದರಿಂದ ಈತನಿಗೆ ಭಾವ ಸಂಗಮ ಎಂದೂ
ಕರೆಯಲಾಗುತ್ತಿತ್ತು. ಸಂಗಮದೇವ ಮತ್ತು ಮಾರೆವ್ವೆಯರ ಮಕ್ಕಳೇ
ಈ ಹಕ್ಕ-ಬುಕ್ಕರು,ಇವರಿಗೆ ಕಂಪಣ,ಮುದ್ದಪ್ಪ,ಮಾರಪ್ಪ ಎಂಬ ಮೂವರು ಸಹೋದರರು. ಅವರ ಇಡೀ ಪರಿವಾರವೇ ಬೇಡ ನಾಯಕ ಸಮುದಾಯದ ಮನೆತನವಾಗಿದೆ.

ಹಕ್ಕ ಬುಕ್ಕರ ತಾತ ವೀರ ಕಂಪಿಲರಾಯ, ಸೋದರ ಮಾವ ಗಂಡುಗಲಿ ಕುಮಾರರಾಮ ಹಾಗೂ ತಂದೆ ತಾಯಿಗಳಾದ ಸಂಗಮ ಮತ್ತು ಮಾರವ್ವೆ ಕೂಡ ಬೇಡ ನಾಯಕರೇ ಆಗಿದ್ದಾರೆ. ಹಕ್ಕ ಬುಕ್ಕರ ತಂದೆ ಸಂಗಮದೇವ ಕೂಡ ತನ್ನ
ಮಕ್ಕಳಿಗೆ ತನ್ನ ತಂದೆ ಮತ್ತು ಸಂಬಂಧಿಕರ ಹೆಸರುಗಳನ್ನು ಇಡುತ್ತಾನೆ. ಹಕ್ಕ 
ಎಂದು ಕರೆಯಲಾಗುವ ಹರಿಹರನಿಗೆ ಅವರ ಅಜ್ಜಿ ಹರಿಯಾಲದೇವಿಯ ಹೆಸರು ಇಡುತ್ತಾನೆ. ಬುಕ್ಕ ಎಂದು ಕರೆಲಾಗುವ ಬುಕ್ಕರಾಯನಿಗೆ ತನ್ನ ತಂದೆ ಬುಕ್ಕಭೂಪಾಲನಾಯಕನ
ಹೆಸರು ಇಡುತ್ತಾನೆ. ಇನ್ನುಳಿದ ಮೂವರ ಪೈಕಿ ತನ್ನ ಪತ್ನಿ ಮಾರೆವ್ವಳ ಹೆಸರನ್ನು ಮಗನಿಗೆ ಮಾರೆಪ್ಪ ಎಂದು, ತನ್ನ ಮಾವ ಕಂಪಿಲರಾಯನ ಹೆಸರನ್ನು ಇನ್ನೊಬ್ಬ ಮಗನಿಗೆ 
ಕಂಪಣ ಎಂದು ನಾಮಕರಣಮಾಡುತ್ತಾನೆ.ಹಕ್ಕ ಬುಕ್ಕರ ಅಜ್ಜಿ ಹರಿಯಾಲದೇವಿಯು ಕನಕಗಿರಿ ಸಂಸ್ಥಾನದ ಗುಜ್ಜಲ ಬೆಡಗಿನ ನಾಯಕ ವಂಶದ ರಾಜನ ಮಗಳು. ಹೀಗೆ 
ಇಡೀ ಇವರ ಪರಿಹಾರವೇ ನಾಯಕ
ಸಮುದಾಯವಾಗಿದೆ…

ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನ ತಿರುಚುವ ಹುನ್ನಾರಗಳು ನೆಡೆಯುತ್ತಿರುವುದರಿಂದ ಬೇಡ ನಾಯಕರು ಜಾಗೃತರಾಗಿ ತಮ್ಮ ಇತಿಹಾಸವನ್ನ ತಿಳಿಯುವಂತಾಗಬೇಕು…

ವಿಜಯನಗರದಂತ ಬೃಹತ್ ಸಾಮ್ರಾಜ್ಯ ಸ್ಥಾಪಿಸಿದ್ದ ಹಕ್ಕ – ಬುಕ್ಕರು ಬೇಡ ನಾಯಕರೆ ಆಗಿರುವ ಕಾರಣ ಇವರ ಜೀವನಚರಿತ್ರೆಯನ್ನು ವಾಲ್ಮೀಕಿ ಬೇಡ ನಾಯಕ
ಸಮುದಾಯದ
ಪ್ರತಿಯೊಬ್ಬರೂ ಸ್ಮರಿಸಲು ಹಾಗೂ ಅರಿಯಲು ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಯನ್ನು ಪ್ರತಿವರ್ಷ 
ಹೆಚ್ಚು ಪ್ರಚಾರವಿಲ್ಲದೆ ರಾಜ್ಯಾದ್ಯಂತ ಆಚರಣೆ ಮಾಡುತ್ತಾ ಬರಲಾಗಿದೆ…

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದಂತೆ ಅದರ ಇತಿಹಾಸದ ಅರಿವು ಮಾಡಿಕೊಂಡು ಭವ್ಯ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಬೇಡ ನಾಯಕ ಸಮುದಯದವರು 
ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ 
ಬರಬೇಕು. ಹಕ್ಕ – ಬುಕ್ಕರು,ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ ಇವರೆಲ್ಲರ ಧೈರ್ಯ,ಸಾಹಸ,ಧರ್ಮ ರಕ್ಷಣೆ, ಧಕ್ಷ ಆಡಳಿತ ನಿರ್ವಹಣೆಗಳನ್ನು ಆದರ್ಶವಾಗಿ ಮಾಡಿಕೊಂಡು,ತಮ್ಮದೈನಂದಿನ
ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯಾಗಬೇಕಾಗಿದೆ. ಆದ್ದರಿಂದ ಪ್ರತಿ ವರ್ಷವೂ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುವ ಮೂಲಕ ಹಕ್ಕ ಬುಕ್ಕರನ್ನು, ಗಂಡುಗಲಿ ಕುಮಾರರಾಮ ಹಾಗೂ ಶ್ರೀಕೃಷ್ಣದೇವರಾಯ ರನ್ನು ಸ್ಮರಿಸಲಾಗುತ್ತದೆ.
 ಕೋವಿಡ್ 
ನಿಯಮ ಸಡಿಲಗೊಂಡ ನಂತರ
ಕರ್ನಾಟಕ ಸಾಮ್ರಾಜ್ಯ 
ವಿಜಯನಗರ ವೈಭವದ ಹೆಸರಿನಲ್ಲಿ ರಾಜ್ಯ,ಜಿಲ್ಲೆ, ತಾಲ್ಲೂಕು ಗಳಲ್ಲಿ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆ…

ಇತಿಹಾಸ ತಿಳಿದವನು ಮಾತ್ರ ಇತಿಹಾಸ ನಿರ್ಮಿಸಬಲ್ಲ ಎನ್ನುವ ಸಂದೇಶದೊಂದಿಗೆ ನಮ್ಮ 
ಇತಿಹಾಸ ಪುರುಷರನ್ನು ಸ್ಮರಿಸಿ ಅವರು ಸಮಾಜಕ್ಕಾಗಿ, ಜನರಿಗಾಗಿ, ನಾಡ ರಕ್ಷಣೆಗಾಗಿ ನೀಡಿದ ಕೊಡುಗೆಗಳನ್ನು ನೆನೆದು ಅವರು 
ಹಾಕಿಕೊಟ್ಟ ನ್ಯಾಯ, ಸತ್ಯ, ಪರಿಶ್ರಮ, ತ್ಯಾಗದ ಮಾರ್ಗದಲ್ಲಿ ನಡೆಯಬೇಕಾಗಿದೆ.

 ಈಗ ರಾಜ್ಯದಲ್ಲಿ ಕೋವಿಡ್ ೨ನೇ 
ಅಲೆ ಪ್ರಾರಂಭವಾಗಿರುವುದರಿಂದ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಗಂಡುಗಲಿ ಕುಮಾರರಾಮ, ಹಕ್ಕ-ಬುಕ್ಕರು ಮತ್ತು ಶ್ರೀಕೃಷ್ಣದೇವರಾಯರ ಪೋಟೋಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯನಗರ ಸಾಮ್ರಾಜ್ಯ  ಸಂಸ್ಥಾಪನಾ ದಿನವನ್ನು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಬೇಡ ನಾಯಕ ಸಮುದಾಯದವರು ತಪ್ಪದೆ ಸರಳವಾಗಿ ಆಚರಿಸಲು ಕೋರುತ್ತೇವೆ…

ನೀವು ಆಚರಣೆ ಮಾಡಿದ ಬಗ್ಗೆ ಫೋಟೋ ಸಹಿತ ಪತ್ರಿಗಳಲ್ಲಿ,ಹಾಗೂ ಫೇಸ್‌ಬುಕ್‌, ವಾಟ್ಸಪ್ ಗಳಲ್ಲಿ ಮರೆಯದೆ ಸುದ್ದಿ ಮಾಡಬೇಕು…

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ
ಮಂಡಳಿ ಪರವಾಗಿ

ಹರ್ತಿಕೋಟೆ ವೀರೇಂದ್ರಸಿಂಹ,
ರಾಜ್ಯ ಕಾರ್ಯದರ್ಶಿ ಹಾಗು ಹಕ್ಕ ಬುಕ್ಜ ಸೇನೆ,ಸಾಂಸ್ಕೃತಿಕ ವೇದಿಕೆಯ ರಾಜ್ಯಾಧ್ಯಕ್ಷ, ಅಕವಾನಾ ಮಹಾಸಭಾ, ಬೆಂಗಳೂರು ( ರಿ ).

About The Author

Leave a Reply

Your email address will not be published. Required fields are marked *