April 19, 2024

Chitradurga hoysala

Kannada news portal

ಕಸಾಪ ಕನ್ನಡಿಗರ ಪರಿಷತ್ ಆಗು ಮಾಡುವ ಕನಸು ನನಸು:ಸಿ.ಕೆ.ರಾಮೇಗೌಡ

1 min read

ಚಿತ್ರದುರ್ಗ ಏ.೧೯
ಕನ್ನಡ ಸಾಹಿತ್ಯ ಪರಿಷತ್‌ನ್ನು ಕನ್ನಡಿಗರ ಪರಿಷತ್ತ್ ಆಗಿ ಮಾಡುವ ಕನಸು ನನಸಾಗಿದೆ ಎಂದು ಕಸಾಪದ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ.ರಾಮೇಗೌಡ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆವಿಗೂ ಕಸಾಪ ಬರೀ ಸಾಹಿತ್ಯಕ್ಕೆ ಮಾತ್ರವೇ ಮೀಸಲಾಗಿತ್ತು ನಾನು ಅಧ್ಯಕ್ಷನಾಗಿ ಚುನಾಯಿತನಾದ ಮೇಲೆ ಬರೀ ಸಾಹಿತ್ಯ ಮಾತ್ರವಲ್ಲದೆ ಕನ್ನಡ ನಾಡು, ನುಡಿ,ಜಲ ಸೇರಿದಂತೆ ಕನ್ನಡಿಗರ ಸಮಸ್ಯೆಯ ಬಗ್ಗೆ ಗಮ,ನ ನಿಡಲಾಗುವುದು, ಇವುಗಳ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡವನ್ನು ತರಲಾಗುವುದು ಎಂದರು.
ನಾನು ಯಾವುದೇ ರಾಜಕೀಯ ಕಾರ್ಯಕರ್ತನಲ್ಲ, ಪಾರ್ಟ ಟೈಂ ಕನ್ನಡ ಸೇವಕನಲ್ಲ, ಸರ್ಕಾರದ ನಿವೃತ್ತ ನೌಕರನಲ್ಲ, ಪೂರ್ಣ ಪ್ರಮಾಣದಲ್ಲಿ ಕನ್ನಡದ ಪರವಾಗಿ ಕಳೆದ ಹಲವಾರು ವರ್ಷಗಳಿಂದ ಕೆಲಸವನ್ನು ಮಾಡಿಕೊಂಡು ಬಂದವನು ಹೋಈರಾಟ ಮೂಲಕವೇ ನನ್ನನು ನಾನು ಗುರುತಿಸಿಕೊಂಡವನು, ಕಳೆದ ೪೦ ವರ್ಷಗಳ ಕಾಲ ನಿರಂತರವಾಗಿ ವಿವಿಧ ರೀತಗಿಯ ಹೋರಾಟದಲ್ಲಿ ಭಾಗಿಯಾಗಿದ್ದು ಬೆಂಗಳೂರು ಕಸಾಪದ ಜಿಲ್ಲಾಧ್ಯಕ್ಷನಾಗಿ ಕೆಲಸವನ್ನು ಮಾಡಿದ್ದು ಇದ್ದಲ್ಲದೆ ರಾಜ್ಯ ಪರಿಷತ್ ಗೌರವ ಕಾರ್ಯದರ್ಶೀಯಾಗಿ ಕೆಲಸವನ್ನು ಮಾಡಿದ್ದು ಈ ಬಾರಿಯ ಕಸಾಪ ರಾಜ್ಯಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದು ಮತದಾರರು ನನ್ನನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ರಾಮೇಗೌಡ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ್ನು ಪೂರ್ಣ ಪ್ರಮಾಣದಲ್ಲಿ ಕನ್ನಡಿಗರ ಪರಿಷತ್ತನ್ನಾಗಿ ಮಾಡಬೇಕೆಂಬುದು ನನ್ನ ಆಸೆಯಾಗಿದೆ, ಇದಕ್ಕಾಗಿ ಹಲವಾರು ಯೋಜನೆಗಳನ್ನು ಸಹಾ ರೂಪಿಸಲಾಗಿದೆ ಪರಿಷತ್‌ನಲ್ಲಿ ನೂರಾರು ಪ್ರಶಸ್ತುಗಳು ಇವೆ ಅವು ಬೆಂಗಳೂರನ್ನು ಮಾತ್ರವೇ ಸುತ್ತುವರಿದಿದೆ ಮುಂದಿನ ದಿನದಲ್ಲಿ ಅವು ಬೆಂಗಳೂರನ್ನು ಬಿಟ್ಟು ಹೊರಗಡೆ ತರಬೇಕೆನ್ನುವುದು ನನ್ನ ಆಶಯವಾಗಿದೆ. ಇದ್ದಲ್ಲದೆ ಸಾವಿರಾರು ದತ್ತಿನಿಧಿಗಳಿವೆ ಅವುಗಳ ಬಳಕೆ ಸಹಾ ಸರಿಯಾದ ರೂಪದಲ್ಲಿ ಅಗಬೇಕಿದೆ ಇದಕ್ಕೆ ಮತದಾರರ ಆರ್ಶಿವಾದ ಅಗತ್ಯವಾಗಿದೆ ಮೇ.೯ ರಂದು ನಡೆಯುವ ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ದಯಾನಂದ ಕಟ್ಟೆ ಹಾಗೂ ವಿಜಯಕುಮಾರ್ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *