March 28, 2024

Chitradurga hoysala

Kannada news portal

ಒಂದು ಗ್ಲಾಸ್ ನಿಂಬೆಹಣ್ಣು ರಸದಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ ಗೊತ್ತೆ..

1 min read

ನವದೆಹಲಿ :  ಬೆಳಗೆದ್ದು ಲಿಂಬೆ ಶರಬತ್ತು  (Lime Juice) ಕುಡಿಯುವ ಅಭ್ಯಾಸ ನಿಮಗಿದ್ದರೆ, ಖಂಡಿತಾ ನಿಮಗೆ ಅದರಿಂದ ಸಾಕಷ್ಟು ಆರೋಗ್ಯ (health Benefits) ಲಾಭ ಇದೆ.  ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್, ಮಿನರಲ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ತ್ವಚೆ ಕಾಂತಿಯುತವಾಗುತ್ತದೆ.  ಶರೀರ ಡಿಟಾಕ್ಸ್ ಆಗುತ್ತದೆ.  ಅದನ್ನೂ ಬಿಟ್ಟು ಇನ್ನೂ ಒಂದಷ್ಟು ಶಾರೀರಿಕ ಲಾಭಗಳಿವೆ.

1.ಬೊಜ್ಜು ಕರಗುತ್ತದೆ :
ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ (warm water) ಸ್ವಲ್ಪ ನಿಂಬೆ ರಸ (Lime Juice) ಸೇರಿಸಿ ಬೆಳಗ್ಗೆ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ದಿನಕ್ಕೆರಡು ಸಲ ಕುಡಿದರೆ ಇನ್ನೂ ಒಳ್ಳೆಯದು. ಲಿಂಬೆ ರಸ ದೇಹದ ಬ್ಯಾಲೆನ್ಸ್ ಕಾಪಾಡುತ್ತದೆ. ಜೊತೆಗೆ ಜೀರ್ಣ ಕ್ರಿಯೆಯನ್ನೂ ಸಂತುಲನದಲ್ಲಿಡುತ್ತದೆ.  ಇದರ ನಿಯಮಿತ ಸೇವನೆಯಿಂದ ತೂಕ ಕೂಡಾ ಕಡಿಮೆಯಾಗುತ್ತದೆ. 

2.ತ್ವಚೆಯ ಸೌಂದರ್ಯ ಹೆಚ್ಚಿಸುತ್ತದೆ :
ಲಿಂಬೆಯಲ್ಲಿ ಭರ್ಜರಿ ವಿಟಮಿನ್ ಸಿ ಸಿಗುತ್ತದೆ. ಇದು ತ್ವಚೆಯ (Skin) ಆರೋಗ್ಯಕ್ಕೆ ಲಾಭದಾಯಕ. ಇದರಿಂದ ಚರ್ಮ ರೋಗಗಳೂ ದೂರವಾಗುತ್ತವೆ.

3.ಜೀರ್ಣ ಕ್ರೀಯೆ ಸರಾಗ :
ಲಿಂಬೆ ರಸ ಶರೀರವನ್ನು ಡಿಟಾಕ್ಸ್ ಮಾಡುತ್ತದೆ. ಅಂದರೆ, ದೇಹದ ವಿಷಕಾರಕಗಳನ್ನು ಹೊರಗೆ ಹಾಕಲು ನೆರವಾಗುತ್ತದೆ.  ದಿನವೂ ನಿಂಬೆ ಶರಬತ್ತು ಕುಡಿಯುವುದರಿಂದ ಜೀರ್ಣ ಕ್ರಿಯೆ (digestion) ಸುಲಭವಾಗುತ್ತದೆ. ಹೊಟ್ಟೆಯ ರೋಗಗಳು ಗುಣವಾಗುತ್ತದೆ. 

4.ರೋಗ ನಿರೋಧಕತೆ ಹೆಚ್ಚಿಸುತ್ತದೆ :
ನಿಮಗೆ ಗೊತ್ತೇ ಇದೆ. ಲಿಂಬೆ ಹಣ್ಣಿನಲ್ಲಿ ಭರ್ಜರಿಯಾಗಿ ವಿಟಮಿನ್ ಸಿ ಸಿಗುತ್ತದೆ.  ವಿಟಮಿನ್ ಸಿ ನಮ್ಮಲ್ಲಿ ರೋಗ ನಿರೋಧಕ (Immunity) ಶಕ್ತಿಯನ್ನು ಹೆಚ್ಚಿಸುತ್ತದೆ. 

5.ಬಿಪಿ ನಿಯಂತ್ರಣದಲ್ಲಿಡುತ್ತದೆ :
ಲಿಂಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಸಿಗುತ್ತದೆ. ಇದು ಬಿಪಿ (BP) ನಿಯಂತ್ರಣದಲ್ಲಿಡಲು ನೆರವಾಗುತ್ತದೆ

6.PH ಲೆವೆಲ್ ಸರಿಯಾಗಿಡುತ್ತದೆ:
ಲಿಂಬೆ ಹಣ್ಣಿನಲ್ಲಿ citric ಮತ್ತು  ascorbic ಆಸಿಡ್ ಭರ್ಜರಿಯಾಗಿ ಸಿಗುತ್ತದೆ.  ಇದರಿಂದ ಮೆಟಾಬಾಲಿಕ್ ಸರಿಯಾಗುತ್ತದೆ. ಜೊತೆಗೆ PH ಮಟ್ಟ ಕೂಡಾ ಸರಿಯಾಗುತ್ತದೆ.

About The Author

Leave a Reply

Your email address will not be published. Required fields are marked *