April 23, 2024

Chitradurga hoysala

Kannada news portal

ವೀಕೆಂಡ್ ಕರ್ಫೂ: 2 ದಿನ ಫುಲ್ ಲಾಕ್ ಏನಿರುತ್ತೆ, ಏನಿರಲ್ಲ ಡಿಸಿ ಏನ್ ಹೇಳಿದ್ದಾರೆ ನೋಡಿ.

1 min read

ಜಿಲ್ಲೆಯಲ್ಲಿ ಮೇ 22ರ ಬೆಳಿಗ್ಗೆ 10 ರಿಂದ ಮೇ 24ರ ಬೆಳಿಗ್ಗೆ 6 ರವೆರೆಗೆ ವಾರಾಂತ್ಯ ಕಫ್ರ್ಯೂ
****
ಚಿತ್ರದುರ್ಗ,ಮೇ.21:
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ಒಂದು ವಾರದಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಸೋಂಕು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುತ್ತದೆ. ಆದ್ದರಿಂದ ಸರ್ಕಾರ ಆದೇಶದ ಜೊತೆಯಲ್ಲಿ ಹೆಚ್ಚುವರಿಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೇ 22ರ ಬೆಳಿಗ್ಗೆ 10 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
ಅಗತ್ಯ ಸೇವೆಗಳಾದ ವೈದ್ಯಕೀಯ ತುರ್ತು ಸೇವೆಗಳು, ತುರ್ತು ಸೇವೆ ಒದಗಿಸುವ ಇಲಾಖೆಗಳು, ಔಷಧಿ ಅಂಗಡಿಗಳು, ಎಲ್ಲಾ ಆಸ್ಪತ್ರೆ, ಪೆಟ್ರೋಲ್ ಪಂಪ್‍ಗಳು, ಹಾಲಿನ ಬೂತ್‍ಗಳು (ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ) ಸರ್ಕಾರಿ ವಾಹನಗಳ ಓಡಾಟ, ಅಗತ್ಯ ಸೇವೆಗಳ ಇಲಾಖೆಯ ಸಿಬ್ಬಂದಿ ಓಡಾಟ, ಈಗಾಗಲೇ ಅನುಮತಿ ನೀಡಿರುವ ಕಾರ್ಯಕ್ರಮಗಳು, ದಿನ ಪತ್ರಿಕೆ ವಿತರಣೆ, ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳು, ಆಮ್ಲಜನಕ ಸೇವೆಗಳು, ಇ-ಕಾಮರ್ಸ್ ಸೇವೆಗಳು, ಹೋಟೆಲ್‍ಗಳಲ್ಲಿ ತಿಂಡಿ, ಊಟ ಪಾರ್ಸೆಲ್ ಪಡೆಯಲು, ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳನ್ನು  ಮೇ 22ರ ಬೆಳಿಗ್ಗೆ 10 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಿ ಆದೇಶಿಸಲಾಗಿದೆ.
ಈ  ಆದೇಶದ ಜೊತೆಯಲ್ಲಿ ಈಗಾಗಲೇ ಸಿ.ಆರ್.ಪಿ.ಸಿ 144 ರಡಿಯಲ್ಲಿ ಹೊರಡಿಸಿರುವ ನಿಷೇಧಾಜ್ಞೆ ಆದೇಶವು ಸಹ ಜಾರಿಯಲ್ಲಿರುತ್ತದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು  ನಿರ್ವಹಣಾ ಕಾಯ್ದೆ-2005 ರಡಿ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 188 ರಡಿ ಶಿಸ್ತು ಕ್ರಮಕೈಗೊಳ್ಳಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

About The Author

Leave a Reply

Your email address will not be published. Required fields are marked *