April 18, 2024

Chitradurga hoysala

Kannada news portal

ಗುಡ್ ನ್ಯೂಸ್:ಸಹಾಯಕ ಆರೋಗ್ಯ ಸಿಬ್ಬಂದಿ ತರಬೇತಿ ಅರ್ಜಿ ಆಹ್ವಾನ

1 min read

ಚಿತ್ರದುರ್ಗ,ಮೇ.25:
 ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ಮಹಾಮಾರಿಯ ಪ್ರಭಾವವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಪ್ರಧಾನಮಂತ್ರಿ ಕೌಶಲ್ಯಾ ವಿಕಾಸ 3.0 ಯೋಜನೆಯಡಿಯಲ್ಲಿ ಹೆಚ್ಚಿನ ಸಹಾಯಕ ಆರೋಗ್ಯ ಸಿಬ್ಬಂದಿಗೆ ಒಂದು ತಿಂಗಳ ತರಬೇತಿ ನೀಡಿ, ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪಿಯುಸಿ-ವಿಜ್ಞಾನ ಕೋರ್ಸ್ ಮುಗಿಸಿದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್-ಬೇಸಿಕ್, ಎಸ್‍ಎಸ್‍ಎಲ್‍ಸಿ/8ನೇ ತರಗತಿ ಓದಿದವರಿಗೆ ಜನರಲ್ ಡ್ಯೂಟಿ ಅಸಿಸ್ಟಂಟ್, ಎಸ್‍ಎಸ್‍ಎಲ್‍ಸಿ/8ನೇ ತರಗತಿ ಓದಿದವರಿಗೆ ಹೋಂ ಹೆಲ್ತ್ ಏಡ್, ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪ್ಲೊಮಾ ಓದಿದವರಿಗೆ ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟಂಟ್, ಪಿಯುಸಿ-ವಿಜ್ಞಾನ ಓದಿದವರಿಗೆ ಫಿಲೆಬೋಟಾಮಿಸ್ಟ್ ಮತ್ತು ಎಸ್‍ಎಸ್‍ಎಲ್‍ಸಿ ಓದಿದವರಿಗೆ ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ ಕೋರ್ಸ್‍ಗಳಿಗೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಯವರ ಕಚೇರಿಯಲ್ಲಿ ದೂರವಾಣಿ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೋಂದಣಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-234050, ರವಿ, ಸಹಾಯಕ ನಿರ್ದೇಶಕರು, ಮೊಬೈಲ್ ಸಂಖ್ಯೆ 9901273756, ವೇವಣ್ಣ, ಸಹಾಯಕ ಸಾಂಖ್ಯಿಕ ಅಧಿಕಾರಿ, ಮೊಬೈಲ್ ಸಂಖ್ಯೆ 9972604772 ಮತ್ತು ಅತೀಕ್ ರೆಹಮಾನ್, ಅಭಿಯಾನ ವ್ಯವಸ್ಥಾಪಕರು, ಮೊಬೈಲ್ ಸಂಖ್ಯೆ 8970933486 ಇ-ಮೇಲ್ ಐಡಿ-ಜsಜoಛಿಣಚಿ@gmಚಿiಟ.ಛಿom ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಿ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *