April 19, 2024

Chitradurga hoysala

Kannada news portal

ಕಾರ್ಪೋರೇಟ್ ಕುಳಗಳ ತಾಳಕ್ಕೆ ಕೇಂದ್ರ ಸರ್ಕಾರ ಕುಣಿಯುತ್ತಿದೆ: ಕೆ ಸಿ ಹೊರಕೇರಪ್ಪ

1 min read

ಹಿರಿಯೂರು: ರೈತರು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ ರೈತರಿಗೆ ಸಂಕಷ್ಟ ಬಂದಾಗ ಇರುವ ಸಮಸ್ಯೆಗಳನ್ನು ನಿವಾರಿಸಬೇಕಾದ ಕೇಂದ್ರ ಸರ್ಕಾರ ಕಾರ್ಪೋರೆಟ್ ಕುಳಗಳ ತಾಳಕ್ಕೆ ಕುಣಿಯುತ್ತಿದೆ ಎಂದು ರೈತ ಮುಖಂಡ ಹೊರಕೇರಪ್ಪ ಕೇಂದ್ರ ಸರ್ಕಾರ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಆದಿಹೊಲ ಬಳಿಯಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಮಾತ‌ನಾಡಿ ಸರ್ಕಾರ ರೈತ ವಿರೋಧಿ ಕಾಯ್ದೆ ಗಳನ್ನ ಜಾರಿಮಾಡಿದ್ದು ವಿರೋಧಿ ಕಾಯ್ದೆಗಳನ್ನ ಹಿಂಪಡೆಯುವಂತೆ ಕಳೆದ ಆರು ತಿಂಗಳುಗಳಿಂದ ದೆಹಲಿಯಲ್ಲಿ ರಾಕೇಶ್ ಟಿಕಾಯತ್ ನೇತ್ರುತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕನಿಷ್ಠ ಸೌಜನ್ಯಕ್ಕಾದರು ಸ್ಪಂದಿಸದಿರುವುದು ಖಂಡನೀಯ
ಕೇಂದ್ರ ಸರ್ಕಾರ ರೈತರನ್ನ ನಿರ್ಲಕ್ಷಿಸುತ್ತಿದ್ದು ರೈತ ವಿರೋಧಿ ಕಾಯ್ದೆ ಜಾರಿಗೆ ತರಬೇಡಿ ಅಂದರೆ ಕೇಳುತ್ತಿಲ್ಲ ಪ್ರತಿಯಾಗಿ ಪ್ರತಿಭಟನೆಯ ಕೆಲ ಹಂತದಲ್ಲಿ ರೈತರ ಮೇಲೆ ದಬ್ಬಾಳಿಕೆಯನ್ನ ಪ್ರದರ್ಶಿಸಿ ದುರ್ನಡತೆ ತೋರಿ ರೈತರ ಕೆಂಗಣ್ಣಿಗೆ ಗುರಿಯಾದದ್ದು ನಾಚಿಕೇಡಿನ ಸಂಗತಿ ಆಡಳಿತದ ಹೆಸರಿನಲ್ಲಿ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೊಳಿಸಿರುವುದು ಸರಿಯಲ್ಲ ಕೊಡಲೇ ರೈತರ ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು
ಸಾಮಾಜಿಕ ಕಾರ್ಯಕರ್ತ ಆದಿವಾಲ ಚಮನ್ ಷರೀಫ್ ಮಾತನಾಡಿ ಚಳಿ ಗಾಳಿ ಮಳೆ ಹೆಚ್ಚುತ್ತಿರುವ ಕರೋನಾ ರೋಗದ ಕರಿನೆರಳಿನ ಮದ್ಯೆ ಹೀಗೆ ಎಲ್ಲವನ್ನು ಲೆಕ್ಕಿಸದೇ ಧರಣಿ ನಿರತ ರೈತರನ್ನ ಇ ವರೆಗೂ ಸ್ಪಂದಿಸದಿರುವುದು ಕೇಂದ್ರ ಸರ್ಕಾರದ ಅಸಹನೀಯತೆ ಅಸಮಾನತೆ ಮೀತಿಮೀರಿದೆ
ದೇಶದ ರೈತರಿಗೆ ಗಟ್ಟಿ ಚಿಂತನೆಯಲ್ಲಿ ರೂಪುಗೊಂಡ ಯೋಜನೆಗಳ ಅವಶ್ಯಕತೆಯಿದೆ ಜನರ ಹಸಿವನ್ನ ನೀಗಿಸಬಲ್ಲವರನ್ನು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆಯಿಲ್ಲ ರಸಗೊಬ್ಬರ ದುಬಾರಿಯಾಗಿದೆ ರೈತರ ಸೋಗಿನಲ್ಲಿ ದಲ್ಲಾಳಿಗಳ ದಬ್ಬಾಳಿಕೆ ಗಳಿಂದ ರೈತನ ಪರಿಸ್ಥಿಪಿ ಶೋಚನೀಯವಾಗಿದೆ ಕೇಂದ್ರ ಸರ್ಕಾರ ಸಾಮಾಜಿಕ ಬದ್ದತೆ ಸಮಾನತೆಯ ಮೂಲಕ ಪ್ರಭುತ್ವದ ಗಟ್ಟಿಕಂಬಗಳಾದ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು
ಆದಿವಾಲ ಗ್ರಾಮ ರೈತ ಸಂಘದ ಅಧ್ಯಕ್ಷ ಅನ್ಸರ್ ಅಲಿ ರಿಯಾಜ್ ಖಾಲೀಲ್ ಬಾಷ ಬಾಲಚಂದ್ರನ್ ಮಂಜುನಾಥ್ ಇತರರು ಇದ್ದರು.

About The Author

Leave a Reply

Your email address will not be published. Required fields are marked *