March 28, 2024

Chitradurga hoysala

Kannada news portal

ಆಕ್ರಮ ಮಧ್ಯ ಮಾರಟದ ಮೇಲೆ ಬಲೆ ಬೀಸಿದ ಅಬಕಾರಿ ಇಲಾಖೆ ಜಿಲ್ಲೆಯಲ್ಲಿ 60 ಪ್ರಕರಣ ದಾಖಲು

1 min read

ಚಿತ್ರದುರ್ಗ,ಮೇ.27:
ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ಸೋಂಕು ತಡೆಗಟ್ಟಲು ಮದ್ಯದಂಗಡಿಯ ವ್ಯವಹಾರದ ವೇಳೆಯನ್ನು ಏಪ್ರಿಲ್ 27 ರಿಂದ ಮುಂದಿನ ಆದೇಶದವರೆಗೂ ಪರಿಷ್ಕರಿಸಿ ಬೆಳಿಗ್ಗೆ 6  ಗಂಟೆಯಿಂದ 10 ಗಂಟೆಯವರೆಗೆ ಸೀಮಿತಗೊಳಿಸಿ ಆದೇಶಿಸಲಾಗಿರುತ್ತದೆ.
ಚಿತ್ರದುರ್ಗ ಜಿಲ್ಲೆಯ ಅಬಕಾರಿ ಇಲಾಖೆಯು ಜಾರಿ ಮತ್ತು ತನಿಖೆ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ರಸ್ತೆಗಸ್ತು, ರಸ್ತೆಕಾವಲು, ಅಬಕಾರಿ ದಾಳಿಗಳನ್ನು ನಡೆಸಿ, ಏಪ್ರಿಲ್ 27 ರಿಂದ ಮೇ 25 ರವರೆಗೆ 23 ಘೋರ ಪ್ರಕರಣಗಳನ್ನು ಹಾಗೂ ಅಬಕಾರಿ ಕಾಯ್ದೆ ಕಲಂ 15ಎ ಅಡಿ 35 ಪ್ರಕರಣಗಳನ್ನು ಮತ್ತು ಎನ್‍ಡಿಪಿಎಸ್ ಕಾಯ್ದೆ ಅಡಿ 02 ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ. ದಾಖಲು ಮಾಡಲಾದ ಪ್ರಕರಣಗಳಿಂದ ಒಟ್ಟು 177 ಲೀಟರ್ ಮದ್ಯ, 16 ಲೀಟರ್ ಬಿಯರ್ ಹಾಗೂ 815 ಗ್ರಾಂ ಹಸಿ ಗಾಂಜಾ ಮತ್ತು 580 ಗ್ರಾಂ ಒಣ ಗಾಂಜಾವನ್ನು ಜಫ್ತು ಪಡಿಸಲಾಗಿದೆ. ಮದ್ಯ ಸಾಗಾಣಿಕೆಗೆ ಬಳಸಲಾದ 15 ದ್ವಿಚಕ್ರ ವಾಹನಗಳನ್ನು ಮತ್ತು 01 ಕಾರ್ ವಾಹನವನ್ನು ಜಪ್ತುಪಡಿಸಲಾಗಿದೆ.
ಕೋವಿಡ್-19ರ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ, ಸಾಗಾಣಿಕೆ, ಮಾರಾಟ ಹಾಗೂ ಮಾದಕ ಪದಾರ್ಥಗಳ ಸಂಗ್ರಹಣೆ, ಸಾಗಾಣಿಕೆ, ಮಾರಾಟ ಇವುಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆಯು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಘಟನೆಗಳು ಕಂಡುಬಂದಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಲು ಸಾರ್ವಜನಿಕರನ್ನು ಕೋರಲಾಗಿದೆ.
 ಅಬಕಾರಿ ಇಲಾಖೆಯ ಅಧಿಕಾರಿಗಳ ವಿವರ ಇಂತಿದೆ. ಚಿತ್ರದುರ್ಗ ವಲಯ ವ್ಯಾಪ್ತಿಗೆ ಹೆಚ್.ದೇವರಾಜ್, ಅಬಕಾರಿ ನಿರೀಕ್ಷಕರು-9611478378. ಹೊಳಲ್ಕೆರೆ ವಲಯ ವ್ಯಾಪಿಗೆ ಕೆ.ಲತಾ, ಅಬಕಾರಿ ನಿರೀಕ್ಷಕರು-9731057779. ಹೊಸದುರ್ಗ ವಲಯ ವ್ಯಾಪ್ತಿಗೆ ಪ್ರಮೀಳಾ, ಅಬಕಾರಿ ನಿರೀಕ್ಷಕರು-9591195650, ಎ.ಜೆ. ನಾಗರಾಜ್, ಅಬಕಾರಿ ಉಪನಿರೀಕ್ಷಕರು-9980298676, ಕೆ.ದಿನೇಶ್, ಅಬಕಾರಿ ಉಪನಿರೀಕ್ಷಕರು-7760759512. ಚಿತ್ರದುರ್ಗ ಉಪವಿಭಾಗ ವ್ಯಾಪ್ತಿಗೆ ಶಿವಹರಳಯ್ಯ, ಅಬಕಾರಿ ಉಪ ಅಧೀಕ್ಷಕರು-9449597059, ಸಿ.ಶಿವಪ್ರಸಾದ್, ಅಬಕಾರಿ ನಿರೀಕ್ಷಕರು-9449597060, ಎನ್.ನಾಗರಾಜ್, ಅಬಕಾರಿ ಉಪ ನಿರೀಕ್ಷಕರು-9741231022. ಚಳ್ಳಕೆರೆ ವಲಯ ವ್ಯಾಪ್ತಿಗೆ ಬಿ.ಆರ್.ಕೃಷ್ಣಸ್ವಾಮಿ, ಅಬಕಾರಿ ನಿರೀಕ್ಷಕರು-8861393358. ಹಿರಿಯೂರು ವಲಯ ವ್ಯಾಪ್ತಿಗೆ ಪಿ.ಜಿ.ರಾಘವೇಂದ್ರ, ಅಬಕಾರಿ ನಿರೀಕ್ಷಕರು-8147607438, ಟಿ.ಕರಿಬಸಪ್ಪ, ಅಬಕಾರಿ ಉಪನಿರೀಕ್ಷಕರು-9591222375. ಮೊಳಕಾಲ್ಮುರು ವಲಯ ವ್ಯಾಪ್ತಿಗೆ ಸಾಧತ್ ಉಲ್ಲಾ, ಅಬಕಾರಿ ನಿರೀಕ್ಷಕರು-9844505171. ಹಿರಿಯೂರು ಉಪವಿಭಾಗ ವ್ಯಾಪ್ತಿಗೆ ಎ.ವನಿತಾ, ಅಬಕಾರಿ ನಿರೀಕ್ಷಕರು-9902751947. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಗೆ ಡಿ.ಬಿ.ಅವಿನಾಶ್, ಅಬಕಾರಿ ನಿರೀಕ್ಷಕರು (ಪ್ರ)-8971723845, 08194-222215, ಸಿದ್ದೇಶ್‍ನಾಯ್ಕ್, ಅಬಕಾರಿ ಉಪನಿರೀಕ್ಷಕ-7204466541 ಇವರಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *