Recent Posts

October 16, 2021

Chitradurga hoysala

Kannada news portal

ತಮ್ಮ ಆರೋಗ್ಯ ತಮ್ಮ ಕೈಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾದರೆ ತಕ್ಷಣ ಚಿಕಿತ್ಸೆ ಪಡೆಯಿರಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

1 min read

ಚಿತ್ರದುರ್ಗ:ಚಿತ್ರದುರ್ಗ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ನೇತೃತ್ವದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರ 7 ವರ್ಷಗಳ ಆಡಳಿತ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರದ ಬಾಲಭವನ, ಕಂದಾಯ ಗಿರಿ ನಗರ ಹಾಗು ಗಾಂಧಿನಗರದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರಿಗೆ ಕೋವಿಡ್-೧೯ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದರು. ನಂತರ
ಮಠದ ಕುರುಬರಹಟ್ಟಿಯ M.R ನಗರದಲ್ಲಿ ಕೋವಿಡ್ -19ರ ರೋಗದ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸ ಕೊರೋನಾ ವಾರಿಯರ್ಸ್‌ ಗಳಿಗೆ ಸುರಕ್ಷತಾ ಕಿಟ್ ವಿತರಣೆ ಮಾಡಿದರು.
ಕೋವಿಡ್ ನಿಯಮ ಎಲ್ಲಾ ಪಾಲಿಸಿ ಕಡ್ಡಾಯವಾಗಿ ಮಾಸ್ಕ್ ,ಸ್ಯಾನೀಟೈಸರ್ ಬಳಸಬೇಕು. ಕೋವಿಡ್ ಇಳಿಕೆ ಜನರ ಕೈಯಲಿದೆ ಎಂದರು. ಜಿಲ್ಲಾಡಳಿತಕ್ಕೆ ಜನರು ಸಹಕಾರ ನೀಡಿದರೆ ಹತೋಟಿಗೆ ಬರಲು ಹೆಚ್ಚಿನ ಸಹಕಾರಿ ಎಂದರ.
ಜಿಲ್ಲಾ ಆರೋಗ್ಯ ನೋಡಲ್ ಅಧಿಕಾರಿ ಕುಮಾರ್ ಸ್ವಾಮಿ, ಜಿಲ್ಲಾ ಅಧ್ಯಕ್ಷ ಮುರುಳಿ ಎ, ಜಿಲ್ಲಾ ಉಪಾಧ್ಯಕ್ಷ ಸಂಪತ್ ಕುಮಾರ್ ಜಿ ಎಸ್, ಮಾದ್ಯಮ ವಕ್ತಾರ ನಾಗರಾಜ ಬೇದ್ರೆ, ಮುಖಂಡ ಶಿವಣ್ಣಚಾರ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಶಶಿಧರ್ ಜೆ, ಕಾರ್ಯದರ್ಶಿ ಪ್ರದೀಪ್. ಪ್ರಸನ್ನ, ಉಪಾಧ್ಯಕ್ಷ ಕಾರ್ತೀಕ್, ಒಬಿಸಿ ನಗರ ಅಧ್ಯಕ್ಷ ಕೃಷ್ನ ಎನ್, ನಗರ ಯುವ ಮೋರ್ಚಾ ಅಧ್ಯಕ್ಷ ರಾಮ್, ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳು, ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು. ಈ ಸದಂರ್ಭದಲ್ಲಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಭಾನುಮೂರ್ತಿ ಲಸಿಕೆ ಹಾಕಿಸಿ ಕೊಂಡರು.

Leave a Reply

Your email address will not be published. Required fields are marked *

You may have missed