Recent Posts

October 16, 2021

Chitradurga hoysala

Kannada news portal

ಕೊರೋನಾ ರೋಗಕ್ಕಿಂತ ಬ್ಲಾಕ್ ಫಂಗಸ್ ಹೆಚ್ಚು ಅಪಯಕಾರಿ ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಿ ಸರ್ಕಾರಕ್ಕೆ ಒತ್ತಾಯ: ಕೆಪಿಸಿಸಿ ಮಾಧ್ಯಮ ವಕ್ತಾರ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

1 min read

ಕೊರೋನಾ ರೋಗಕ್ಕಿಂತ ಅಪಾಯಕಾರಿಯಾದ ಬ್ಲಾಕ್ ಫಂಗಸ್ ರೋಗ ಚಿತ್ರದುರ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಈ ರೋಗಕ್ಕೆ ಸರ್ಕಾರಿ ಆಸ್ಪತ್ರೆ ಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈ ಗೊಳ್ಳಬೇಕು.

ಸದ್ಯದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 50 ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ ಖಾಸಗಿ ಆಸ್ಪತ್ರೆ ಗಳಲ್ಲಿ ಬ್ಲಾಕ್ ಫಂಗಸ್ ಶಸ್ತ್ರ ಚಿಕಿತ್ಸೆಗೆ 2ರಿಂದ 3ಲಕ್ಷ ರೂಪಾಯಿ ಪಡೆಯಲಾಗುತ್ತಿದೆ. ಹೀಗಾಗಿ ಬಡವರು ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದು ಅಸಾಧ್ಯದ ಮಾತು. ಸರ್ಕಾರ ಬ್ಲಾಕ್ ಫಂಗಸ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳುತ್ತಿದೆ. ಆದರೆ ವಾಸ್ತವ ಚಿತ್ರಣವೇ ಬೇರೆಯಾಗಿದೆ. ಅಲ್ಪ ಸ್ವಲ್ಪ ಹಣವಿದ್ದವರು ಚಿತ್ರದುರ್ಗದ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆದರೆ ಬಡರೋಗಿಗಳ ಪಾಡೇನು ಎನ್ನುವ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಯೋಚಿಸಬೇಕಿದೆ.

ಕೋವಿಡ್ ಎರಡನೇ ಅಲೆಯು ವ್ಯಾಪಕವಾಗಿದ್ದ ಸಂದರ್ಭದಲ್ಲಿ ಹಾಸಿಗೆ, ಆಕ್ಸಿಜನ್, ಔಷಧಿಗಾಗಿ ಹಾಹಾಕಾರ ಉಂಟಾಗಿತ್ತು ಇದೀಗ ಬ್ಲಾಕ್ ಫಂಗಸ್ ರೋಗದ ವಿಷಯದಲ್ಲಿಯೂ ಇದೇ ರೀತಿಯ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆ ಇದೆ ಹೀಗಾಗಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗೆ ವಿಶೇಷ ವಾರ್ಡ್ ಆರಂಭಿಸಬೇಕು.ಈ ರೋಗಕ್ಕೆ ನೀಡುವ ಅಂಪೊಟೇರಿಸಿನ್. ಬಿ. ಇಂಜೆಕ್ಷನ್, ಔಷಧಿ ಅಂಗಡಿಗಳಲ್ಲಿ ದೊರೆಯುತ್ತಿಲ್ಲ ಹೀಗಾಗಿ ಸರ್ಕಾರಿ ಆಸ್ಪತ್ರೆ ಗಳಲ್ಲಿ ಕಡ್ಡಾಯವಾಗಿ ಈ ಔಷಧಿ ದೊರೆಯುವಂತೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತ ಕ್ರಮ ಕೈ ಗೊಳ್ಳಬೇಕು.

ಇನ್ನು ಕೆಲವು ದಿನಗಳಲ್ಲಿ ಮುಂಗಾರು ಬಿತ್ತನೆ ಆರಂಭವಾಗಲಿದೆ ರೈತರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ಒದಗಿಸಲು ಸರ್ಕಾರ ಮುಂದಾಗಬೇಕಿದೆ. ಸತತ ಲಾಕ್ ಡೌನ್ ಹಾಗೂ ಬೆಲೆ ಕುಸಿತದಿಂದ ರೈತ ಸಮುದಾಯ ಅತೀವ ತೊಂದರೆಗೆ ಸಿಲುಕಿದೆ ಇಂಥಹ ಸಂಕಷ್ಟದ ಸಮಯದಲ್ಲಿ ಅನ್ನದಾತನ ನೆರವಿಗೆ ಧಾವಿಸುವುದು ಸರ್ಕಾರದ ಜವಾಬ್ದಾರಿ ಯಾಗಿದೆ.

-ಶ್ರೀ ಬಿ.ಎನ್.ಚಂದ್ರಪ್ಪ
ಮಾಜಿ ಸಂಸದರು, ಕೆಪಿಸಿಸಿ. ಮಾಧ್ಯಮ ವಕ್ತಾರರು ಚಿತ್ರದುರ್ಗ.

Leave a Reply

Your email address will not be published. Required fields are marked *

You may have missed