May 19, 2024

Chitradurga hoysala

Kannada news portal

ರಾಜ್ಯದಲ್ಲಿ ಕೋವಿಡ್ 5199 ಪ್ರಕರಣ ಚಿತ್ರದುರ್ಗದಲ್ಲಿ ಎಷ್ಟು?

1 min read

ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 5199 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96,141 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 82 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 1,878 ಕ್ಕೇರಿದೆ.
ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ ಮತ್ತೆ 53 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ದಾಖಲೆ ಪ್ರಮಾಣದಲ್ಲಿ, ಅತಿಹೆಚ್ಚು ಅಂದರೆ ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯಲ್ಲಿ ಸೋಂಕಿತರು ವರದಿ ಬಂದಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 401 ಕ್ಕೆ ಏರಿಕೆಯಾದಂತಾಗಿದೆ.
ಸೋಂಕಿತರ ಸಂಖ್ಯೆ 401 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 06 ಜನ ಮೃತಪಟ್ಟಿದ್ದಾರೆ.

About The Author

Leave a Reply

Your email address will not be published. Required fields are marked *