April 18, 2024

Chitradurga hoysala

Kannada news portal

ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ* ಹೊಳಲ್ಕೆರೆ ತಾಲ್ಲೋಕು ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಟಿಪಿ ಉಮೇಶ್

1 min read

*ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ*

ಹೊಳಲ್ಕೆರೆ ತಾಲ್ಲೋಕು ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಟಿಪಿ ಉಮೇಶ್ ರವರು ಕರೋನಾ ನಂತರ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ ತಕ್ಷಣ ಶಾಲೆಗೆ ಹಾಜರಾಗಿ ತಮ್ಮ ಶಾಲೆಯ ಸುಸ್ಥಿರ ಭೌತಿಕ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದು ಕಲಿಸಲು ಶಿಕ್ಷಕರಲ್ಲಿರುವ ಉತ್ಸಾಹವನ್ನು ತೋರಿಸುತ್ತಿದೆ.

ಟಿಪಿ ಉಮೇಶ್ ಶಿಕ್ಷಕರನ್ನು ಈ ಕುರಿತಂತೆ ಬುಧವಾರ “ಹೊಯ್ಸಳ ಪತ್ರಿಕೆ” ಮಾತಾಡಿಸಿದಾಗ ಅವರು ” ಸರ್ ಇಲಾಖೆಯ ಸೂಚನೆಯಂತೆ ನಿನ್ನೆಯಿಂದ ಶಾಲೆಗೆ ಹಾಜರಾಗಿದ್ದೇವೆ. ನಮ್ಮ ಶಾಲೆಯಲ್ಲಿ ಒಂದರಿಂದ ಐದನೆ ತರಗತಿವರೆಗೆ ಎಂಬತ್ತು ಮಕ್ಕಳು ದಾಖಲಾಗಿದ್ದಾರೆ. ಈಗ ಶಾಲೆಯ ಭೌತಿಕ ಸ್ವಚ್ಚತೆ ಮಾಡಿ ಅಂದ ಚಂದಗೊಳಿಸಿ, ಮಕ್ಕಳು ಶಾಲೆಗೆ ಬರಲು ತಯಾರು ಮಾಡುತ್ತಿದೆವೆ, ಸರ್ಕಾರ ಆದೇಶ ಮಾಡಿದರೆ ಶಾಲೆಯಲ್ಲಿ ಕಲಿಸುತ್ತೇವೆ, ಇಲ್ಲವೆಂದರೆ “ತರಗತಿವಾರು ವಾಟ್ಸಪ್ ಗುಂಪು ರಚಿಸಿ” ನಿತ್ಯ ಅವರಿಗೆ ಪಾಠಗಳ ಕಲಿಕೆಯ ಮಾರ್ಗದರ್ಶನ ಮಾಡುವೆವು. ಸ್ಮಾರ್ಟ್ ಫೋನ್ ಇಲ್ಲದ ಮಕ್ಕಳಿಗೆ ಕೀಪ್ಯಾಡ್ ಇದ್ದರು ಸಹ ಅವರು ನನಗೆ ಮಿಸ್ ಕಾಲ್ ಕೊಟ್ಟರೆ ನಾನೆ ಕರೆ ಮಾಡಿ ಅವರು ಕಲಿಯುವ ಪಾಠಗಳ ಟಿಪ್ಪಣಿ ಕೊಡುತ್ತೇನೆ. ಫೋನ್ ಇಲ್ಲದ ಮಕ್ಕಳಿಗೆ ನೆರೆಹೊರೆ ಫೋನ್ ಇರುವ ಮಕ್ಕಳ ಸಂಪರ್ಕ ಮಾಡಿಸಿ ಕಲಿಕೆ ನಿರಂತರವಾಗಿ ನಡೆಯಲು ಪ್ರಯತ್ನಿಸುವೆವು. ಕರೋನಾ ಸುರಕ್ಷಿತ ಮಾರ್ಗಸೂಚಿಯಂತೆ ಕಲಿಸಲು ಸಿದ್ಧಗೊಂಡಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಕ್ಷೇತ್ರ ಶಿಕ್ಷಣಾರ್ಥಿಗಳಾದ ಸಿ.ಎಂ.ತಿಪ್ಪೇಸ್ವಾಮಿಯವರು ನಿರಂತರ ಸಲಹೆ ಸೂಚನೆ ನೀಡುತ್ತಿರುತ್ತಾರೆ ಎಂದು ಉಮೇಶ್ ” ಹೇಳಿದರು.
ಶಾಲೆ ಸ್ವಚ್ಚತೆಯು ನಮ್ಮ ಮನೆಯ ಸ್ವಚ್ಚತೆಯಂತೆಯೇ ಎನ್ನುವ ಉಮೇಶ್ ರವರು ಶಾಲೆಯ ಮುಖ್ಯ ಶಿಕ್ಷಕರಾದ ಸಿದ್ಧಪ್ಪರವರು ವಯಸ್ಸಾಗಿರುವ ಕಾರಣ ಅವರನ್ನು ಕಠಿಣ ದೈಹಿಕ ಕೆಲಸಕ್ಕೆ ದುಡಿಸದೆ ಇನ್ನೋರ್ವ ಮಹಿಳಾ ಶಿಕ್ಷಕಿ ರೇಷ್ಮಾರವರನ್ನು ಮಕ್ಕಳ ಹಾಜರಾತಿ ಮತ್ತಿತರ ಕೆಲಸಗಳ ನಿರ್ವಹಿಸಲು ಕಾರ್ಯ ಹಂಚಿಕೊಂಡು ಈ ರೀತಿಯಲ್ಲಿ ಅತ್ಯುತ್ತಮ ಕಲಿಕೆಯನ್ನು ನೀಡಲು ,ಉತ್ತೇಜಿಸುತ್ತಿದ್ದಾರೆ.ಎಂದಿನಂತೆ ಶಾಲೆ ಸಿದ್ಧಗೊಳ್ಳುತ್ತಿರುವುದು ಗ್ರಾಮದ ಪೋಷಕರಲ್ಲಿ ಮಕ್ಕಳಲ್ಲಿಯೂ ಖುಷಿ ತಂದಿದೆ ಎಂದು ಶಿಕ್ಷಕರು ,ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್ ತಿಳಿಸಿದರು .

About The Author

Leave a Reply

Your email address will not be published. Required fields are marked *