April 18, 2024

Chitradurga hoysala

Kannada news portal

ಮೈದುಂಬಿ ಹರಿಯುತ್ತಿದೆ, ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತ* _________________ (ದುಮ್ಮಿಕ್ಕಿ ಹರಿಯುತ್ತಿದ್ದಾಳೆ ಶರಾವತಿ, ಒಮ್ಮೆ ನೋಡ ಬನ್ನಿ,ವಿಶ್ವ ವಿಖ್ಯಾತ ಜೋಗ)

1 min read

*ಮೈದುಂಬಿ ಹರಿಯುತ್ತಿದೆ, ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತ* _________________ (ದುಮ್ಮಿಕ್ಕಿ ಹರಿಯುತ್ತಿದ್ದಾಳೆ ಶರಾವತಿ, ಒಮ್ಮೆ ನೋಡ ಬನ್ನಿ,ವಿಶ್ವ ವಿಖ್ಯಾತ ಜೋಗ)

ಶಿವಮೊಗ್ಗ:

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ, ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತ ದುಮ್ಮಿಕ್ಕಿ ಹರಿಯುತ್ತಿದ್ದು ಜನರನ್ನು ಆಕರ್ಷಿಸುತ್ತಿದ್ದಾಳೆ. ರಾಜ ,ರಾಣಿ, ರೋರರ್, ರಾಕೇಟ್ ನೋಡಿ ಕಣ್ತುಂಬಿಕೊಳ್ಳಬಹುದು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇಲ್ಲಿನ ಕಾರ್ಗಲ್, ಜೋಗ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ.ಕೋರನ ಎರಡನೇ ಅಲೇಯು ವ್ಯಾಪಕವಾಗಿ ಜನರಿಗೆ ಸಂಕಷ್ಟ ತಂದೊಡ್ಡಿತು,ಸಧ್ಯಕ್ಕೆ ಮಾಲಿನ್ಯವಿಲ್ಲದ ಪರಿಸರ ,ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು ,ಸ್ವಚ್ಛಂದ ಗಾಳಿ ,ಮಳೆನಾಡಿನ ಪರಿಸರ ವ್ಯಾಪ್ತಿಯಲ್ಲಿ ಉತ್ತಮ ಮಳೆ ಇದರಿಂದಾಗಿ ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಜೋಗ ಜಲಪಾತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿದೆ. ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತ ದುಮ್ಮಿಕ್ಕಿ ಹರಿಯುತ್ತಿದ್ದಾಳೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದಾಳೆ.

ಮಲೆನಾಡಿನಲ್ಲಿ ಗುಡ್ಡ ,ಬೆಟ್ಟ, ಹಸಿರು ಕಾನನದ ನಡುವೆ ಬಳುಕುತ್ತಾ ಹರಿಯುವ ಶರಾವತಿ ನದಿ ಜೋಗದಲ್ಲಿ ಸುಮಾರು 950 ಅಡಿಗಳಿಂದ ಭೋರ್ಗರೆಯುತ್ತಾ ಧುಮುಕುವ ದೃಶ್ಯ ರುದ್ರ ರಮಣೀಯ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಜನಿಸುವ ಶವಾವತಿ ನದಿ, ನಂತರ ಹೊಸನಗರ ತಾಲೂಕಿನ ಮೂಲಕ ಹರಿದು ಸಾಗರದ ತಾಲೂಕಿನ ಜೋಗದಲ್ಲಿ ದುಮ್ಮಿಕುವ ಮೂಲಕ ಜಲಪಾತ ಸೃಷಿಯಾಗಿದೆ.ಮಳೆಗಾಲದಲ್ಲಿ ಜೋಗ ಜಲಪಾತ ತನ್ನ ನಿಜ ಸೌಂದರ್ಯವನ್ನು ಜಗತ್ತಿಗೆ ಉಣ ಬಡಿಸುತ್ತಾಳೆ. ಸಾಗರ ತಾಲೂಕಿನಲ್ಲಿ ಮಳೆ ಜೋರಾದರೆ ಸಾಕು ಜೋಗ ಜಲಪಾತ ಕಳೆ ಕಟ್ಟುತ್ತದೆ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಲಾಗಿದೆ. ಅಣೆಕಟ್ಟು ಭರ್ತಿಯಾಗುವವರೆಗೂ ಜೋಗ ಜಲಪಾತಕ್ಕೆ ಹೆಚ್ಚಿನ ನೀರು ಹರಿದು ಬರುವುದಿಲ್ಲ. ಆದರೆ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಸಮಯದಲ್ಲಿ ಸುತ್ತಮುತ್ತಲ ನೀರು ಹರಿದು ಶರಾವತಿ ನದಿ ಸೇರುವುದರಿಂದ ಜೋಗ ಜಲಪಾತ ದುಮ್ಮಿಕ್ಕುತ್ತದೆ.

ಜೋಗ ಜಲಪಾತ ಮಂಜಿನೊಂದಿಗೆ ಕಣ್ಣ ಮೂಚ್ಚಾಲೆ ಆಡುತ್ತಿದ್ದಾಳೆ. ಮಂಜಿನೊಂದಿಗೆ ಕೆಲ ಕಾಲ ಮರೆಯಾಗುವ ಜಲಪಾತ, ಮಂಜು ಮರೆಯಾದ ತಕ್ಷಣ ಮತ್ತೇ ಗೋಚರಿಸುವ ಜಲಪಾತದ ಕಣ್ಣಮುಚ್ಚಾಲೆ ಆಟ ಪ್ರವಾಸಿಗರನ್ನು ಮುಂತ್ರ ಮುಗ್ದರನ್ನಾಗಿಸುತ್ತದೆ. ರಾಜ, ರಾಣಿ, ರೋರರ್ ರಾಕೇಟ್ ಕವಲುಗಳಾಗಿ ಧುಮ್ಮಿಕ್ಕುವ ವೈಭವ ಮನ ಮೋಹಕವಾಗಿದೆ.ಸುರಿಯುವತ್ತಿರುವ ಮಳೆ ಜಲಪಾತವನ್ನು ಆವರಿಸಿದ ಮಂಜು, ಆಗಾಗೆ ತೆರೆ ಸರಿಸಿ ಮಂಜು ಮರೆಯಾಗುವ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂಗಾರು ಮಳೆಯ ನಡುವೆ ಜಲಪಾತವನ್ನು ನೋಡುವುದೇ ಒಂದು ವೈಭವ. ಹಾಲಿನ ನೊರೆಯಂತೆ ಜೋಗ ಜಲಪಾತ ಕಣ್ಮನ ಸೆಳೆಯುತ್ತಿದೆ. ಸಾಯೋದ್ರೋಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ಎಂಬ ಕವಿವಾಣಿಯಂತೆ ಜೀವನದಲ್ಲಿ ಒಮ್ಮೆಯಾದರೂ ಜೋಗ ಜಲಪಾತದ ಮೆರುಗನ್ನು ಮಳೆಯಾಗದಲ್ಲಿ ನೋಡಲೇ ಬೇಕು. ಶರಾವತಿ ನದಿ ಸುಂದರವಾದ ಒಂದು ದೃಶ್ಯ ಕಾವ್ಯ. ಮಲೆನಾಡಿನ ಸುಂದರ ಸೊಬಗಿನಲ್ಲಿ ಬಳಕುತ್ತಾ ಹರಿದು, ಜೋಗದಲ್ಲಿ ತನ್ನ ವೈಭವವನ್ನು ಮೆರೆದಿದ್ದಾಳೆ,ವಾಹ್ ಏನೀ ಅದ್ಭುತ .

About The Author

Leave a Reply

Your email address will not be published. Required fields are marked *