Recent Posts

October 17, 2021

Chitradurga hoysala

Kannada news portal

ಚಿತ್ರದುರ್ಗದ ರಾಜಕೀಯ ಚಾಣಕ್ಯ*

1 min read
*ಚಿತ್ರದುರ್ಗದ ರಾಜಕೀಯ ಚಾಣಕ್ಯ*                     ಚಿತ್ರದುರ್ಗ :

ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ರಾಜಕೀಯ ತಂತ್ರಗಾರಿಕೆಯನ್ನು ಬಳಸಿಕೊಂಡು ಚಾಣಕ್ಯ ಎಂಬ ಹೆಸರನ್ನು ಅತಿ ಹೆಚ್ಚು ಬಳಸಿಕೊಂಡಿದ್ದು ಬಿಜೆಪಿಯ ಅಮಿತ್ ಷಾ. ಆದರೆ ಇಲ್ಲಿ ಕೋಟೆ ನಾಡು ಎಂದಾಕ್ಷಣ ಚಿತ್ರದುರ್ಗ ನೆನಪಾಗುತ್ತದೆ , ಚಿತ್ರದುರ್ಗ ಎಂದು ಹೇಳಿದ ತಕ್ಷಣ ನೆನಪಾಗುವುದು  ಚಿತ್ರದುರ್ಗದ ಚಾಣಕ್ಯ (ಚುನಾವಣೆ,ರಾಜಕೀಯ) ಎಂದೇ ಪ್ರಸಿದ್ದಿಯಾಗಿರುವ ಹಿರಿಯ ,ಸರಳ ಸಜ್ಜನಿಕೆಯ,ದಲಿತ , ಹಿಂದುಳಿದ ವರ್ಗಗಳ ನಾಯಕ ಜನಪ್ರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.          ಇವರಿಗೆ ಈ ಬಾರಿ ಮಂತ್ರಿಗಿರಿ ಪಕ್ಕ ಎಂಬಾ ಸುದ್ದಿ ಜಿಲ್ಲೆಯಾದ್ಯಂತ ಸಖತ್ ವೈರಲ್ ಆಗಿದೆ.

ಹೌದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ರಾಜಕೀಯ ಮೇಲಾಟದಲ್ಲಿ ಅನೇಕ ಬಾರಿ ಸಚಿವ ಸ್ಥಾನ ಕೈ ತಪ್ಪಿದೆ.  ಜಿಲ್ಲೆಯಲ್ಲಿ 6 ಬಾರಿ ಶಾಸಕರಾಗಿರುವ ಏಕೈಕ ಶಾಸಕರಾಗಿರುವ ಇವರು  ಚಿತ್ರದುರ್ಗ ಅಷ್ಟೆ ಅಲ್ಲದೆ ಅಕ್ಕ- ಪಕ್ಕದ ಕ್ಷೇತ್ರದಲ್ಲಿ ತುಂಬಾ ಅಭಿಮಾನಿಳನ್ನು ಹೊಂದಿದ್ದಾರೆ.

ಕಳೆದ ಬಾರಿ ಜಿಲ್ಲೆಯಲ್ಲಿ ಏಕೈಕ ಶಾಸಕರಾಗಿ ಪಕ್ಷವನ್ನು ಸಂಘಟಸಿ ಬಲಪಡಿಸಿದ್ದರು. ವಿರೋಧ ಪಕ್ಷದಲ್ಲಿ ಇದ್ದರೂ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿ ಸೈ ಎನಿಸಿಕೊಂಡರು. ಆದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ  ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ರಾಜ್ಯದಲ್ಲಿ 104 ಸ್ಥಾನ ಬಂದಿತು. ಆದರೆ ಅಂದು ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದ್ದರೆ ಅಂದೇ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಮಂತ್ರಿ ಪದವಿ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುತ್ತಿದ್ದರು. ರಾಜಕೀಯ ಚದುರಂಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ತುಂಬಾ ದಿನಗಳ ಕಾಲ ಸರ್ಕಾರ ಉಳಿಯದೆ ಪತನವಾಯಿತು.    ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ವಲಸೆ ಹೋಗಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಜೆಪಿ ಸರ್ಕಾರ ರಚನೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾದಲ್ಲಿ ಅತಿ ಹಿರಿಯ ಶಾಸಕರಾಗಿರುವ ಜಿ.ಹೆಚ್. ತಿಪ್ಪಾರೆಡ್ಡಿ ರವರಿಗೆ  ಮಂತ್ರಿ ಭಾಗ್ಯ ಪಕ್ಕಾ ಎಂದು ಎಲ್ಲರೂ ಆಲೋಚನೆ ಮಾಡಿದ್ದರು. ಆದರೆ ವಲಸೆ ಶಾಸಕರನ್ನು  ಮಂತ್ರಿ ಮಾಡಲೇಬೇಕಾದ ಅನಿವಾರ್ಯತೆ ಇತ್ತು .ಈ ಪರಿಸ್ಥಿತಿಯಲ್ಲಿ  ಮಂತ್ರಿಸ್ಥಾನದಿಂದ ವಂಚಿತರಾದವರಲ್ಲಿ ಶಾಸಕ ತಿಪ್ಪಾರೆಡ್ಡಿ ಕೂಡ ಒಬ್ಬರು. ಇತ್ತೀಚಿನ ಬೆಳವಣಿಗೆ , ಕೋವಿಡ್ ಎರಡನೇ ಅಲೆಯ ನಂತರ ರಾಜ್ಯದಲ್ಲಿ ಭಿನ್ನಮತ, ನಾಯಕತ್ವ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಹಾಗೂ ವಿಸ್ತರಣೆಯ ಕೂಗು ಕೋವಿಡ್ ಗಿಂತ ಜೋರಾಗಿ ಹರಡುತ್ತಿದೆ ಎಂಬುದು  ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.

     ಈ ಬಾರಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾದಲ್ಲಿ ಹಿಂದುಳಿದ ವರ್ಗಗಳ ನಾಯಕ ಸೀನಿಯರ್  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ   ಮಂತ್ರಿ ಆಗುವುದು ಪಕ್ಕಾ . ಜಿಲ್ಲೆಗೆ ಬಿಜೆಪಿ  ಸರ್ಕಾರ ನ್ಯಾಯ ನೀಡುತ್ತದೆ ಎಂಬುದು   ಕಾರ್ಯಕರ್ತರ, ಸಾರ್ವಜನಿಕರು ಭಾವನೆ,ಏಕೆಂದರೆ ಶ್ರೀರಾಮುಲು ರವರಿಗೆ  ರಾಜಕೀಯ ಕರ್ಮಭೂಮಿ ಬಳ್ಳಾರಿ.ಸ್ಥಳೀಯರಿಗೆ ಉಸ್ತುವಾರಿ ಬೇಕೆಂಬ  ಬೇಡಿಕೆಯಾಗಿ ಸರ್ಕಾರ ಪುರಸ್ಕರಿಸಿ  ತಿಪ್ಪಾರೆಡ್ಡಿ ಅವರಿಗೆ ಮಂತ್ರಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾಡುತ್ತಾರೆ , ಮಾಡಲಿ ಎಂಬುದೆ ಸಖತ್ ವೈರಲ್  ಸುದ್ದಿ.ಅನೇಕರಿಗೆ ಸಚಿವ ಸಂಪುಟದಿಂದ ಕೊಕ್ ನೀಡಿ ಹಿರಿಯರು, ಅನುಭವಿಗಳಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮತ್ತು ಭಿನ್ನಮತ ತಣಿಸಲು ಕಳೆದೆರಡು ದಿನಗಳಿಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದಲ್ಲಿ ಬೀಡುಬಿಟ್ಟಿದ್ದು ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲೆಂದು ಬಂದಿದ್ದಾರೆ. ಎಲ್ಲಾ ಸಚಿವ ಸ್ಥಾನದ ಆಕಾಂಕ್ಷಿಗಳು , ಭಿನ್ನಮತೀಯ ಶಾಸಕರು ಕೂಡ ರಾಜ್ಯ ಉಸ್ತುವಾರಿ ಅವರಿಗೆ ರಾಜ್ಯದ ಎಲ್ಲಾ ಬೆಳವಣಿಗೆ ಬಗ್ಗೆ ಮನವರಿಕೆ ಮಾಡಿದ್ದಾರೆ. ಇದರಿಂದ ಕೋಟೆ  ನಾಡಿನ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ  ಸಚಿವ ಸ್ಥಾನ ನೀಡಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಬಿಜೆಪಿ ಮನಸ್ಸು ಮಾಡುತ್ತದ  ಎಂಬುದನ್ನು ಸ್ವಲ್ಪ ದಿನ ಕಾದು ನೋಡೋಣ.

Leave a Reply

Your email address will not be published. Required fields are marked *

You may have missed