Recent Posts

October 16, 2021

Chitradurga hoysala

Kannada news portal

“ಧೈರ್ಯಂ ಸರ್ವತ್ರ ಸಾಧನಂ”

1 min read

ಆತ್ಮೀಯ ಗೆಳೆಯರೇ, ಬಂಧುಗಳೇ ಹಾಗೂ ಗುರು ಹಿರಿಯರೇ 🙏🙏

Covid 19 ನಿಂದ ಈಗಾಗಲೇ ನಾವು ಸಾಕಷ್ಟು ಕಷ್ಟ ನಷ್ಟ ಗಳನ್ನ ಅನುಭವಿಸಿದ್ದೇವೆ ಹಾಗೂ ಹಲವಾರು ಬಂದುಗಳು, ಸ್ನೇಹಿತರನ್ನು ಕಳೆದುಕೊಂಡಿದ್ದೇವೆ.

ಒಂದನೇ ಅಲೆಯಲ್ಲಿ ಅದರ ಬಗ್ಗೆ ಹೆಚ್ಚಾಗಿ ಮಾಹಿತಿಗಳು ಇರಲಿಲ್ಲ, ನಮ್ಮ ದೇಶದಲ್ಲಿ ಅದಕ್ಕೆ ಬೇಕಾದ ವೈದ್ಯಕೀಯ ಸೌಲಭ್ಯಗಳು ಇರಲಿಲ್ಲ.
ಬಹಳಷ್ಟು ಜನ ವಯಸ್ಸಾದವರು Covid ನಿಂದಾಗಿ ತಮ್ಮ ಜೀವಗಳನ್ನು ಕಳೆದು ಕೊಂಡರು.

ಈಗ ಸಾಕಷ್ಟು ಅದರ ಬಗ್ಗೆ ತಿಳುವಳಿಕೆ ಇದ್ದರೂ, ಎರಡನೇ ಅಲೆಯಲ್ಲಿ ಅನೇಕ ಯುವಕರು Covid ನಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇನ್ನೂ ಕೆಲವರು ನರಳುತ್ತಿದ್ದಾರೆ.

Covid ರೋಗದಿಂದ ನರಳಿ ಈಗ ಅದರಿಂದ ಮುಕ್ತನಾದ ನಂತರ ಒಬ್ಬ ವೈದ್ಯನಾಗಿ ತಮಗೆ ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಡಲು ಬಯಸುತ್ತೇನೆ.

ಅವುಗಳೆಂದರೆ:

1) SMS ಪಾಲನೆ ನಮ್ಮ ಆದ್ಯ ಕರ್ತವ್ಯ ವಾಗಬೇಕು.
S – Social Distance ಅಂದ್ರೆ ಸಾಮಾಜಿಕ ಅಂತರ or ವ್ಯಕ್ತಿಗತ ಅಂತರ ವನ್ನು ಕಾಪಾಡಬೇಕು.
M – Mask or ಮುಖಗವಸನ್ನು ಧರಿಸಬೇಕು.
S – Sanitization ಅಂದರೆ ಆಗಾಗ್ಗೆ ಕೈಗಳನ್ನ soap ನಿಂದ ತೊಳೆಯುತ್ತಿರಬೇಕು or sanitze ಮಾಡಿಕೊಳ್ಳಬೇಕು.

2) ಮನೆಯಲ್ಲಿ ನಿಮಗೆ or ಯಾರಿಗಾದರೂ ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ, ತೀವ್ರ ಸುಸ್ತು, ಬೆವರುವಿಕೆ, ರುಚಿ, ವಾಸನೆ ಗೊತ್ತಾಗದೆ ಇರುವುದು, ಹೊಟ್ಟೆ ನೋವು, ಭೇದಿ, ಮೈ ಕೈ ನೋವು etc ಲಕ್ಷಣಗಳು ಕಂಡು ಬಂದರೆ ಹೆದರದೆ ಹತ್ತಿರದ ಆಸ್ಪತ್ರೆಗೆ ಹೋಗಿ RAT or RTPCR test ಮಾಡಿಸಬೇಕು.

3) ಈ ಮೇಲಿನ ಲಕ್ಷಣಗಳು ಇದ್ದರೆ ಅಂತಹ ವ್ಯಕ್ತಿಗಳು ದಯವಿಟ್ಟು ಕಡ್ಡಾಯವಾಗಿ 14ದಿನಗಳು isolation ಆಗಿ ಇರುವುದು ಉತ್ತಮ, ಇಲ್ಲದಿದ್ದರೆ ಅವರಿಂದಾಗಿ ಮನೆಯ ಇತರರಿಗೆ ರೋಗ ಹಬ್ಬುವ ಸಾದ್ಯತೆ ಹೆಚ್ಚು ಇರುತ್ತದೆ.

RTPCR ನಲ್ಲಿ negative ಬಂದು, ಮೇಲೆ ಹೇಳಿದ ಲಕ್ಷಣಗಳು ಇದ್ದರೆ ಅದು ಸಹ Covid ಆಗಿರಬಹುದು ಅಂತವರು ಸಹ Isolation ನಲ್ಲಿ ಇರಬೇಕು. ಅಂತವರು CT ಸ್ಕ್ಯಾನ್ ಮಾಡಿಸಿ ಅದರಲ್ಲಿ ಶ್ವಾಸಕೋಶದ infection ಪ್ರಮಾಣವನ್ನು ತಿಳಿಯಬಹುದು.

4) RAT or RTPCR ನಲ್ಲಿ ಒಂದು ವೇಳೆ positive ಬಂದರೆ ಯಾರೂ ಹೆದರುವ ಅಗತ್ಯವಿಲ್ಲ. ಧೈರ್ಯವಾಗಿ ಇರಬೇಕು.
ಸಾಮಾನ್ಯ or ಮೃದು ಲಕ್ಷಣಗಳು ಇದ್ದರೆ ವೈದ್ಯರ ಬಳಿ ಸೂಕ್ತ ಔಷಧಿ ಗಳನ್ನ ತೆಗೆದುಕೊಂಡು ಮನೆಯಲ್ಲಿಯೇ ಇದ್ದು ಗುಣಮುಖರಾಗಬಹುದು.

ತೀವ್ರ ಲಕ್ಷಣಗಳು or ಅತಿಯಾದ ಕೆಮ್ಮು, ಉಸಿರಾಟದ ತೊಂದರೆ ಇದ್ದರೆ or Oxygen saturation 90% ಗಿಂತ ಕಡಿಮೆ ಇದ್ದರೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಇರುವಂತ ಸೂಕ್ತ ಆಸ್ಪತ್ರೆಗೆ ದಾಖಲಾಗುವುದು ಉತ್ತಮ.

5) ಪ್ರತಿದಿನ ತಪ್ಪದೆ ಬಿಸಿ ನೀರು ಕುಡಿಯುವುದು, ಹೆಚ್ಚು ಹೆಚ್ಚು ತರಕಾರಿ, ಸೊಪ್ಪು ಬಳಸಿದ ಬಿಸಿ ಆಹಾರ ತಿನ್ನುವುದು ಒಳ್ಳೆಯದು. ಹೆಚ್ಚು ಪ್ರೊಟೀನ್ ಯುಕ್ತ ಕಾಳು, ಆಹಾರ, ಮೊಟ್ಟೆ ಸೇವಿಸುವುದು ಉತ್ತಮ.

6) Vitamin C ಹೆಚ್ಚು ಇರುವಂತಹ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ಪೈನಾಪಲ್, ಮಾವು ಜೊತೆ ಗೆ ಬೇರೆ ಹಣ್ಣುಗಳನ್ನು ಸಹ ಹೆಚ್ಚಾಗಿ ತಿನ್ನಬೇಕು.

7) ಫ್ರಿಡ್ಜ್ ನಲ್ಲಿ ಇಟ್ಟಿರುವ ಪದಾರ್ಥಗಳು, ತಣ್ಣನೆಯ ಪಾನೀಯಗಳು ಹಾಗೂ ಕರಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು.

8) ಶುಂಠಿ, ಅರಿಶಿಣ, ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಧನಿಯ, ತುಳಸಿ ಎಲೆ ಮಿಶ್ರಿತ ಪುಡಿಯಿಂದ ಕಷಾಯ ತಯಾರಿಸಿ ದಿನಕ್ಕೆ 1ಕಪ್ ಕುಡಿಯುವುದು ಒಳ್ಳೆಯದು.

9) ಅಮೃತ ಬಳ್ಳಿಯ ಕಷಾಯ, ಆಯುಷ್ ಕಷಾಯ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚ್ಯವನ್ ಪ್ರಾಶ್ etc ಗಳನ್ನ Ayurveda ವೈದ್ಯರ ಸಲಹೆ ಮೇರೆಗೆ ಪಡೆಯುವುದು ಉತ್ತಮ.

ಆಯುಷ್ ಇಲಾಖೆಯ ಸಂಶಮನಿ ವಟಿ, ajeeb arka ಕೂಡ ಬಳಸಬಹುದು.

10) ಬಿಸಿನೀರು, ಉಪ್ಪು ಹಾಗೂ ಅರಿಶಿಣ ಮಿಶ್ರಿತ ನೀರಿನಿಂದ ಬಾಯಿ ಮುಕ್ಕಳಿಸಿ ಉಗಿಯುವುದೂ ಇನ್ನೂ ಉತ್ತಮ ಅಭ್ಯಾಸ.

11) ದೈಹಿಕ ಹಾಗೂ ಮಾನಸಿಕ ಸದೃಢತೆ ಗಾಗಿ ಪ್ರತಿ ದಿನ ವ್ಯಾಯಾಮ, ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಬೇಕು.

12) Google ಮೂಲಕ ಕಂಡುಕೊಂಡ ಔಷಧಿ ತೆಗೆದುಕೊಳ್ಳದೆ, ವೈದ್ಯರು ನೀಡಿದ ಔಷಧಿಗಳನ್ನು ಮಾತ್ರ ತೆಗೆದುಕೊಳ್ಳಬೇಕು.

13) ಆದಷ್ಟು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗುವುದನ್ನು ಬಿಡಬೇಕು, ಸಾರ್ವಜನಿಕ ಸಭೆ, ಸಮಾರಂಭ, ಮದುವೆ, ಹುಟ್ಟಿದ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕೆಲವು ದಿನಗಳ ಕಾಲ ಸಂಪೂರ್ಣ ಬಿಟ್ಟುಬಿಡಿ.

14) N95 mask, surgical mask ಅನ್ನೆ ಬಳಸಿರಿ, ಬಟ್ಟೆಯ ಮಾಸ್ಕ್ ಸುರಕ್ಷಿತ ಅಲ್ಲ.

15) ತುಂಬಾ ದಿನ ಒಂದೇ ಮಾಸ್ಕ್ ಬಳಕೆ ಒಳ್ಳೆಯದಲ್ಲ or mask ಅನ್ನು soap ನಿಂದ ಬಿಸಿ ನೀರಲ್ಲಿ ಒಗೆದು, ಬಿಸಿಲಿನಲ್ಲಿ ಒಣಗಿಸಿ ನಂತರ ಬಳಸಬೇಕು.

16) ಗಂಟಲು ನೋವು, ಕೆರೆತ ಇದ್ದಾಗ steam inhalation (ಹಬೆ) ತೆಗೆದುಕೊಳ್ಳಬೇಕು.

ತೀವ್ರ ಕಫ ಇದ್ದಾಗ ಸ್ಟೀಮ್ ಬೇಡ.

17) ಆಸ್ಪತ್ರೆ, ಕ್ಲಿನಿಕ್, ಲ್ಯಾಬೋರೇಟರಿ ಹಾಗೂ ಮೆಡಿಕಲ್ ಶಾಪ್ ಗೆ ಹೋದಾಗ ಸಾಧ್ಯವಿದ್ದಷ್ಟು ಜಾಗರೂಕತೆ ಇಂದ ಇರಿ, SMS ಪಾಲಿಸಿರಿ.

18) ಮನಸ್ಸಿಗೆ ಇಂಪಾದ ಹಾಡಗಳನ್ನ ಕೇಳಿ, ಸಂಗೀತ ವನ್ನ ಆಲಿಸಿರಿ.
ಚಲನಚಿತ್ರ ಗಳನ್ನ ನೋಡಿ, ಖುಷಿಯಿಂದ ಇರಬೇಕು.

News channel ಗಳನ್ನ್ ನೋಡುವುದನ್ನು ಬಿಟ್ಟು ಬಿಡಿ, ಚಂದನ ವಾಹಿನಿಯಲ್ಲಿ ಬರುವ ಆರೋಗ್ಯ ಕುರಿತ ಕಾರ್ಯಕ್ರಮ ವೀಕ್ಷಿಸಿ.
ಚಂದನ ವಾರ್ತೆಗಳನ್ನು ಮಾತ್ರ ನೋಡಿ.

19) Corona ಸೊಂಕಿತರನ್ನ ಪ್ರೀತಿಯಿಂದ ಕಾಣಿರಿ, ಧೈರ್ಯ ತುಂಬುವ ಕೆಲಸ ಮಾಡಿರಿ.

ಅಸ್ಪೃಶ್ಯ ರಂತೆ ಕಾಣಬೇಡಿ.

20) ಇದು ಒಂದು viral infection ಆಗಿರುವುದರಿಂದ ಸ್ವಲ್ಪ ದಿನಗಳ ನಂತರ ಸರಿ ಹೋಗುತ್ತದೆ.
ಅನಾವಶ್ಯಕ Antibiotic, steroid injection ಹಾಗೂ ಮಾತ್ರೆ ತೆಗೆದುಕೊಳ್ಳಬೇಡಿ.

21) Pronation ಅಂದರೆ 6ನಿಮಿಷ ದ ನಡಿಗೆ ಯ ನಂತರ ಆಕ್ಸಿಜನ್ % 94 ಕ್ಕಿಂತ ಕಡಿಮೆ ಇದ್ದರೆ ಹೊಟ್ಟೆ ಕೆಳಗೆ ಮಾಡಿ (ಬೋರಲು) ಮಲಗಬೇಕು.

22) ಕೋರೋನ ವೈರಸ್ ಗೆ Vaccine ಮದ್ದು:
ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ.

ನಿಮ್ಮ ಸರದಿ ಬಂದಾಗ ಎಲ್ಲರೂ ತಪ್ಪದೇ Vaccination ಮಾಡಿಸಿಕೊಳ್ಳಿ.
ವ್ಯಾಕ್ಸಿನ್ ಬಗೆಗಿನ ಅಪಪ್ರಚಾರದ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

ಇನ್ನೂ ಮೂರನೇ ಅಲೆ ಮಕ್ಕಳಿಗೆ ಸಂಕಷ್ಟ ತರಲಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

ಆದ್ದರಿಂದ ತಾವು ಸುರಕ್ಷತೆ ಇಂದ ಇದ್ದು ತಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂಬುದೇ ನನ್ನ ಕಳಕಳಿ.

ಕೊನೆಯದಾಗಿ “ಧೈರ್ಯಂ ಸರ್ವತ್ರ ಸಾಧನಂ” ಎಂಬ ನುಡಿಯಂತೆ Corona ಸೊಂಕಿತರು ಹೆದರಬಾರದು, ಧೈರ್ಯವಾಗಿ ಇರಬೇಕು, ನಿಯಮಿತವಾಗಿ ಔಷಧಿ, ಆಹಾರ ತೆಗೆದುಕೊಂಡು ಆರೋಗ್ಯವಂತರಾಗಿ ಹೊರ ಬರಬಹುದು.

#Stay_safe
#Stay_home
#Stay_happy

#India_fights _against_Covid19

ಧನ್ಯವಾದಗಳೊಂದಿಗೆ,🙏🙏🙏

ಇಂತಿ ನಿಮ್ಮ

ವೈದ್ಯ ವೀರೇಶ್ ಹಾವೇರಿ
MD (Ayu)
SSAMC, HaveriCell: 8105183150

Leave a Reply

Your email address will not be published. Required fields are marked *

You may have missed