April 18, 2024

Chitradurga hoysala

Kannada news portal

ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಓ.ಮುರಾರ್ಜಿ ಮಾತನಾಡಿ ಕಲಾವಿದರು ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು ಹಾಗೆಯೇ ಸರ್ಕಾರದ ಯೋಜನೆಗಳನ್ನು ಪಡೆಯಲು ಸೂಕ್ತ ದಾಖಲಾತಿಗಳನ್ನು ಸಂಗ್ರಹ ಮಾಡಿಕೊಳ್ಳಬೇಕೆಂದು ತಿಳಿಸಿದರು.

1 min read

ಚಿತ್ರದುರ್ಗ – ಕೋವಿಡ್ ನ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರಿಗೆ ಸಹಾನುಭೂತಿಗಿಂತ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಸಹಾಯ ಮಾಡುವವರ ಅಗತ್ಯವಿದೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಕೌನ್ಸಿಲ್ ಸದಸ್ಯ ಹಾಗೂ ಕಲಾವಿದ ಜೆ.ಗಣೇಶ್ ಅಭಿಪ್ರಾಯ ಪಟ್ಟರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಚಿತ್ರದುರ್ಗ ವತಿಯಿಂದ ತಾಲ್ಲೂಕಿನ ಚನ್ನಯ್ಯನಹಟ್ಟಿ ಗ್ರಾಮದ ಶಿಳ್ಳೆಕ್ಯಾತ ಸಮುದಾಯದ ಕಲಾವಿದರಿಗೆ ದಿನ ಬಳಕೆಯ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಇಂದು ಕಲಾವಿದರ ಬದುಕು ಕಾರ್ಯಕ್ರಮಗಳಿಲ್ಲದೆ ದುಸ್ತರವಾಗಿದೆ ದೈನಂದಿನ ಬದುಕನ್ನು ಸಾಗಿಸಲು ಹರ ಸಾಹಸ ಪಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಕಲಾವಿದರ ಬಗ್ಗೆ ಕೆಲವರು ಸಹಾನುಭೂತಿ ವ್ಯಕ್ತಪಡಿಸುವವರು ನಮ್ಮ ನಡುವೆ ಇದ್ದಾರೆ ಇಂತಹವವರಿಗಿಂತ ಸಂಕಷ್ಟಕ್ಕೆ ಸ್ಪಂದಿಸುವ ಸಹಾಯ ಹಸ್ತ ಚಾಚುವ ಜನರ ಅವಶ್ಯಕತೆ ಇದ್ದು ಇಂತಹ ಕಾರ್ಯ ಮಾಡುತ್ತಿರುವ ಹಿಮಂತ ಮಹಿಳಾ ವಿಕಾಸ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಓ.ಮುರಾರ್ಜಿ ಮಾತನಾಡಿ ಕಲಾವಿದರು ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು ಹಾಗೆಯೇ ಸರ್ಕಾರದ ಯೋಜನೆಗಳನ್ನು ಪಡೆಯಲು ಸೂಕ್ತ ದಾಖಲಾತಿಗಳನ್ನು ಸಂಗ್ರಹ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಹಾಗೆಯೇ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನೆರವಾಗುವ ದಿಸೆಯಲ್ಲಿ ಜಿಲ್ಲೆಯಲ್ಲಿ ಕಲಾವಿದರ ಒಕ್ಕೂಟ ಸ್ಥಾಪಿಸಲಾಗಿದೆ ಕಲಾವಿದರು ಒಕ್ಕೂಟದ ಅಡಿಯಲ್ಲಿ ಸೇರಿಕೊಂಡು ಸಂಘಟಿತರಾಗುವ ಜತೆಗೆ ಪರಸ್ಪರ ಸಹಾಯ ಪಡೆದುಕೊಳ್ಳಬೇಕೆಂದರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಕಾರ್ಯದರ್ಶಿ ಹೆಚ್.ಎನ್. ವರಲಕ್ಷ್ಮಿ ಮಾತನಾಡಿ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನಮ್ಮ ಸಂಸ್ಥೆ ವತಿಯಿಂದ ಸಣ್ಣ ಸೇವೆ ಮಾಡಿದ್ದೇವೆ ಇದು ನಮಗೆ ತುಂಬಾ ಖುಷಿಯಾಗಿದೆ ಇಂತಹ ಕಾರ್ಯ ಮಾಡಲು ನೀವೆಲ್ಲರೂ ನಮಗೆ ಪ್ರೇರಣೆಯಾಗುವ ಮೂಲಕ ನಮ್ಮ ಸೇವೆಗೆ ಸಾರ್ಥಕತೆಯನ್ನು ನೀಡಿರುವಿರಿ ಕಲಾವಿದರಿಗೆ ನಮ್ಮ ಸಂಸ್ಥೆಯು ಅಭಾರಿಯಾಗಿದೆ ಎಂದರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಅಧ್ಯಕ್ಷೆ ಹಾಗೂ ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಅಧ್ಯಕ್ಷತೆ ವಹಿಸಿದ್ದರು.
ಅಂತರಾಷ್ಟ್ರೀಯ ಯೋಗಪಟು ಪೂಜಾ ಹೂಗಾರ್, ಪುಷ್ಪಾ, ಕಲಾವಿದರಾದ ರಾಜು, ಪರುಶುರಾಮ, ಪದ್ಮಾವತಿ, ಜಾನಕಿ, ಮಂಜುನಾಥ್, ಪ್ರಕಾಶ್, ಶೋಭಾ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *