April 18, 2024

Chitradurga hoysala

Kannada news portal

ಬಾಜಪ ರಾಜ್ಯ ಪ್ರಧಾನ ಕಾರ್ಯದರ್ಶೀ ಕೆ.ಎಸ್.ನವೀನ್ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕಿದೆ, ಮಾನವನಿಗೆ ಆಗತ್ಯವಾದ ಉತ್ತಮವಾದ ಗಾಳಿಯನ್ನು ನೀಡುವುದು ಮರಗಳಿಂದ ಮಾತ್ರ ಸಾಧ್ಯ.

1 min read

ಚಿತ್ರದುರ್ಗ ಜೂ. 27
ಸಸಿಗಳನ್ನು ನೆಡುವುದು ಮಾತ್ರ ಆಗದೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿದಾಗ ಮಾತ್ರ ಉತ್ತಮವಾದ ಪರಿಸರ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಭಾನುವಾರ ಪ್ರಧಾನ ಮಂತ್ರಿಗಳ ಮನಕಿ ಭಾತ್ ಮತ್ತು ಬೀಜದ ಉಂಡೆ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹಲವಾರು ವರ್ಷಗಳಿಂದ ಜೂ.5 ರಂದು ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಅಂದಿನ ದಿನ ಮಾತ್ರ ಸಿಸಿಗಳನ್ನು ನೆಟ್ಟು ನಂತರ ಅದರ ಕಡೆ ತಿರುಗಿ ಸಹಾ ನೋಡುವುದಿಲ್ಲ, ಈ ರೀತಿಯಾದರೆ ಅರಣ್ಯ ಪ್ರದೇಶ ಹೆಚ್ಚಾಗದೆ ಕಡಿಮೆಯಾಗುತ್ತದೆ ಮಾನವ ಅಗತ್ಯಕ್ಕೆ ಮರಗಳನ್ನು ಕಡಿಯಲಾಗುತ್ತದೆ ಕಡಿಯುವಾಗ ಇರುವ ಅಸಕ್ತಿ ಅವುಗಳನ್ನು ಬೆಳಸುವುದರಲ್ಲಿ ಇಲ್ಲ ಎಂದು ಹೇಳಿದರು.
ನಾವು ಚಿಕ್ಕವರಾಗಾದಾಗಿನಿಂದ ಪರಿಸರವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಪರಿಸರ ಮಾತ್ರ ಹೆಚ್ಚಾಗಿಲ್ಲ, ನಿಜವಾದ ಅರ್ಥದಲ್ಲಿ ಪರಿಸರ ದಿನಾಚರಣೆಯಾಗಿಲ್ಲ, ಸಸಿ ನೆಡುವುದು ಮಾತ್ರ ನಮ್ಮ ಕೆಲಸವಾಗದೇ ಅವುಗಳು ಬೆಳೆಯುವುದಕ್ಕೆ ಸಹಾ ಅಗತ್ಯ ಬೇಕಾದ ಸೌಲಭ್ಯವನ್ನು ಮಾಡಬೇಕಿದೆ. ಚಿತ್ರದುರ್ಗದಲ್ಲಿ ರಸ್ತೆಯ ನಿರ್ಮಾಣ ಕಾರ್ಯವಾಗುತ್ತಿದೆ ಇದಕ್ಕಾಗಿ ಮರಗಳನ್ನು ಕಡಿಯಲಾಗಿದೆ, ಇದಕ್ಕೆ ಪರ್ಯಾಯವಾಗಿ ಸಸಿಗಳನ್ನು ನೆಡುವ ಕಾರ್ಯವನ್ನು ಮುಂದಿನ ದಿನದಲ್ಲಿ ಎಲ್ಲರು ಸೇರಿ ಮಾಡಲಾಗುವುದು. ಇದಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಸಿಸಿಯನ್ನು ಅರಣ್ಯ ಇಲಾಖೆವತಿಯಿಂದ ಕೂಡಿಸಲಾಗುವುದು ಅಗತ್ಯ ಬಿದ್ದರೆ ಗುಂಡಿಗಳನ್ನು ಸಹಾ ತೆಗಸಿಕೊಡಲಾಗವುದು ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಬಾಜಪ ರಾಜ್ಯ ಪ್ರಧಾನ ಕಾರ್ಯದರ್ಶೀ ಕೆ.ಎಸ್.ನವೀನ್ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕಿದೆ, ಮಾನವನಿಗೆ ಆಗತ್ಯವಾದ ಉತ್ತಮವಾದ ಗಾಳಿಯನ್ನು ನೀಡುವುದು ಮರಗಳಿಂದ ಮಾತ್ರ ಸಾಧ್ಯ. ಇತ್ತೀಚಿನ ದಿನದಲ್ಲಿ ಕರೋನಾದಿಂದಾಗಿ ಆಮ್ಲಜನಕಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣ ಇದರ ಬದಲಿಗೆ ಮರಗಳು ಇದ್ದರೆ ಇದರ ಕೂರತೆ ಆಗುತ್ತಿರಲಿಲ್ಲ, ಮುಂದಿನ ದಿನದಲ್ಲಿ ಸಸಿಗಳನ್ನು Éಡುವುದು ಮಾತ್ರವಲ್ಲದೆ ಅವುಗಳ ಚನ್ನಾಗಿ ಬೆಳೆಯುವಂತೆ ಮಾಡಬೇಕಾಗಿರುವುದು ನಮ್ಮೆಲ್ಲ ಕೆಲಸವಾಗಿದೆ ಎಂದರು.
ಮುಂದಿನ ದಿನಮಾನದಲ್ಲಿ ಬೂತ್ ಮಟ್ಟದಲ್ಲಿ ಮನಕಿ ಬಾತ್ ಕಾರ್ಯಕ್ರಮವನ್ನು ಎಲ್ಲರು ಕೇಳುವಂತಾಗಬೇಕಿದೆ ಇದಕ್ಕೆ ಬೇಕಾದ ವಾತಾವರಣವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಕಲ್ಪಿಸಬೇಕಿದೆ. ಪ್ರಧಾನ ಮಂತ್ರಿಗಳು ದೇಶದ ಪ್ರಧಾನ ಮಂತ್ರಿಯಾಗಿನಿಂದಾಗಿನಿಂದ ಈವರೆವಿಗೂ ಮನಕಿ ಬಾತ್ ಮೂಲಕ ದೇಶದ ಜನತೆಯ ಸಮಸ್ಯೆಯನ್ನು ಈ ಕಾರ್ಯಕ್ರಮದಲ್ಲಿ ಪರಿಹಾರವನ್ನು ನೀಡಿದ್ದಾರೆ ಇದಕ್ಕೆ ಚಿತ್ರದುರ್ಗದ ಬಾಲಕಿಯೊರ್ವಳು ಜಿ.ಪಂ.ವತಿಯಿಂದ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದಾಳೆ ಎಂದು ನವೀನ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಜಪದ ಅಧ್ಯಕ್ಷರಾದ ಮುರುಳಿ ವಹಿಸಿದ್ದರು. ಮುಖಂಡರಾದ ಸಿದ್ದೇಶ್ ಯಾದವ್, ನಂದಿ ನಾಗರಾಜ್, ವೆಂಕಟೇಶ್ ಯಾದವ್, ಶ್ರೀಮತಿ ಶೈಲಜಾ ರೆಡ್ಡಿ, ಹನುಮಂತಗೌಡ, ನಗರಾಧ್ಯಕ್ಷ ಶಶಿಧರ್, ವಕ್ತಾರ ನಾಗರಾಜ್ ಬೇದ್ರೇ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸುಮಾರು 20 ಸಾವಿರ ವಿವಿಧ ರೀತಿಯತ ಹಣ್ಣಿನ ಬೀಜಗಳನ್ನು ಮಣ್ಣಿನ ಒಳಗಡೆ ಇಟ್ಟು ಉಂಡೆಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಸಹಾ ಪ್ರಾರಂಭ ಮಾಡಲಾಯಿತು.

About The Author

Leave a Reply

Your email address will not be published. Required fields are marked *