Recent Posts

October 17, 2021

Chitradurga hoysala

Kannada news portal

ಸಧ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ : ಸಚಿವ ಮಾಧುಸ್ವಾಮಿ* ಚಿತ್ರದುರ್ಗ :

1 min read

*ಸಧ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ : ಸಚಿವ ಮಾಧುಸ್ವಾಮಿ* ಚಿತ್ರದುರ್ಗ :

ಸಧ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ : ಸಚಿವ ಮಾಧುಸ್ವಾಮಿ* ಚಿತ್ರದುರ್ಗ :

ಸಧ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಖಾಲಿ, ಇಲ್ಲದ ಸ್ಥಾನಕ್ಕೆ ಬೇರೆ ಪಕ್ಷದವರು ಮಾತನಾಡುತ್ತಿದ್ದಾರೆ, ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಾಗವಹಿಸಿಲು ಆಗಮಿಸಿದ್ದ ಸಚಿವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಯಾದ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್‍ನಲ್ಲಿ ಈಗಾಗಲೇ ಸಿಎಂ ಚರ್ಚೆ ಶುರುವಾಗಿದೆ ಎಂದು ಕೇಳುತ್ತಿದ್ದೇವೆ. ಕಾಂಗ್ರೆಸ್ ಗೆದ್ದು ಬಂದರೆ ಸಿಎಂ ಆಗೋದು, ಈಗ ಹೇಗೆ ಸಿಎಂ ಆಗುತ್ತಾರೆ. ಕಳೆದ ಸಲ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಯಾರಿಗೆ ಗೊತ್ತಿತ್ತು, ರಾಜಕಾರಣ ಹೇಗೆ ತಿರುಗುತ್ತದೆ ಯಾರಿಗೆ ಗೊತ್ತು ಎಂದರು.

ಇನ್ನೂ ಚುನಾವಣೆ ದೂರ ಇದೆ, ಈಗಲೇ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡೋದು ಸರಿಯಲ್ಲ, ಈಗಿನ ಮುಖ್ಯಮಂತ್ರಿಗಳು ಚನ್ನಾಗಿ ಕೆಲಸ ಮಾಡುತ್ತಿದ್ದಾರೆ ಕರೋನಾವನ್ನು ಹಿಮ್ಮೆಟ್ಟುವಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಂಡು ಜನತೆಯನ್ನು ಸಂಕಷ್ಟದಿಂದ ಪಾರು ಮಾಡುವ ಕಾರ್ಯವನ್ನು ಮಾಡಿದ್ಧಾರೆ ಎಂದರು.

ಸಾವಿಗೆ ಬೇಕಾದಷ್ಟು ಕಾರಣ ಇರುತ್ತವೆ. ಡೆತ್ ಆಡಿಟ್‍ನಿಂದ ಎಲ್ಲವೂ ಗೊತ್ತಾಗುತ್ತದೆ. ಸರ್ಕಾರದ ಬಳಿ ಎಲ್ಲ ಮಾಹಿತಿಯಿದೆ. ನಮಗಿನ್ನೂ ಕೋವಿಡ್ ಡೆತ್ ರಿಪೋರ್ಟ್ ಮರೆ ಮಾಚುವ ಸ್ಥಿತಿ ಬಂದಿಲ್ಲ. ಕೆಲವೊಮ್ಮ ನಮ್ಮ ಗಮನಕ್ಕೆ ರಿಪೋರ್ಟ್ ಆಗದಿದ್ದರೆ ನಾವೇನೂ ಮಾಡೋಕೆ ಆಗಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ರಮೇಶ ಜಾರಕಿಹೊಳಿ ಅವರು ಕೇಸ್‍ನಿಂದ ಮುಕ್ತರಾದರೆ ಖಂಡಿತ ಸಚಿವರಾಗುತ್ತಾರೆ. ಆ ಮಾತ್ರ ಅವರನ್ನು ಸರ್ಕಾರ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದ ಸಚಿವರು, ಕೊರೊನಾ 3ನೇ ಅಲೆ ಹಾಗೂ ಡೆಲ್ಟಾ ಪ್ಲಸ್ ಬಗ್ಗೆ ಪರಿಶೀಲಿಸಿ ವಿದ್ಯಾಗಮ ನಡೆಸುವ ಬಗ್ಗೆ ತೀರ್ಮಾನಕೈಗೊಳ್ಳಲಾಗುತ್ತದೆ. ವಿದ್ಯಾಗಮನಕ್ಕೂ ಶಿಕ್ಷಕರ ಸಾವಿಗೂ ಸಂಬಂಧವಿಲ್ಲ. ಎಲ್ಲ ಸಾವನ್ನು ಕೋವಿಡ್ ಎನ್ನುವುದರಲ್ಲಿ ಅರ್ಥವಿಲ್ಲ. ನಾನಾ ಕಾರಣಕ್ಕೆ ಮನುಷ್ಯ ಸಾಯುತ್ತಾನೆ. ಸಾವಿಗೆ ಅದೊಂದೆ ಕಾರಣ ಎಂಬ ಪ್ರಚಾರ ಬೇಡ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಚಿದಾನಂದ ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed