April 19, 2024

Chitradurga hoysala

Kannada news portal

ಸರ್ಕಾರಿ ಕಲಾ ಕಾಲೇಜ್ ಪ್ರಾಂಶುಪಾಲರಾಗಿ ಡಾ.ಕೆ.ಜಿ.ಶ್ರೀನಿವಾಸ್ ಅಧಿಕಾರ ಸ್ಪೀಕಾರ, ಅಭಿನಂದನೆಗಳ ….

1 min read

ಸರ್ಕಾರಿ ಕಲಾ ಕಾಲೇಜ್ ಪ್ರಾಂಶುಪಾಲರಾಗಿ ಡಾ.ಕೆ.ಜಿ.ಶ್ರೀನಿವಾಸ್ ಅಧಿಕಾರ ಸ್ಪೀಕಾರ, ಅಭಿನಂದನೆಗಳ ….

ಚಿತ್ರದುರ್ಗ:

ಚಿತ್ರದುರ್ಗ ನಗರದ ಸ್ವಾಯತ್ತ ಸರ್ಕಾರಿ ಕಲಾ ಕಾಲೇಜ್ ಪ್ರಾಂಶುಪಾಲರಾಗಿ ಕೋಗುಂಡೆ ಗ್ರಾಮದ ಡಾ.ಕೆ.ಜಿ.ಶ್ರೀನಿವಾಸ್ ಅಧಿಕಾರ ಸ್ಪೀಕಾರ ಸ್ಪೀಕರಿಸಿದ್ದು ಕಾಲೇಜ್ ಸಹದ್ಯೋಗಿಗಳು, ಸ್ನೇಹಿತರು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಇಲ್ಲಿನ ಸರ್ಕಾರಿ ಕಲಾ ಕಾಲೇಜ್(ಸ್ವಾಯತ್ತ) ಕಾಲೇಜಿನಲ್ಲಿ ಗುರುವಾರ ಹಲವು ಸ್ನೇಹಿತರು ಅವರನ್ನು ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಚಿತ್ರದುರ್ಗ ಅತ್ಯಂತ ಬಡ ಮತ್ತು ಬರ ಪೀಡಿತ ಜಿಲ್ಲೆ. ಇಲ್ಲಿ ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗಗಳು, ಬುಡಕಟ್ಟು ಸಮುದಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಾ ಕಾಲೇಜಿಗೆ ಪ್ರವೇಶ ಪಡೆಯುತ್ತಿದ್ದಾರೆ. ಇಂತಹ ಎಲ್ಲ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಪ್ರಮಾಣಿಕವಾಗಿ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ಕಾಲೇಜಿನಲ್ಲಿ ಮತ್ತೊಷ್ಟು ಸುಧಾರಣೆ ತರುವ ಕಾರ್ಯ ಮಾಡುವುದಲ್ಲದೆ, ಗುಣಮಟ್ಟದ ಶಿಕ್ಷಣ ನೀಡಿಕೆ, ಗುಣಾತ್ಮಕ ಬೋಧನೆ ಸೇರಿದಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು, ಸಹದ್ಯೋಗಿ ಮಿತ್ರರುಗಳ ಸಹಕಾರ, ಸಲಹೆ, ಸೂಚನೆಗಳನ್ನು ಪಡೆದು 2ನೇ ಹಂತದ ಕಾಲೇಜ್ ಸ್ವಾಯತ್ತತೆ ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ಗೆ ಸೇರಿರುವ ಮುರುಘರಾಜೇಂದ್ರ ಕ್ರೀಡಾಂಗಣವನ್ನು ಕೆಲವು ಅತಿಕ್ರಮಣ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಕಲಾ ಮತ್ತು ವಿಜ್ಞಾನ ಕಾಲೇಜ್ ಆಡಳಿತ ವರ್ಗ, ಕಾಲೇಜ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕರ ಸಲಹೆ ಸೂಚನೆಗಳ ಪಡೆದು ಸಾರ್ವಜನಿಕರ ಬೆಂಬಲದೊಂದಿಗೆ ಕ್ರೀಡಾಂಗಣ ಒತ್ತುವರಿಯಾದರೆ ಅಥವಾ ಅತಿಕ್ರಮ ಪ್ರವೇಶವಾದರೆ ತಡೆಯುವುದಾಗಿ ಪ್ರಾಂಶುಪಾಲ ಶ್ರೀನಿವಾಸ್ ಭರವಸೆ ನೀಡಿದರು.

ಕಾಲೇಜ್ ಸಹದ್ಯೋಗಿಗಳಾದ ಡಾ.ಎಸ್.ಆರ್.ಲೇಪಾಕ್ಷ, ರಂಗಸ್ವಾಮಿ, ಪ್ರೊ.ಎಲ್.ನಾಗರಾಜಪ್ಪ, ಪತ್ರಕರ್ತರಾದ ಹರಿಯಬ್ಬೆ ಹೆಂಜಾರಪ್ಪ, ಕಣುಮಪ್ಪ ಬಡಾವಣೆಯ ಹೊಯ್ಸಳ ಕುಮಾರ್, ವಕೀಲರಾದ ಶಿವು ಯಾದವ್, ತಿಮ್ಮಣ್ಣ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಚನ್ನಬಸಪ್ಪ, ವಾರ್ಡನ್ ಬಿ.ಬಡಪ್ಪ, ಆರ್ಫನ್ ಅಲಿ ಮತ್ತಿತರರು ಹಾಜರಿದ್ದರು.

About The Author

Leave a Reply

Your email address will not be published. Required fields are marked *