April 20, 2024

Chitradurga hoysala

Kannada news portal

100 ತೆಂಗಿನ ಸಸಿ ನೆಡುವ ಕಾರ್ಯಕ್ಕೆ. ಶಿವಮೂರ್ತಿ ಮುರುಘಾ ಶರಣರು ಮತ್ತು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಅವರ ಸಾರಥ್ಯದಲ್ಲಿ ಚಾಲನೆ .

1 min read
ಚಿತ್ರದುರ್ಗ:ತಾಲ್ಲೂಕಿನ ಸೀಬಾರ ಸಮೀಪದಪುಣೆ ಬೆಂಗಳೂರು ರಾಷ್ಟ್ರೀಯಹೆದ್ದಾರಿಯಲ್ಲಿರುವ ರಾಷ್ಟ್ರನಾಯಕಎಸ್.ನಿಜಲಿಂಗಪ್ಪ ಅವರ ಸ್ಮಾರಕ ಇನ್ನಷ್ಟುಅಂದಗೊಳ್ಳಲಿದೆ. ಸ್ಮಾರಕದ ಆವರಣದಲ್ಲಿ100 ತೆಂಗಿನ ಸಸಿಗಳನ್ನು ನೆಡುವ ಕಾರ್ಯಗುರುವಾರ ನಡೆಯಿತು.ಮುರುಘಾ ಮಠದ ಶಿವಮೂರ್ತಿಮುರುಘಾ ಶರಣರು ಹಾಗೂ ಶಿವಶರಣಮಾದಾರ ಚನ್ನಯ್ಯ ಗುರುಪೀಠದಬಸವಮೂರ್ತಿ ಮಾದಾರ ಸ್ವಾಮೀಜಿ ಅವರ ಸಾರಥ್ಯದಲ್ಲಿ ಸಸಿ ನೆಡುವಕಾರ್ಯಕ್ಕೆ ಚಾಲನೆ ನೀಡಲಾಯಿತು.ಸ್ಮಾರಕದ ಸುತ್ತಲಿನ ಪ್ರದೇಶದಲ್ಲಿ ಕಲ್ಪವೃಕ್ಷಕಂಗೊಳಿಸಲಿವೆ. ತೋಟಗಾರಿಕೆ ಇಲಾಖೆತೆಂಗಿನ ಸಸಿಗಳನ್ನು ಒದಗಿಸಿದೆ.`ಸ್ಮಾರಕದ ಆವರಣದಲ್ಲಿ ನೂರು ತೆಂಗಿನಸಸಿಗಳನ್ನು ನೆಡುತ್ತಿರುವುದು ಸ್ವಾಗತಾರ್ಹಬೆಳವಣಿಗೆ. ಇದರ ಫಲ ನೆಟ್ಟವರಿಗೇಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು.ಮುಂದಿನ ಪೀಳಿಗೆಗೆ ಇದರ ಫಲ ದೊರೆತರೆ ಶ್ರಮ ಸಾರ್ಥಕವಾಗುತ್ತದೆ’ ಎಂದುಹೇಳಿದರು.ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ, `ಜನಸಂಖ್ಯೆಹೆಚ್ಚುತ್ತಿರುವ ಪರಿಣಾಮ ಕಾಡುವಿನಾಶದ ಅಂಚಿಗೆ ಸಾಗುತ್ತಿದೆ. ಇಂತಹಸಂದರ್ಭದಲ್ಲಿ ಕಾಡನ್ನು ಸಂರಕ್ಷಿಸಲುಪ್ರಯತ್ನಿಸದೇ ಹೋದರೆ ಮುಂದೆ ತೂಂದರೆ ಅನುಭವಿಸಬೇಕಾಗುತ್ತದೆ.ಹೀಗಾಗಿ, ಪ್ರತಿಯೊಬ್ಬರಲ್ಲಿ ಮರ?ಗಿಡಬೆಳೆಸುವ ಮನೋಭಾವ ಹೆಚ್ಚಾಗಬೇಕು’ಎಂದು ಅಭಿಪ್ರಾಯಪಟ್ಟರು.`ಆಮ್ಲಜನಕಕ್ಕೆ ಕೊರತೆ ಉಂಟಾಗಿರುವುದುಕೋವಿಡ್ ಸಂದರ್ಭದಲ್ಲಿ ಮನವರಿಕೆಆಗಿದೆ. ಆಮ್ಲಜನಕಕ್ಕೆ ಪರದಾಟಉಂಟಾಗಿದ್ದನ್ನು ಕಣ್ಣಾರೆ ಕಂಡಿದ್ದೇವೆ.ಆಮ್ಲಜನಕಕ್ಕೆ ಪೂರಕವಾದ ವಾತಾವರಣನಿರ್ಮಾಣಕ್ಕೆ ಗಿಡ-ಮರಗಳ ಅಗತ್ಯವಿದೆ.

ಕಾಡು ಕಡಿಮೆಯಾಗಿ ಜನಸಂಖ್ಯೆ
ಹೆಚ್ಚಾದಂತೆ ಮನುಷ್ಯನಿಗೆ ಅಗತ್ಯವಾಗಿ
ಬೇಕಾಗಿರುವ ಜೀವವಾಯುಗೆ ಕೊರತೆ
ಉಂಟಾಗುತ್ತದೆ’ ಎಂದು ಹೇಳಿದರು.

`ಇಂತಹ ಪರಿಸ್ಥಿತಿಯಲ್ಲಿ ಜನರು ಹೆಚ್ಚು
ಜಾಗೃತಿ ವಹಿಸಬೇಕು. ಪ್ರತಿಯೊಬ್ಬರು
ಸಾಮರ್ಥ್ಯಕ್ಕೆ ಅನುಗುಣವಾಗಿ ಗಿಡ ನೆಟ್ಟು
ಪೆÇೀಷಣೆ ಮಾಡಬೇಕು. ಇದರಿಂದ
ಮತ್ತೊಬ್ಬರಿಗೆ ಸ್ಫೂರ್ತಿ ಸಿಗುತ್ತದೆ. ಈ
ನಿಟ್ಟಿನಲ್ಲಿ ಸ್ಮಾರಕದ ಆವರಣದಲ್ಲಿ ತೆಂಗಿನ
ಸಸಿಗಳನ್ನು ನೆಡಲಾಗಿದೆ. ಎಲ್ಲವನ್ನೂ
ನೀಡುವ ಕಲ್ಪವೃಕ್ಷವನ್ನು ಬೆಳೆಸಿದರೆ ಮುಂದೆ
ಈ ಮರ ಮಾನವನನ್ನು ಸಾಕುತ್ತದೆ.
ಮುಂಗಾರು ಮಳೆಯ ಸಂದರ್ಭದಲ್ಲಿ
ಎಲ್ಲರೂ ಗಿಡ ಬೆಳೆಸಬೇಕು’ ಎಂದರು.

ಇಂದಿನ `ಪರಿಸರ
ಮಾಲಿನ್ಯವನ್ನು ತಡೆಯಲು ಹಸಿರೀಕರಣ
ಅತ್ಯಗತವಾಗಿದೆ. ಇತ್ತೀಚೆಗೆ ಬೆಳೆದು
ನಿಂತ ಮರಗಳನ್ನು ಕಡಿಯುವುದು
ಹೆಚ್ಚಾಗುತ್ತಿದೆ. ಆದರೆ ಗಿಡ ನೆಡುವ
ಸಂಸ್ಕøತಿ ಕ್ಷೀಣಿಸುತ್ತಿದೆ. ಮರ ಹನನದ
ಪ್ರಮಾಣಕ್ಕೆ ಅನುಗುಣವಾಗಿ ಸಸಿ ನೆಡುವ
ಕಾರ್ಯವೂ ಸಾಗಬೇಕು. ಪರಿಸರ
ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು’ ಎಂದು
ಶಿವಮೂರ್ತಿ ಮುರುಘಾ ಶರಣರು
ಸಲಹೆ ನೀಡಿದರು.

ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಗೌರವ
ಕಾರ್ಯದರ್ಶಿ ಎಚ್.ಹನುಮಂತಪ್ಪ,
ಸಂಯೋಜಕ ಕೆಇಬಿ ಷಣ್ಮುಖಪ್ಪ,
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ
(ಕುಡಾ) ಅಧ್ಯಕ್ಷ ಟಿ.ಬದರಿನಾಥ್, ಕಾಂಗ್ರೆಸ್
ಮುಖಂಡ ಜಿ.ಎಸ್.ಮಂಜುನಾಥ್,
ಇತಿಹಾಸ ತಜ್ಞ ಡಾ.ಬಿ.ರಾಜಶೇಖರಪ್ಪ,
ವೀರಶೈವ ಮಹಾಸಭಾದ ಜಿಲ್ಲಾ ಘಟಕದ
ಅಧ್ಯಕ್ಷ ಮಹಡಿ ಶಿವಮೂರ್ತಿ ಇದ್ದರು.

About The Author

Leave a Reply

Your email address will not be published. Required fields are marked *