Recent Posts

October 16, 2021

Chitradurga hoysala

Kannada news portal

ಉಸ್ತುವಾರಿ ಸಚಿವರಾಗಿದ್ದ ಆಂಜನೇಯ ಜನರ ಕೈಗೆ ಸಿಗುತ್ತಿದ್ದರು: ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ರಾಮುಲು ಯಾರ ಕೈಗೂ ಸಿಗುತ್ತಿಲ್ಲ ಬಾಲಕೃಷ್ಣ

1 min read

ಉಸ್ತುವಾರಿ ಸಚಿವರಾಗಿದ್ದ ಆಂಜನೇಯ ಜನರ ಕೈಗೆ ಸಿಗುತ್ತಿದ್ದರು: ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ರಾಮುಲು ಯಾರ ಕೈಗೂ ಸಿಗುತ್ತಿಲ್ಲ ಬಾಲಕೃಷ್ಣಉಸ್ತುವಾರಿ ಸಚಿವರಾಗಿದ್ದ ಆಂಜನೇಯ ಜನರ ಕೈಗೆ ಸಿಗುತ್ತಿದ್ದರು: ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ರಾಮುಲು ಯಾರ ಕೈಗೂ ಸಿಗುತ್ತಿಲ್ಲ ಬಾಲಕೃಷ್ಣ

ಚಿತ್ರದುರ್ಗ ●ದೇಶದಲ್ಲಿ ಕೊರೋನಾದಿಂದ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಅಲ್ಲದೆ ಬಹಳಷ್ಟು ಜನ ಕೆಲಸವನ್ನು ಸಹ ಕಳೆದುಕೊಂಡು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಸಾವಿನ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಜಿ.ಬಿ ಬಾಲಕೃಷ್ಣಸ್ವಾಮಿ ಯಾದವ್ ಆರೋಪಿಸಿದ್ದಾರೆ. ನಗರದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರೇ ಬಿಜೆಪಿ ಪಕ್ಷದ ಉಪಾಧ್ಯಕ್ಷರಾದ ವಿಜೇಂದ್ರರವರ ಹೆಸರು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದಾರೆ. ಸಚಿವರು ಈ ಬಗ್ಗೆ ಪ್ರತಿಕ್ರಿಯಿಸಿ ಅವನು ಆ ರೀತಿಯವನಲ್ಲ ಎಂದು ಹೇಳಿರುವುದು ವಿಪರ್ಯಾಸ. ಇವೆಲ್ಲ ಬೆಳವಣಿಗೆಯನ್ನು ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾರೆ.ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್.ಆಂಜನೇಯರವರು ಸಾರ್ವಜನಿಕರಿಗೆ ಕೈಗೆ ಸಿಗುತ್ತಿದ್ದರು ಆದರೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಯಾರ ಕೈಗೂ ಸಿಗುತ್ತಿಲ್ಲ ಯಾವುದೇ ಗ್ರಾಮ ವಾಸ್ತವ್ಯ ಹೂಡುತ್ತಿಲ್ಲ ಕೇವಲ ಅತಿಥಿಯಂತೆ ಭೇಟಿ ನೀಡುತ್ತಾರೆ. ಮೊಳಕಾಲ್ಮೂರಿಗೆ ಹಿನ್ನಿರಿನ ಯೋಜನೆ ನೀಡಿದ್ದು ಕಾಂಗ್ರೆಸ್ ಪಕ್ಷ ಆದರೆ ಅದನ್ನು ಬಿಜೆಪಿಯವರು ನಾವು ಮಾಡಿದ್ದು ಅಂತ ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅವರು ಮಾಡಿದ್ದೆ ಆಟ ರಾಜ್ಯಪಾಲರನ್ನು 5 ವರ್ಷ ಕ್ಕೊಮ್ಮೆ ಬದಲಾಯಿಸಬೇಕು ಆದರೆ ಈಗಿನ ರಾಜ್ಯಪಾಲರು ಕರ್ನಾಟಕಕ್ಕೆ ಬಂದು 7 ವರ್ಷ ಆಗಿದೆ. ●ಬಿಜೆಪಿ ಸರ್ಕಾರ ಹಿಂಬಾಗಿಲಿನಿಂದ ಬಂದು ಭ್ರಷ್ಟ ಅಧಿಕಾರ ನಡೆಸುತ್ತಿದೆ ಇಂಥ ಸರ್ಕಾರವನ್ನು ರಾಜ್ಯಪಾಲರು ಕೆಳಗೆ ಇಳಿಸಬೇಕು ಎಂದು ಬಾಲಕೃಷ್ಣ ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜ್‍ಪೀರ್ ಮಾತನಾಡಿ, ಕೊರೋನಾ ಸಮಯದಲ್ಲಿಯೂ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಏರಿಸಿ ಹೆಚ್ಚಿನ ತೆರಿಗೆಯನ್ನು ಸಂಗ್ರಸುತ್ತಿದೆ. ಬೆಲೆ ಏರಿಕೆಯನ್ನು ಖಂಡಿಸಿ ಕಳೆದ ತಿಂಗಳು ಎಲ್ಲಾ ಪೆಟ್ರೋಲ್ ಬಂಕ್‍ಗಳ ಮುಂದೆ ಪ್ರತಿಭಟನೆ ನಡೆಸಿದರೂ ಸಹ ಬೆಲೆಯನ್ನು ಕಡಿಮೆ ಮಾಡುತ್ತಿಲ್ಲ ಎಂದು ತಿಳಿಸಿ ಜು.07 ರಂದು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸೈಕಲ್ ಜಾಥಾ ವನ್ನು ಮಾಡಲಿದ್ದೇವೆ ಎಂದರು.ಜುಲೈ ತಿಂಗಳಿನಲ್ಲಿ ಸಹಾಯ ಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೊರೊನಾಗೆ 3 ಲಕ್ಷ ಜನರು ಬಲಿಯಾಗಿದ್ದಾರೆಂದು ಹೇಳಿದ ಸರ್ಕಾರ ನ್ಯಾಯಾಲಯ ಎಲ್ಲರಿಗೂ ಪರಿಹಾರ ಕೊಡಬೇಕೆಂದು ಆದೇಶಿಸುತ್ತಿದ್ದಂತೆ 30 ಸಾವಿರ ಎಂದು ತಿರುಚಿದೆ. ಕೋವಿಡ್ ಸೆಂಟರ್‍ನಲ್ಲಿ ಮೃತಪಟ್ಟವರ ಲೆಕ್ಕ ಇದೆ. ಆದರೆ ಆಸ್ಪತ್ರೆಗೆ ಬಾರದೆ ಮನೆಯಲ್ಲಿ ಕೊರೊನಾದಿಂದ ಮರಣ ಹೊಂದಿದವರ ಸಂಖ್ಯೆ ಮತ್ತು ಮಾಹಿತಿಯನ್ನು ಕಲೆ ಹಾಕುವ ಸಲುವಾಗು ಸಹಾಯ ಹಸ್ತ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂ ಮತ್ತು ಪ್ರಧಾನಿಗೆ ಕಳುಹಿಸಿ ಪರಿಹಾರ ನೀಡುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿಗಳಾದ ಸಲಿಂ ಆಹ್ಮದ್ ಜು. 06 ರಂದು ಚಿತ್ರದುರ್ಗಕ್ಕೆ ಬೇಟಿ ನೀಡಲಿದ್ದಾರೆ. ಅಂದು ಸಿಬಾರಕ್ಕೆ ಭೇಟ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪರವರ ಸಮಾಧಿಗೆ ಬೇಟಿ ನೀಡಿ, ನಂತರ ಉಮಾಪತಿ ಕಲ್ಯಾಣ ಪಂಟಪದಲ್ಲಿ 11 ಗಂಟೆಗೆ ಜಿ.ಪ. ತಾ.ಪಂ. ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಲಿದ್ದಾರೆ. ನಂತರ ಪಕ್ಷದ ಕಚೇರಿಯಲ್ಲಿ ಮಧ್ಯಾಹ್ನ ಮುಖಂಡರ ಜೊತೆ ಜಿಲ್ಲೆಯ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದ ಎಸ್.ಟಿ ಘಟಕದ ಅಧ್ಯಕ್ಷ ಅಂಜಿನಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎನ್.ಡಿ ಕುಮಾರ್, ಐ.ಎನ್.ಟಿ.ಯು.ಸಿ ಘಟಕದ ಅಧ್ಯಕ್ಷ ಅಶೋಕ ನಾಯ್ಡು ಮೈಲಾರಪ್ಪ, ಲಕ್ಷೀಕಾಂತ್, ಕಾರ್ಯಾಧ್ಯಕ್ಷ ಹಾಲೇಶ್, ಸಂಪತ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed