March 29, 2024

Chitradurga hoysala

Kannada news portal

ನೂರು ದಿನ ನೂರಾರು ಅನುಭವ

1 min read

ಸಂಪಾದಕೀಯ.
ನೂರು ದಿನ ನೂರಾರು ಅನುಭವ

ಕೋವಿಡ್ 19 ರ ಆರ್ಭಟ ಕೋರನಾ ಒಂದನೇ ,ಎರಡನೇ ಅಲೆಯ ರೂಪಾಂತರವಾಗಿ ಮೂರನೇ ಸರಣಿಗೆ ಸಜ್ಜಾಗುತ್ತಿರುವ ಸಂದರ್ಭ,ಈ ಪ್ಯಾಂಡಾಮಿಕ್ ಪರಿಸ್ಥಿತಿಯಲ್ಲಿ ಕೋವಿಡ್ ತನ್ನ ಆರ್ಭಟವನ್ನು ಪ್ರತಿಯೊಬ್ಬರ ಮೇಲೂ ಒಂದಿಲ್ಲೊಂದು ಅನಾಹುತಗಳನ್ನು ಮಾಡುತ್ತಲೇ ಮುನ್ನುಗ್ಗಿ ಈಗ ತಣ್ಣಗಾಗಿರುವ ಸ್ಥಿತಿಯಲ್ಲಿರುವ ಹೊತ್ತಿನಲ್ಲಿ,ಪತ್ರಿಕೆಯು ನೂರು ದಿನ ದಾಟಿ ಸಾಗುತ್ತಿದೆ,ಹೀಗೆಯೇ ನಿರಾತಂಕವಾಗಿ ಸಾಗುವ ಗುರಿ ಉದ್ದೇಶದೊಂದಿಗೆ ,,, ಪತ್ರಿಕೆಯು ನೂರು ದಿನ ನನಗೆ ನೂರಾರು ಅನುಭವವನ್ನು ನೀಡಿದೆ.ನಾನು ಈ ಪತ್ರಿಕೆಯನ್ನು ಪ್ರಾರಂಭಿಸುವ ಪೂರ್ವದಲ್ಲಿ ನನ್ನ ಕ್ಷೇತ್ರ ರಾಜಕೀಯ. ಪತ್ರಿಕರಂಗವು ನಾನು ಇಷ್ಟಪಡುವ ಕ್ಷೇತ್ರವಾಗಿತ್ತು,ಇನ್ನೂ ಇಲ್ಲಿಗೆ ಬಂದ ಮೇಲೆ ಒಳಿತು, ಕೆಡುಕಿನ ಹೊಸ ವ್ಯಾಖ್ಯಾನಗಳು ನಮ್ಮ ಅನುಭವಕ್ಕೆ ಬಂದವು,ರಾಜಕೀಯ ಕ್ಷೇತ್ರದ ಅನುಭವವೇ ಬೇರೆ ಈ ವೃತ್ತಿಜೀವನವೇ ಬೇರೆ. ನಾನು ಇಲ್ಲಿ ಬರೆದುಕೊಳ್ಳುವುದು ಬಹಳವಿದೆ , ಬರೆಯಲು ಕಾಲವು ಇದೆ ಮುಂದೆ ಬರೆಯುವೆ.ಸದ್ಯ ನೂರು ದಿನ ದಲ್ಲಿನ ನೂರಾರು ಅನುಭವದಲ್ಲಿ ಕೆಲವೊಂದು ಹೇಳುವುದಾದರೆ,. ನಾನು ಅಪೇಕ್ಷಿತರು ಕೈ ಕೊಡುತ್ತಾರೆ, ನಿರಾಪೇಕ್ಷೀತರು ಅಪೇಕ್ಷಿಸುತ್ತಾರೆ ಎಂಬುದಾಗಿತ್ತು . ಒಟ್ಟಾರೆಯಾಗಿ ಪ್ರತ್ಯಕ್ಷವಾಗಿ , ಪರೋಕ್ಷವಾಗಿ ಸಹಕರಿಸಿದ,ಮತ್ತು ಪ್ರತ್ಯಕ್ಷ ಸಾಧ್ಯವಾಗದೆ , ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿರುವ ಶಕ್ತಿಗೆ ಒಂದು ಸಾಷ್ಟಾಂಗನಮಸ್ಕಾರದೊಂದಿಗೆ ನಮ್ಮೆಲ್ಲ ಹಿತೈಷಿಗಳಿಗೆ , ಸಹಕರಿಸಿದ ಎಲ್ಲರಿಗೂ ವಂದಿಸಿ , ಮತ್ತೆ ಅದೇ ಸಹಕಾರದೊಂದಿಗೆ ನಿಮ್ಮೆಲ್ಲರ ಹಾರೈಕೆಯೊಂದಿಗೆ ಒಟ್ಟಾಗಿ ಮುಂದೆ ಸಾಗೋಣ.                                    ● ನಿಮ್ಮಯ
ಸಿಎನ್ಕೆ.

About The Author

Leave a Reply

Your email address will not be published. Required fields are marked *