March 29, 2024

Chitradurga hoysala

Kannada news portal

ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಕೇಂದ್ರ ಮಂತ್ರಿ?

1 min read

*ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ       ಕೇಂದ್ರ ಮಂತ್ರಿ?*

ಚಿತ್ರದುರ್ಗ : ಕೇಂದ್ರ ಮಂತ್ರಿ ಮಂಡಲದ ಸಂಪುಟ ವಿಸ್ತರಣೆ ಕಾಯಂ ಆಗಿದ್ದು, ಪ್ರಮಾಣವಚನವೂ ನಾಳೆ ಅಥವಾ ನಾಡಿದ್ದು ಆಗಲಿದೆ ?. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಮಂತ್ರಿಮಂಡಲದಲ್ಲಿ ಚಿತ್ರದುರ್ಗದ ಸಂಸದ ಎ ನಾರಾಯಣಸ್ವಾಮಿಗೆ ಕೇಂದ್ರ ಮಂತ್ರಿ ಸ್ಥಾನವೂ ಲಭಿಸುವ ಎಲ್ಲಾ ಸಾಧ್ಯತೆಗಳು ಒದಗಿ ಬಂದಿವೆ . ಬಲ್ಲ ಮೂಲಗಳಿಂದ ಕೇಂದ್ರ ಸಚಿವ ಸಂಪುಟಕ್ಕೆ 3 ಸ್ಥಾನಗಳು ಲಭಿಸಲಿದ್ದು ಅದರಲ್ಲಿ ಪರಿಶಿಷ್ಟ ಜಾತಿಯ 1ಸ್ಥಾನಕ್ಕೆ ಆಯ್ಕೆ ನಡೆಯುತ್ತದೆ, ಅದರಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕ ರಾಜ್ಯದ ಮಾದಿಗ ಸಮುದಾಯಕ್ಕೆ 1 ಸ್ಥಾನ ಒಲಿಯುವ ಸಾಧ್ಯತೆ ಇದೆ.ಇಲ್ಲಿ ಪೂರ್ಣ ಲೆಕ್ಕಾಚಾರದೊಂದಿಗೆ ಕಣಕ್ಕೆ ಇಳಿದಿರುವ ಬಿಜೆಪಿ ಪಕ್ಷವು, ಅಳೆದು ತೂಗಿ ಮಾದಿಗ ಸಮುದಾಯ ದವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ ? ನಾರಾಯಣಸ್ವಾಮಿ ಯವರ ಪೂರ್ವಪರ ಪರಾಮರ್ಶೆಗಳ ಅರಿವಿರುವ ಪಕ್ಷವು ಕರ್ನಾಟಕದಲ್ಲಿ ಇವರು ಹೊಂದಿರುವ ಜನಪ್ರಿಯತೆ ,ವ್ಯಕ್ತಿತ್ವ, ಮೌಲ್ಯ ಮತ್ತು ಅವರಿಗಿರುವ ಸಂಘಟನಾ ಚತುರತೆಯನ್ನು ಬಿಜೆಪಿಯು ಅರಿತಿದೆ. ಕಾಂಗ್ರೆಸ್ ಕಡೆ ವಾಲಬಹುದಾದ ಎಡ, ಬಲಗಳ ಲೆಕ್ಕಾಚಾರವನ್ನು ಗ್ರಹಿಸಿ , ಎಡಬಲದಲ್ಲಿ ಎಡ ಬಲದಲ್ಲಿ ಹೆಚ್ಚಿರುವ ಮಾದಿಗ ಸಮುದಾಯವನ್ನು ಬಿಜೆಪಿಯ ಜೊತೆಗೆ ಕರೆದೊಯ್ಯುವ ಹಿನ್ನೆಲೆಯ ಲೆಕ್ಕಾಚಾರದಲ್ಲಿ ಈ ನಡೆ ಬಿಜೆಪಿಯ ರಾಜಕಾರಣಕ್ಕೆ ಸೂಕ್ತ ಎನ್ನಬಹುದಾಗಿದೆ . ಹಾಗೂ ಕೇಂದ್ರ ಮಂತ್ರಿ ಮಂಡಲಕ್ಕೆ ಈ ಹಿಂದೆಯೇ ಸೇರ್ಪಡೆಗೊಂಡಿದ್ದ ರಮೇಶ್ ಜಿಗಜಿಣಗಿ ಅವರ ಆಯ್ಕೆ ಸಾಧ್ಯತೆ ಕ್ಷೀಣವಿದೆ!ಅವರಿಗೆ ವಯಸ್ಸಾಗಿರುವುದರಿಂದಲೋ ,ಅವರು ಇಡೀ ರಾಜ್ಯವನ್ನು ಸುತ್ತಿ ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿಸುವ ಶಕ್ತಿಯು ಕಡಿಮೆ ಎಂದು ಅರಿತಿರುವ ಬಿಜೆಪಿಯು ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಹಾಗೂ ಆರೆಸ್ಸೆಸ್ ಹಿನ್ನೆಲೆ ಹೊಂದಿರುವ , ಮಾದಿಗ ಸಮುದಾಯದಲ್ಲಿ ಹೆಚ್ಚು ಜನಪ್ರಿಯತೆ ,ಮತ್ತು ಸಂಘಟನೆ ಹಿನ್ನಲೆ ಉಳ್ಳವರಾಗಿರುವುದರಿಂದ ಹಾಗೂ ಈ ಹಿಂದೆ ರಾಜ್ಯದ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅವರು ನೀಡಿದಂತಹ ಕಾರ್ಯಕ್ರಮಗಳು, ಜನಪ್ರಿಯ ನಡೆ ,ಹಾಗೂ ಆರೆಸ್ಸೆಸ್ ನಲ್ಲಿ, ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿಯಲ್ಲಿ ಅವರಿಗೆ ಉತ್ತಮ ನಾಯಕರ ಬೆಂಬಲವಿರುವುದರಿಂದ, ರಾಜ್ಯದಲ್ಲಿ ಅತಿದೊಡ್ಡ ಪರಿಶಿಷ್ಟ ಜಾತಿಯ ಒಂದು ಸಮುದಾಯವನ್ನು ಬಿಜೆಪಿಯ ಜೊತೆಯಲ್ಲಿ ಕೊಂಡೊಯ್ಯುವ ಶಕ್ತಿ ಅವರಿಗಿದೆ ಎನ್ನುವ ದೃಷ್ಟಿಯಿಂದ ಕೇಂದ್ರ ಮಂತ್ರಿ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಾಗಿವೆ .

About The Author

Leave a Reply

Your email address will not be published. Required fields are marked *