April 19, 2024

Chitradurga hoysala

Kannada news portal

ಪ್ರಥಮ ಪೀಠಾಧ್ಯಕ್ಷರಾದ ಜಗದ್ಗುರು ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿಗಳ ಆದರ್ಶ ತತ್ವಗಳನ್ನು ಪಾಲಿಸಬೇಕು ಅಧ್ಯಕ್ಷ ಎಸ್.ಶ್ರೀರಾಮ್

1 min read

ಕನಕ ಗುರುಪೀಠದಲ್ಲಿ ಕನಕಶ್ರೀಗಳ ಪುಣ್ಯಸ್ಮರಣೋತ್ಸವ
ಕುರುಬ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದ ಪ್ರಥಮ ಜಗದ್ಗುರು

 

ಚಿತ್ರದುರ್ಗ: ಜು.: ಹಲವು ಸಮುದಾಯಗಳ ಸಂಸ್ಕøತಿ ಉಳಿವಿಗೆ, ಪೀಠಗಳ ಸ್ಥಾಪನೆಗೆ ಪ್ರೇರಣೆಯಾದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪ್ರಥಮ ಪೀಠಾಧ್ಯಕ್ಷರಾದ ಜಗದ್ಗುರು ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿಗಳ ಆದರ್ಶಗಳನ್ನು ತತ್ವಗಳನ್ನು ಎಲ್ಲರೂ ಪಾಲಿಸಬೇಕು ಮನೆಯಲ್ಲಿ ಮನೆಯಲ್ಲಿ ಶ್ರೀಗಳ ನೆನಪಿನೋತ್ಸವ ನಡೆಯಬೇಕು ಆದರೆ ನಾವೇ ಅವರನ್ನ ಮರೆತಿರುವುದು ಸರಿಯಲ್ಲ ಎಂದು ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಎಸ್. ಶ್ರೀರಾಮ್ ಹೇಳಿದರು.
ಅವರು ಚಿತ್ರದುರ್ಗದ ಕನಕ ಗುರುಪೀಠದ ಶಾಖಾಮಠದಲ್ಲಿ ಜಿಲ್ಲಾ ಕುರುಬರ ಸಂಘ, ಹಾಲುಮತ ಮಹಾಸಭಾ, ಕನಕ ನೌಕರರ ಸಂಘ, ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟ, ಕ್ರಾಂತಿವೀರ ಸಂಗೋಳ್ಳಿರಾಯಣ್ಣ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಕನಕಗುರುಪೀಠದ ಪ್ರಥಮ ಪೀಠಾಧ್ಯಕ್ಷರಾದ ಜಗದ್ಗುರು ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿಗಳ 15ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕøತಿ ಇತಿಹಾಸ ಪರಂಪರೆಯನ್ನು ನಾವು ಮುಂದಿನ ಪೀಳಿಗೆಗೆ ಹೇಳಬೇಕಿದೆ. ಅದರಂತೆ ನಮ್ಮ ಪ್ರಥಮ ಪೀಠಾಧ್ಯಕ್ಷರ ಬಗ್ಗೆ ಮನೆಗಳಲ್ಲಿ ತಿಳಿಸಬೇಕು ಎಂದರು. ನಮಗೆ ನಮ್ಮ ಕನಕ ಮಠದ ಕೃಪೆ ಇದೆ. ಕುರುಬರಾದ ನಾವು ಮುಂದೆ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಮಠದಲ್ಲಿ ಮಾಡಬೇಕು. ಶ್ರೀಗಳು ಇದ್ದ ಅವಧಿಯಲ್ಲಿ ಕುರುಬ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್. ಮಂಜಪ್ಪ ಮಾತನಾಡಿ, ಹಾಲುಮತ ಕುರುಬ ಸಮಾಜವು ಸಂಘಟನೆಯಿಂದ ದೂರ ಇದ್ದಕಾಲವದು. ಮೊಟ್ಟಮೊದಲು ಶ್ರೀಮಠ ಕಟ್ಟುವ ಕನಸು ಕಂಡ ಮುಖಂಡರು ಯಶಸ್ಸು ಕಂಡರು. ನಂತರ ಸ್ವಾಮೀಜಿ ಆಯ್ಕೆಯಲ್ಲಿಯೂ ಯಶಸ್ವಿಯಾದರು ಬೀರೇಂದ್ರ ಕೇಶವನಂದ ಶ್ರೀಗಳು ಅಂದು ಚಿತ್ರದುರ್ಗಕ್ಕೆ ಬಂದಾಗ ಇಡೀ ಕೋಟೆನಾಡಿದ ಕುರುಬರು ಹಬ್ಬದಂತೆ ಆಚರಿಸಿದ್ದರು. ಅಂದು ಹತ್ತು ಲಕ್ಷಕ್ಕೂ ಅಧಿಕ ಜನ ಸೇರಿ ಕಾಗಿನೆಲೆಯಲ್ಲಿ ಮಠ ಸ್ಥಾಪಿಸಿದ್ದು ಇತಿಹಾಸ ಎಂದರು.
ಬುಡಕಟ್ಟು ಸಂಸ್ಕøತಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಸಂಚಾಲಕ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿ, ಸಹಸ್ರಾರು ವರ್ಷಗಳ ಸಿದ್ಧ-ರಸಸಿದ್ದ-ನಾಥ ಪರಂಪರೆಯ ಸಮಗ್ರತೆಯನ್ನು ಇಂಬಾಗಿಸಿಕೊಂಡು ನಡೆಯುತ್ತಾ ಇಂದಿನ ಸಾಮಾಜಿಕ ನ್ಯಾಯದ ಸಮಪಾಲು ಸಮಬಾಳು ಬದುಕಿಗೆ ದಿಟ್ಟ ಧ್ವನಿಯಾಗಿದ್ದರು, ಸಮಾಜೋಧಾರ್ಮಿಕ ಸಂತ ಕನಕದಾಸರ ಹೆಸರಿನಲ್ಲಿ ಸ್ಥಾಪನೆಗೊಂಡ ಪೀಠಕ್ಕೆ ನಾಡಿನಲ್ಲಿ ಗೌರವ ತಂದುಕೊಟ್ಟ ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿ ತ್ಯಾಗ, ಸೇವಾ ಮನೋಭಾವ, ನಿಷ್ಪಕ್ಷಪಾತ ನ್ಯಾಯ ನಿಷ್ಟೂರಿಯಾಗಿ ಆಧ್ಯಾತ್ಮದ ಜೀವಧಾರೆಯಾಗಿದ್ದರು ಎಂದರು.
ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ಕೃಷಿಕ ಸಮಾಜದ ನಿರ್ದೇಶಕ ಎಂ.ವಿ.ಮಾಳೇಶ್ ಮಾತನಾಡಿದರು. ಸಮಾರಂಭದಲ್ಲಿ ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟ ನಿರ್ದೇಶಕ ರಂಗಸ್ವಾಮಿ, ಮುಖಂಡರಾದ ಜಿ.ಟಿ ಮುತ್ಯುಂಜಯ, ಮುತ್ತುರಾಜ್, ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಗೋವರ್ಧನ್, ಮುಸ್ಲಿಂ ಸಮಾಜದ ಮುಖಂಡ ಸಿರಾಜ್, ಹಾಲುಮತ ಮಹಾಸಭಾ ಸಂಚಾಲಕ ಗಣೇಶ್ ಉಗ್ರಾಣ, ಬಿಜೆಪಿ ಮುಖಂಡ ಎ.ದೇವೇಂದ್ರಪ್ಪ, ಹಾಸ್ಯ ಸಾಹಿತಿ ಜಗನ್ನಾಥ್, ಜ್ಯೊತಿ ಲಿಂಗೇಶ್, ಬಸವರಾಜ್ ಗೌಡ, ಉಮೇಶ್, ರಾಘವಕೋಟಿ ಕುಮಾರ್, ಆರ್ ಮಂಜುನಾಥ್ ,ಲಕ್ಷೀಶ್ ಇತರರಿದ್ದರು.

 

(ಚಿತ್ರದುರ್ಗ ಹೊಯ್ಸಳ ಪತ್ರಿಕೆ ಮನವಿ : ಕೊರೋನಾ ಪಾಸಿಟಿವ್ ​ ಕೇಸ್ ​ಸಂಖ್ಯೆ ಕಡಿಮೆ ಆಗಿಲ್ಲ . ಹೀಗಾಗಿ ಪ್ರತಿಯೊಬ್ಬರು ಕೋವಿಡ್ ​​ ನಿಯಮಗಳು ಮಾಸ್ಕ್ ​​ ಧರಿಸುವುದು , ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯುವಂತಿಲ್ಲ . ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧ ಪ್ರತಿಯೊಬ್ಬರು ಕೈ ಜೋಡಿಸಿ . ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗಿ)

About The Author

Leave a Reply

Your email address will not be published. Required fields are marked *