April 25, 2024

Chitradurga hoysala

Kannada news portal

ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ. ಹೆಚ್.ಕೆ.

1 min read
ಎಚ್. ಕೆ. ವಿವೇಕಾನಂದ*

ಒಂದೊಂದೇ ಹೆಜ್ಜೆ ಇಡುತ್ತಾ,
ಒಂದೊಂದು ಗಂಟೆಯನ್ನು ಕಳೆಯುತ್ತಾ,
ಒಂದೊಂದು ಕಿಲೋಮೀಟರ್ ಸವೆಸುತ್ತಾ,
ಒಂದೊಂದು ಊಟವನ್ನು ಸವಿಯುತ್ತಾ,
ಒಂದೊಂದು ದಿನವನ್ನು ದೂಡುತ್ತಾ,
ಒಂದೊಂದು ಪರಿಸರವನ್ನು ನೋಡುತ್ತಾ,
ಒಂದೊಂದು ಪ್ರದೇಶವನ್ನು ದಾಟುತ್ತಾ,
ಒಬ್ಬೊಬ್ಬರನ್ನು ಭೇಟಿಯಾಗುತ್ತಾ,
ಒಬ್ಬೊಬ್ಬರನ್ನು ಮಾತನಾಡಿಸುತ್ತಾ,
ಒಬ್ಬೊಬ್ಬರ ಹೃದಯವನ್ನು ಇಣುಕುತ್ತಾ,
ಒಬ್ಬೊಬ್ಬರ ಭಾವನೆಗಳನ್ನು ಗ್ರಹಿಸುತ್ತಾ,
ಒಬ್ಬೊಬ್ಬರಿಂದಲೂ ಕಲಿಯುತ್ತಾ,
ಒಂದಷ್ಟು ನೋವು,
ಒಂದಷ್ಟು ನಲಿವು,
ಒಂದಷ್ಟು ಭರವಸೆ,
ಒಂದಷ್ಟು ನಿರಾಸೆ,
ಒಂದಷ್ಟು ಖುಷಿ,
ಒಂದಷ್ಟು ಆತಂಕ………….

ಹೀಗೇ ಕಳೆದವು 250 ದಿನಗಳು……….
ಹೀಗೇ ದಾಟಿದವು 7500 ಕಿಲೋಮೀಟರುಗಳು……

ನಿದ್ದೆಯ ಕ್ಷಣಗಳಿಗಾಗಿ ಹಂಬಲಿಸುತ್ತಾ,
ಊಟದ ರುಚಿಗಾಗಿ ಕಾತರಿಸುತ್ತಾ,
ನೀರಿಗಾಗಿ ಹಾತೊರೆಯುತ್ತಾ,
ಗುರಿ ತಲುಪಲು ಚಡಪಡಿಸುತ್ತಾ,
ಪ್ರೀತಿ ಗೌರವ ಅಭಿಮಾನ ಪಡೆಯುತ್ತಾ,
ಆತಿಥ್ಯ ಸ್ವೀಕರಿಸುತ್ತಾ,
ವಿರಹ ವೇದನೆ ಅನುಭವಿಸುತ್ತಾ,

ಹಾಗೋ ಹೀಗೋ ಸಾಗುತ್ತಿದೆ ಒಂದು ಕಾಲ್ನಡಿಗೆಯ ಪಯಣ………

ಇನ್ನೂ ಇನ್ನೂ ಸಾಕಷ್ಟು ಕ್ಷಣಗಳು, ದಿನಗಳು,
ಪ್ರದೇಶಗಳು, ಕಿಲೋಮೀಟರುಗಳು, ದಾಟಬೇಕಿದೆ…..

ಗಡಿಗಳನ್ನು ದಾಟುತ್ತಾ,
ಒಡೆದ ಮನಸ್ಸುಗಳನ್ನು ಬೆಸೆಯುತ್ತಾ,
ಕಲಿಯುತ್ತಾ,
ನಿಜ ಮನುಷ್ಯರನ್ನು ಹುಡುಕುತ್ತಾ,

ಸೋಲು ಗೆಲುವುಗಳ ಆತಂಕವಿಲ್ಲದೆ,
ಈ ಕ್ಷಣಗಳನ್ನು ಸವಿಯುತ್ತಾ,

ಹಾಗೋ ಹೀಗೋ ಕಳೆದವು,
250 ದಿನಗಳು,
7500 ಕಿಲೋಮೀಟರುಗಳು,

ಅದಕ್ಕಾಗಿ ನಿಮಗೆಲ್ಲಾ ಹೃದಯದಾಳದಿಂದ ವಂದಿಸುತ್ತಾ,
ಧನ್ಯತಾ ಭಾವದಿಂದ ನಮಸ್ಕರಿಸುತ್ತಾ………….

********************************************

ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ
” ಜ್ಞಾನ ಭಿಕ್ಷಾ ಪಾದಯಾತ್ರೆ ”
ನವೆಂಬರ್ 1 2020 ರಿಂದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ ಪ್ರಾರಂಭ.

ರಾಜ್ಯದ ಎಲ್ಲಾ ತಾಲ್ಲೂಕುಗಳನ್ನು ಕಾಲ್ನಡಿಗೆಯಲ್ಲಿ ಸಂಪರ್ಕಿಸುವ ಸಂಕಲ್ಪ.

ಚಾಮರಾಜನಗರದ ಕೊನೆಯ ಹಳ್ಳಿಯವರೆಗೆ…….

ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ……

BIDER
********

ವನಮಾರ್ಪಳ್ಳಿ – ಔರಾದ್,
ಔರಾದ್ – ಕಮಲನಗರ,
ಕಮಲನಗರ – ಬಾಲ್ಕಿ,
ಬಾಲ್ಕಿ – ಹುಲಸೂರು,
ಹುಲುಸೂರು – ಬಸವಕಲ್ಯಾಣ,
ಬಸವಕಲ್ಯಾಣ – ಹುಮ್ನಾಬಾದ್,
ಹುಮ್ನಾಬಾದ್ – ಚಿಟಗುಪ್ಪ,
ಚಿಟಗುಪ್ಪ – ಹಳ್ಳಿಖೇಡ್ ಬಿ,
ಹಳ್ಳಿಖೇಡ್ – ಬಸವಗಿರಿ ( ಬೀದರ್ )
ಬೀದರ್ – ವಿಠ್ಠಲ ಪುರ,

KALABURAGI
****************

ವಿಠ್ಠಲ ಪುರ – ಚಿಂಚೋಳಿ,
ಚಿಂಚೋಳಿ – ಕಾಳಗಿ,
ಕಾಳಗಿ – ಕಮಲಾಪುರ,
ಕಮಲಾಪುರ – ಕಲಬುರಗಿ,
ಕಲಬುರಗಿ – ಕಡಗಂಚಿ,( ಕೇಂದ್ರೀಯ ವಿಶ್ವವಿದ್ಯಾಲಯ)
ಕಡಗಂಚಿ – ಆಳಂದ,
ಆಳಂದ – ನಿಂಬರ್ಗಾ,
ನಿಂಬರ್ಗಾ – ಅಫಜಲಪುರ,
ಅಫಜಲಪುರ – ಕೋಳೂರು,ಗುಡ್ಡೇವಾಡಿ,
ಗುಡ್ಡೇವಾಡಿ – ಯಡ್ರಾಮಿ,
ಯಡ್ರಾಮಿ – ಸೊನ್ನ,
ಸೊನ್ನ – ಜೇವರ್ಗಿ,
ಜೇವರ್ಗಿ – ವಾಡಿ,
ವಾಡಿ – ಚಿತ್ತಾಪೂರ,
ಚಿತ್ತಾಪೂರ – ಸೇಡಂ,

YADAGIRI
************

ಸೇಡಂ – ಗುರುಮಿಠಕಲ್,
ಗುರುಮಿಠಕಲ್ – ಯಾದಗಿರಿ,
ಯಾದಗಿರಿ – ಶಹಾಪುರ,
ಶಹಾಪುರ – ಸುರಪುರ – ದೇವರ ಗೋನಾಳ್,
ದೇವರ ಗೋನಾಳ – ಕೆಂಭಾವಿ,
ಕೆಂಭಾವಿ – ಹುಣಸಗಿ,
ಹುಣಸಗಿ – ಜಾಲಹಳ್ಳಿ,

RAYACHURU
*****************

ಜಾಲಹಳ್ಳಿ – ದೇವದುರ್ಗ,
ದೇವದುರ್ಗ – ಗಬ್ಬೂರು,
ಗಬ್ಬೂರು – ರಾಯಚೂರು ನಗರ,
ರಾಯಚೂರು – ಸಿರಿವಾರ,
ಸಿರಿವಾರ – ಮಾನ್ವಿ,
ಮಾನ್ವಿ – ಸಿಂಧನೂರು,
ಸಿಂಧನೂರು – ಮಸ್ಕಿ,
ಮಸ್ಕಿ – ವಟಗಲ್,
ವಟಗಲ್ – ಹಟ್ಟಿ,
ಹಟ್ಟಿ – ಲಿಂಗಸಗೂರು,

BIJAPURA
************

ಲಿಂಗಸಗೂರು – ನಾಲತವಾಡ,
ನಾಲತವಾಡ – ಮುದ್ದೇಬಿಹಾಳ,
ಮುದ್ದೇಬಿಹಾಳ – ತಾಳಿಕೋಟೆ,
ತಾಳಿಕೋಟೆ – ಮಿಣಜಗಿ,
ಮಿಣಜಗಿ – ಬ್ಯಾಕೋಡ,
ಬ್ಯಾಕೋಡ – ಬಸವನ ಬಾಗೇವಾಡಿ ( ಇಂಗಳೇಶ್ವರ )
ಇಂಗಳೇಶ್ವರ – ದೇವರ ಹಿಪ್ಪರಗಿ,
ದೇವರ ಹಿಪ್ಪರಗಿ – ಸಿಂದಗಿ,
ಸಿಂದಗಿ – ಆಲಮೇಲ,
ಅಲಮೇಲ – ಇಂಡಿ,
ಇಂಡಿ – ಚಡಚಣ,
ಚಡಚಣ – ಅರಕೇರಿ,
ಅರಕೇರಿ – ವಿಜಯಪುರ,
ವಿಜಯಪುರ – ತಿಕೋಟಾ,
ತಿಕೋಟಾ – ಬಬಲೇಶ್ವರ,
ಬಬಲೇಶ್ವರ – ಕೊಲ್ಹಾರ,
ಕೊಲ್ಹಾರ – ಮುತ್ತಗಿ,
ಮುತ್ತಗಿ – ಯರನಾಳ,
ಯರನಾಳ – ನಿಡಗುಂದಿ,
ನಿಡಗುಂದಿ – ಆಲಮಟ್ಟಿ,

BAGALAKOTE
****************

ಆಲಮಟ್ಟಿ – ಕೂಡಲ ಸಂಗಮ,
ಕೂಡಲ ಸಂಗಮ – ಹುನಗುಂದ – ಇಳಕಲ್,
ಇಳಕಲ್ – ಪಟ್ಟದಕಲ್ಲು,
ಪಟ್ಟದಕಲ್ಲು – ಬಾದಾಮಿ,
ಬಾದಾಮಿ – ಗುಳೇದಗುಡ್ಡ,
ಗುಳೇದಗುಡ್ಡ – ಬಾಗಲಕೋಟೆ,
ಬಾಗಲಕೋಟೆ – ಬೀಳಗಿ,
ಬೀಳಗಿ – ಮುಧೋಳ,
ಮುಧೋಳ – ಜಮಖಂಡಿ,
ಜಮಖಂಡಿ – ಮಹಾಲಿಂಗಪುರ ( ಬನಹಟ್ಟಿ / ರಬಕವಿ )
ಮಹಾಲಿಂಗಪುರ – ತೇರದಾಳ,

BELAGAVI
*************

ತೇರದಾಳ – ಅಥಣಿ,
ಅಥಣಿ – ಮೋಳೆ
ಮೋಳೆ – ಕಾಗವಾಡ,
ಕಾಗವಾಡ – ರಾಯಭಾಗ,
ರಾಯಭಾಗ – ಚಿಕ್ಕೋಡಿ,
ಚಿಕ್ಕೋಡಿ – ನಿಪ್ಪಾಣಿ,
ನಿಪ್ಪಾಣಿ – ಸಂಕೇಶ್ವರ,
ಸಂಕೇಶ್ವರ – ಹುಕ್ಕೇರಿ,
ಹುಕ್ಕೇರಿ – ಘಟಪ್ರಭಾ,
ಘಟಪ್ರಭಾ – ಗೋಕಾಕ್,
ಗೋಕಾಕ್ – ಮೂಡಲಗಿ,
ಮೂಡಲಗಿ – ಹುಲಕುಂದ,
ಹುಲಕುಂದ – ರಾಮದುರ್ಗ,
ರಾಮದುರ್ಗ – ಸವದತ್ತಿ,
ಸವದತ್ತಿ – ಬೈಲಹೊಂಗಲ,
ಬೈಲಹೊಂಗಲ – ಬೆಳಗಾವಿ ನಗರ,
ಬೆಳಗಾವಿ ನಗರ – ಖಾನಾಪುರ,
ಖಾನಾಪುರ – ಬೈಲೂರು,
ಬೈಲೂರು – ಕಿತ್ತೂರು,

DARAWAD
************

ಕಿತ್ತೂರು – ಧಾರವಾಡ,
ಧಾರವಾಡ – ಹುಬ್ಬಳ್ಳಿ,
ಹುಬ್ಬಳ್ಳಿ – ಕಲಘಟಗಿ,
ಕಲಘಟಗಿ – ಕುಂದಗೋಳ,
ಕುಂದಗೋಳ – ಅಣ್ಣಿಗೇರಿ,
ಅಣ್ಣಿಗೇರಿ – ನವಲಗುಂದ,

GADAG
*********

ನವಲಗುಂದ – ನರಗುಂದ,
ನರಗುಂದ – ಯಾವಗಲ್,
ಯಾವಗಲ್ – ಬೆಳವಣಿಕಿ,
ಬೆಳವಣಿಕಿ – ರೋಣ,
ರೋಣ – ಗಜೇಂದ್ರಗಡ,
ಗಜೇಂದ್ರಗಡ – ನರೇಗಲ್,
ನರೇಗಲ್ – ಗದಗ,
ಗದಗ – ಲಕ್ಷ್ಮೇಶ್ವರ,
ಲಕ್ಷ್ಮೇಶ್ವರ – ಶಿರಹಟ್ಟಿ,
ಶಿರಹಟ್ಟಿ – ಬಾಗೇವಾಡಿ,
ಬಾಗೇವಾಡಿ – ಮುಂಡರಗಿ,
ಮುಂಡರಗಿ – ಕೊಪ್ಪಳ ನಗರ.

KOPPALA
************

ಕೊಪ್ಪಳ ನಗರ – ಕುಕನೂರು,
ಕುಕನೂರು – ಯಲಬುರ್ಗಾ,
ಯಲಬುರ್ಗಾ – ಕುಷ್ಟಗಿ,
ಕುಷ್ಟಗಿ – ಕನಕಗಿರಿ,
ಕನಕಗಿರಿ – ಗಂಗಾವತಿ,
ಗಂಗಾವತಿ – ಕಾರಟಗಿ,
ಕಾರಟಗಿ – ಶ್ರೀರಾಮ ನಗರ ( ದೇಸಾಯಿ ಕ್ಯಾಂಪ್ )
ಶ್ರೀರಾಮ ನಗರ – ಕಂಪ್ಲಿ.

BELLARY – VIJAYANAGARA
****************************
ಕಂಪ್ಲಿ – ನಡವಿ,
ನಡವಿ – ಸಿರಗುಪ್ಪ,
ಸಿರಗುಪ್ಪ – ಕುರುಗೋಡು,
ಕುರುಗೋಡು – ಬಳ್ಳಾರಿ ನಗರ,
ಬಳ್ಳಾರಿ ನಗರ – ಕುಡತಿನಿ,
ಕುಡತಿನಿ – ತೋರಣಗಲ್ಲು,
ತೋರಣಗಲ್ಲು – ಹಂಪಿ,
ಹಂಪಿ – ಹೊಸಪೇಟೆ,
ಹೊಸಪೇಟೆ – ಸಂಡೂರು,
ಸಂಡೂರು – ಕೂಡ್ಲಿಗಿ,
ಕೊಟ್ಟೂರು – ಹಗರಿ ಬೊಮ್ಮನಹಳ್ಳಿ
ಹಗರಿ ಬೊಮ್ಮನಹಳ್ಳಿ – ಉತ್ತಂಗಿ,
ಉತ್ತಂಗಿ – ಹೂವಿನ ಹಡಗಲಿ,
ಹೂವಿನ ಹಡಗಲಿ – ಹರಪನಹಳ್ಳಿ,
ಹರಪನಹಳ್ಳಿ – ಅರಿವೆ ಸಿದ್ದಾಪುರ,

HAVERI
************

ಅರಿವೆ ಸಿದ್ದಾಪುರ – ರಾಣೆಬೆನ್ನೂರು
ರಾಣೆಬೆನ್ನೂರು – ರಟ್ಟೆಹಳ್ಳಿ,
ರಟ್ಟೆಹಳ್ಳಿ – ಸರ್ವಜ್ಞನ ಮಾಸೂರು,
ಮಾಸೂರು – ಹಿರೇಕೆರೂರು,
ಹಿರೇಕೆರೂರು – ಬ್ಯಾಡಗಿ,
ಬ್ಯಾಡಗಿ – ಹಾವೇರಿ ನಗರ,
ಹಾವೇರಿ ನಗರ – ಸವಣೂರು,
ಸವಣೂರು – ಶಿಗ್ಗಾಂವ್,
ಶಿಗ್ಗಾಂವ್ – ಹಾನಗಲ್,

UTTARA KANNADA
*****************************

ಹಾನಗಲ್ – ಮುಂಡಗೋಡ,
ಮುಂಡಗೋಡ – ಬಿಸಿಲೆಕೊಪ್ಪ ( ಎಕ್ಕುಂಬಿ )
ಎಕ್ಕುಂಬಿ – ಸಿರಸಿ,
ಸಿರಸಿ – ಉಮ್ಮಜಗಿ,
ಉಮ್ಮಜಗಿ – ಯಲ್ಲಾಪುರ,
ಯಲ್ಲಾಪುರ – ಭಾಗವತಿ,
ಭಾಗವತಿ – ಹಳಿಯಾಳ,
ಹಳಿಯಾಳ – ದಾಂಡೇಲಿ,
ದಾಂಡೇಲಿ – ಜೋಯಿಡಾ,
ಜೋಯಿಡಾ – ಕದ್ರ,
ಕದ್ರ – ಕಾರವಾರ ನಗರ,
ಕಾರವಾರ ನಗರ – ಅಂಕೋಲ,
ಅಂಕೋಲ – ಕುಮಟಾ,
ಕುಮಟಾ – ಹೊನ್ನಾವರ,
ಹೊನ್ನಾವರ – ಮುರುಡೇಶ್ವರ,
ಮುರುಡೇಶ್ವರ – ಭಟ್ಕಳ,
ಭಟ್ಕಳ – ಇಡಗುಂಜಿ,
ಇಡಗುಂಜಿ – ಗೇರುಸೊಪ್ಪ,
ಗೇರುಸೊಪ್ಪ – ಮಾವಿನಗುಂಡಿ,
ಮಾವಿನಗುಂಡಿ – ಸಿದ್ದಾಪುರ,

SHIVAMOGGA
************************
ಸಿದ್ದಾಪುರ – ಸೊರಬ,
ಸೊರಬ – ಶಿರಾಳಕೊಪ್ಪ,
ಶಿರಾಳಕೊಪ್ಪ – ಶಿಕಾರಿಪುರ,
ಶಿಕಾರಿಪುರ – ಆನಂದಪುರಂ,
ಸಾಗರ – ಹೆಗ್ಗೋಡು,
ಹೆಗ್ಗೋಡು – ಬಟ್ಟೆ ಮಲ್ಲಪ್ಪ,
ಬಟ್ಟೆ ಮಲ್ಲಪ್ಪ – ಹೊಸ ನಗರ,
ಹೊಸ ನಗರ – ಸೊನಲೆ,
ಸೊನಲೆ – ತೀರ್ಥಹಳ್ಳಿ,
ತೀರ್ಥಹಳ್ಳಿ – ಮಂಡಗದ್ದೆ,
ಮಂಡಗದ್ದೆ – ಶಿವಮೊಗ್ಗ ನಗರ,
ಶಿವಮೊಗ್ಗ ನಗರ – ಕಾಚಿನಕಟ್ಟೆ,
ಕಾಚಿನಕಟ್ಟೆ – ಭದ್ರಾವತಿ,
ಭದ್ರಾವತಿ – ಸನ್ಯಾಸಿ ಕೊಡಮಗ್ಗಿ,
ಸನ್ಯಾಸಿ ಕೊಡಮಗ್ಗಿ –
**********************

DAVANAGERE
**********************

ಸನ್ಯಾಸಿ ಕೊಡಮಗ್ಗಿ – ಚನ್ನಗಿರಿ,
ಚನ್ನಗಿರಿ – ಬಸವಾಪಟ್ಟಣ,
ಬಸವಾಪಟ್ಟಣ – ಹೊನ್ನಾಳಿ + ನ್ಯಾಮತಿ,
ನ್ಯಾಮತಿ – ಕೊಮಾರನಹಳ್ಳಿ,
ಕೊಮಾರನಹಳ್ಳಿ – ಮಲ್ಲನಾಯಕನಹಳ್ಳಿ,
ಮಲ್ಲನಾಯಕನಹಳ್ಳಿ – ಹರಿಹರ
ಹರಿಹರ – ದಾವಣಗೆರೆ,
ದಾವಣಗೆರೆ – ಹೆಮ್ಮನ ಬೈತೂರು,
ಹೆಮ್ಮನ ಬೈತೂರು – ಜಗಳೂರು,

CHITRADURGA
***************************

ಜಗಳೂರು – ಸೂರಮನಹಳ್ಳಿ,
ಸೂರಮನಹಳ್ಳಿ – ಮೊಳಕಾಲ್ಮೂರು,
ಮೊಳಕಾಲ್ಮೂರು ‌- ಕೊಂಡ್ಲಹಳ್ಳಿ,
ಕೊಂಡ್ಲಹಳ್ಳಿ – ಚಳ್ಳಕೆರೆ,
ಚಳ್ಳಕೆರೆ – ಸಾಣೇಕೆರೆ ( ವೇದ ಶಾಲೆ )
ಸಾಣೇಕೆರೆ – ಹಿರಿಯೂರು,
ಹಿರಿಯೂರು – ಮೆಟಗುರ್ಕಿ,
ಮೆಟಗುರ್ಕಿ – ಚಿತ್ರದುರ್ಗ,
ಚಿತ್ರದುರ್ಗ – ಹೊಳಲ್ಕೆರೆ,
ಹೊಳಲ್ಕೆರೆ – ಮದುರೆ,
ಮದುರೆ – ಹೊಸ ದುರ್ಗ,
ಹೊಸದುರ್ಗ – ಸಾಣೇಹಳ್ಳಿ,

CHIKKAMAGALORE
***************************

ಸಾಣೇಹಳ್ಳಿ – ಅಜ್ಜಂಪುರ,
ಅಜ್ಜಂಪುರ – ತರೀಕೆರೆ,
ತರೀಕೆರೆ – ಬೀರೂರು ( ಕಡೂರು )
ಬೀರೂರು – ಸಖರಾಯಪಟ್ಟಣ,
ಸಖರಾಯಪಟ್ಟಣ -‌ ಚಿಕ್ಕಮಗಳೂರು,
ಚಿಕ್ಕಮಗಳೂರು –…….
******************************************

ನಿನ್ನೆ 7/7/2021 ಬುಧವಾರ 249 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಹೋಬಳಿಯಿಂದ ಸುಮಾರು 24 ಕಿಲೋಮೀಟರ್ ದೂರದ ಚಿಕ್ಕಮಗಳೂರು ನಗರ ತಲುಪಿತು.

ಮತ್ತೆ ಮಲೆನಾಡಿನ ವಾತಾವರಣ ಮತ್ತು ತುಂತುರು ಮಳೆ ಹನಿಗಳ ನಡುವೆ ದೂರದಲ್ಲಿ ಗಿರಿ ಶಿಖರಗಳಿಗೆ ಮುತ್ತಿಡುವ ಮೋಡಗಳ ಸುಂದರ ದೃಶ್ಯಗಳನ್ನು ಸವಿಯುತ್ತಾ ಸಾಗುತ್ತಿದ್ದೇನೆ.

ಮಾರ್ಗಮಧ್ಯದಲ್ಲಿ ವಾರ್ತಾಭಾರತಿ ಪತ್ರಿಕೆ ಮತ್ತು ಟಿವಿ ಸಂದರ್ಶನ, ಜೊತೆಯಾದ ಗೆಳೆಯರೊಂದಿಗೆ ಚರ್ಚೆ, ಸಂಜೆ ಚಿಕ್ಕಮಗಳೂರಿನಲ್ಲಿ ಮತ್ತಷ್ಟು ಗೆಳೆಯರೊಂದಿಗೆ ಮಾತುಕತೆ ನಡೆಸಲಾಯಿತು.

ಇಂದು 8/7/2021 ಗುರುವಾರ 250 ನೆಯ ದಿನ ನಮ್ಮ ಕಾಲ್ನಡಿಗೆ ಚಿಕ್ಕಮಗಳೂರು ನಗರದಲ್ಲಿಯೇ ವಾಸ್ತವ್ಯ ಹೂಡಿಲಿದೆ.

ಬೆಳಗ್ಗೆ 11/30 ಕ್ಕೆ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಒಂದು ಸಂವಾದ ಕಾರ್ಯಕ್ರಮ ಇದೆ.

ನಾಳೆ 9/7/2021 ಶುಕ್ರವಾರ 251 ನೆಯ ದಿನ ನಮ್ಮ ಯಾತ್ರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ತಲುಪಲಿದೆ.

ನಂತರ ಕೊಟ್ಟಿಗೆಹಾರ ಮೂಲಕ ಹೊಸದಾಗಿ ರಚನೆಯಾದ ಕಳಸ ತಾಲ್ಲೂಕಿನತ್ತಾ……

ಆಸಕ್ತರು ಭಾಗವಹಿಸಬಹುದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *