Recent Posts

October 16, 2021

Chitradurga hoysala

Kannada news portal

ಕಾಲೇಜುಗಳಲ್ಲಿ ಶೇ.65 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗೀರೀಶ್

1 min read

ಕಾಲೇಜುಗಳಲ್ಲಿ ಶೇ.65 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗೀರೀಶ್ 

ಚಿತ್ರದುರ್ಗ, ಜು 10

ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಕಾಲೇಜಿಗಳಲ್ಲಿ ಈಗಾಗಲೇ ಶೇ.65 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಹಾಕಲಾಗಿದ್ದು ಮುಂದಿನ 15 ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಕಾರ್ಯವನ್ನು ಮುಗಿಸಲಾಗುವುದೆಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗೀರೀಶ್ ತಿಳಿಸಿದ್ದಾರೆ.

ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ 27830 ಗುರಿಯನ್ನು ನೀಡಲಾಗಿದ್ದು ಈದುವರೆವಿಗೆ ಜಿಲ್ಲೆಯಲ್ಲಿ 16820 ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಹಾಕಲಾಗಿದು, ಮುಂದಿನ 15 ದಿನದಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗುವುದು ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ 34 ಪದವಿ, 18 ಬಿಇಡಿ,8 ಪಾಲಿಟೆಕ್ನಿಕ್, 64 ಐಟಿಐ ಸೇರಿದಂತೆ ಒಟ್ಟು 135 ಕಾಲೇಜುಗಳಿವೆ. ಇದರಲ್ಲಿ ಈಗ ಶೇ,65 ರಷ್ಟು ಲಸಿಕೆಯನ್ನು ಹಾಕಲಾಗಿದೆ. ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಇಲ್ಲ, ವಿದಾರ್ಥಿಗಳು ಪ್ರಥಮ ಡೋಸ್ ಲಸಿಕೆಯನ್ನು ತೆಗೆದುಕೊಳ್ಳುವವರಿಗೆ ಪ್ರಥಮ, ಎರಡನೇ ಡೋಸ್ ತೆಗೆದುಕೊಳ್ಳುವವರಿಗೆ ಎರಡನೇ ಡೋಸ್ ನೀಡಲಾಗುತ್ತಿದೆ ಎಂದು ಡಾ.ಗೀರೀಶ್ ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಲಸಿಕೆಯನ್ನು ಪಡೆಯುವ ಬಗ್ಗೆ ಯಾರು ಸಹಾ ತಾತ್ಸಾರ ಮಾಡಬೇಡಿ, ಕರೋನಾದಿಂದ ಇದು ರಕ್ಷಣೆ ನೀಡುತ್ತದೆ ಆಪತ್ತಿನಿಂದ ದೂರ ಮಾಡುತ್ತದೆ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರವನ್ನು ಕಾಪಾಡುವುದು, ಸ್ಯಾನಿಟೇಜರ್ ಬಳಕೆ ಮಾಡುವುದರ ಮೂಲಕ ಕರೋನಾವನ್ನು ನಿಯಂತ್ರಣ ಮಾಡಬೇಕಿದೆ ಎಂದು ಹೇಳಿದರು.

ನಮ್ಮ ದೇಶದ ವಿಸ್ತರಣ ಚಿಕ್ಕದು ಆದರೆ ಜನಸಂಖ್ಯೆಯಲ್ಲಿ ಹೆಚ್ಚಳವಿದೆ. ಆದರೂ ಸಹಾ ಕೇಂದ್ರ ಸರ್ಕಾರದವತಿಯಿಂದ ಲಸಿಕೆಯನ್ನು ತಯಾರಿಸಲಾಯಿತು. ತದ ನಂತರ ಅದನ್ನು ಜನತೆಗೆ ನೀಡಲು ಸರ್ಕಾರಗಳು ಮುಂದಾದವು. ಆದರೆ ಬಹಳಷ್ಟು ಜನತೆ ಬೇರೆಯವರ ಮಾತನ್ನು ಕೇಳಿ ಲಸಿಕೆಯನ್ನು ಹಾಕಿಸಿಕೊಳ್ಳಲಿಲ್ಲ ಆದರೆ ಈ ಎರಡನೇ ಅಲೆಯಲ್ಲಿ ಜನತೆಗೆ ಜೀವದ ಭಯ ಹೆಚ್ಚಾಗಿ ಲಸಿಕೆಯನ್ನು ಪಡೆಯಲು ಮುಂದಾಗಿದ್ದಾರೆ. ಆದರೆ ಈಗ ಲಸಿಕೆಯನ್ನು ಪಡೆಯಲು ಸರದಿ ಸಾಲಿನಲ್ಲಿ ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಗಂಗಾಧರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇದೇ ರೀತಿ ನಗರದ ಸರ್ಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾ ಲಸಿಕೆ ಅಭೀಯಾನಕ್ಕೆ ಶಾಸಕ ತಿಪ್ಪಾರೆಡ್ಡಿ ಚಾಲನೆ ನೀಡಿದರು.

Leave a Reply

Your email address will not be published. Required fields are marked *

You may have missed