March 29, 2024

Chitradurga hoysala

Kannada news portal

*ದೇಶದಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯವಿದೆ :ಕೇಂದ್ರ ಸಚಿವ* (ಅವಶ್ಯಕತೆ ಇಲ್ಲದವರಿಗೆ ಮೀಸಲಾತಿ ಸಿಗಬಾರದು ಎಂದ ಕೇಂದ್ರ ಸಚಿವ ರಾಮದಾಸ್ ಅಠಾವಳೆ )

1 min read

*ದೇಶದಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯವಿದೆ :ಕೇಂದ್ರ ಸಚಿವ*

(ಅವಶ್ಯಕತೆ ಇಲ್ಲದವರಿಗೆ ಮೀಸಲಾತಿ ಸಿಗಬಾರದು ಎಂದ ಕೇಂದ್ರ ಸಚಿವ ರಾಮದಾಸ್ ಅಠಾವಳೆ )

ಬೆಂಗಳೂರು: ಜಾತಿಗಣತಿಯಿಂದ ಯಾವ ಜಾತಿಯವರು ಎಷ್ಟು ಇದ್ದಾರೆ ಎಂದು ಗೊತ್ತಾಗುತ್ತದೆ.ಆ ಮೂಲಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಚಾರದಲ್ಲಿ ಅನುಕೂಲ ಆಗುತ್ತದೆ ಹಾಗಾಗಿ ಜಾತಿಗಣತಿ ಅಗತ್ಯ ಎಂದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ.
ದೇಶದಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯ ಇದೆ, ಈ ಕುರಿತು ಕೇಂದ್ರ ಸರ್ಕಾರ ನಿಯಮ ರೂಪಿಸಬೇಕಾಗಿದೆ. ಮೀಸಲಾತಿ ಹೆಚ್ಚಳ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು. ಎಲ್ಲ ಸಮುದಾಯದಲ್ಲಿ ಬಡವರು, ಹಿಂದುಳಿದವರು ಇದ್ದಾರೆ,ಹಾಗಾಗಿ ಅವಶ್ಯಕತೆ ಇಲ್ಲದವರಿಗೆ ಮೀಸಲಾತಿ ಸಿಗಬಾರದು. ಯಾರಿಗೆ ಅಗತ್ಯ ದೇಶದಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಅಗತ್ಯ ಅವರಿಗೆ ಮನ್ನಣೆ ನೀಡಬೇಕು ಎಂದು ಭಾನುವಾರ ರಾಮದಾಸ್ ಅಠಾವಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್​ಸಿ, ಎಸ್​ಟಿಯಲ್ಲಿ ಉಳ್ಳವರು ಪ್ರಯೋಜನ ಪಡೀತಿದ್ದಾರೆ.ಆರ್ಥಿಕ ಹಿಂದುಳಿದವರಿಗೆ, ದುರ್ಬಲರಿಗೆ ಅನುಕೂಲವಾಗಬೇಕು. ಪ್ರಧಾನಿ ನರೇಂದ್ರ ಮೋದಿ ಬಳಿ ಈ ವಿಚಾರವಾಗಿ ನಾನು ಮನವಿ ಮಾಡಿದ್ದೇನೆ ಎಂದು ಅಠಾವಳೆ ಹೇಳಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಏಳು ವರ್ಷ ಪೂರೈಸಿರುವ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.

ಮೀಸಲಾತಿ ಪ್ರಮಾಣ ಶೇಕಡಾ 50 ಮೀರಬಾರದು ಅಂತ ಕೋರ್ಟ್ ಹೇಳಿದೆ. ಇದು ನ್ಯಾಯಾಲಯದ ಅಭಿಪ್ರಾಯ.ಆದರೆ ಮೀಸಲಾತಿ ಹೆಚ್ಚಿಸುವ ಅಗತ್ಯ ಇದೆ. ಈ ಕುರಿತು ಕೇಂದ್ರ ಸರ್ಕಾರ ನಿಯಮ ರೂಪಿಸಬೇಕಿದೆ. ರಾಜ್ಯಗಳಿಗೆ ಮೀಸಲಾತಿ ಕೊಡುವ ಅಧಿಕಾರ ಇದೆ. ಸಂವಿಧಾನದ 102 ವಿಧಿಯನ್ವಯ ರಾಜ್ಯಗಳಿಗೂ ಮೀಸಲಾತಿ ಹೆಚ್ಚಿಸುವ ಅಧಿಕಾರ ಇದೆ. ಮೀಸಲಾತಿ ಹೆಚ್ಚಳ ಸಂಬಂಧ ಸಂವಿಧಾನದ ತಿದ್ದುಪಡಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ .
ಕೆಲವು ಜಮೀನ್ದಾರರು, ಹಣವಂತರು ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ.ಆದರೆ ಎಲ್ಲಾ ಸಮುಧಾಯದಲ್ಲಿ ಬಡವಾರು ಹಿಂದುಳಿದವರು ಇದ್ದಾರೆ. ಹಾಗಾಗಿ ಅವಶ್ಯಕತೆ ಇಲ್ಲದವರಿಗೆ ಮೀಸಲಾತಿ ಸಿಗಬಾರದು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಮನ್ನಣೆ ನೀಡಬೇಕು ಎಂದು ಉಳ್ಳವರು ಮೀಸಲಾತಿ ಪಡೆಯುತ್ತಿರುವುದಕ್ಕೆ ಅಠಾವಳೆ ಆಕ್ಷೇಪ ವ್ಯಕ್ತಪಡಿಸಿದರು.

ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಅಡಿ ಸರ್ಕಾರದ ಕೆಲಸ ಸಾಗುತ್ತಿದೆ. ಜನ್‌ಧನ್ ಯೋಜನೆ, ಮುದ್ರಾ ಯೋಜನೆ ಯಶಸ್ವಿಯಾಗಿವೆ. ಇದರಿಂದ ಸರ್ಕಾರದ ಪ್ರಯೋಜನ ‌ಪಡೆಯಲು ಸಾಧ್ಯವಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿಕೆ ನೀಡಿದರು. ಮುದ್ರಾ ಯೋಜನೆಯಿಂದ ಯುವಕರಿಗೆ ಸಾಲ ಸಿಕ್ಕಿದೆ. ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದಾಗಿದೆ ಎಂದರು .

About The Author

Leave a Reply

Your email address will not be published. Required fields are marked *