Recent Posts

October 16, 2021

Chitradurga hoysala

Kannada news portal

ಜೈ ಭೀಮ್ ಕಾರ್ಯಕಾರಿ ಸಮಿತಿಯ ವತಿಯಿಂದ ನಗರದ ಒನಕೆ ಓಬವ್ವ ಕ್ರೀಡಾಂಗಣ ಆವರಣದಲ್ಲಿ ಕಾಂತ್ ರಾಜ್ ಗೆ ಸನ್ಮಾನಿಸಿ ಗೌರವಿಸಲಾಯಿತು

1 min read

ಜೈ ಭೀಮ್ ಕಾರ್ಯಕಾರಿ ಸಮಿತಿಯ ವತಿಯಿಂದ ನಗರದ ಒನಕೆ ಓಬವ್ವ ಕ್ರೀಡಾಂಗಣ ಆವರಣದಲ್ಲಿ ಕಾಂತ್ ರಾಜ್ ಗೆ ಸನ್ಮಾನಿಸಿ ಗೌರವಿಸಲಾಯಿತು

ಚಿತ್ರದುರ್ಗ: ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಕ್ಷಕದಳ ರಕ್ಷಣೆ ಹಾಗೂ ರಾಜ್ಯ ವಿಪತ್ತು ಸ್ವಂದನ ಪಡೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿಗಳ ಪದಕ ಪಡೆದ ಜಿಲ್ಲೆಯ ಹಾಲಿ ಹಿರಿಯ ಪ್ಲಟೂನ್ ಕಮಾಂಡರ್ ಮತ್ತು ಪ್ರಭಾರ ಘಟಕಾಧಿಕಾರಿಗಳಾಗಿ ಉತ್ತಮ ಸೇವೆ ನಿರ್ವಹಿಸುತ್ತಿರುವ ಸಿ ಎನ್. ಕಾಂತರಾಜ್ ಅವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರಿಂದ ಮುಖ್ಯಮಂತ್ರಿಗಳ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದರಿಂದ ಚಿತ್ರದುರ್ಗ ನಗರದ ಜೈ ಭೀಮ್ ಕಾರ್ಯಕಾರಿ ಸಮಿತಿಯ ವತಿಯಿಂದ ನಗರದ ಒನಕೆ ಓಬವ್ವ ಕ್ರೀಡಾಂಗಣ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಕಾಂತರಾಜ್ ನನಗೆ ಪ್ರಶಸ್ತಿ ಪಡೆದ ನಂತರ ಮತ್ತೆ ಬಹಳ ಜವಾಬ್ದಾರಿ ಹೆಚ್ಚಾಗಿದೆ ಮುಂದಿನ ದಿನದಲ್ಲಿ ಇನ್ನೂ ಉತ್ತಮ ಸೇವೆ ಮಾಡುತ್ತೇನೆ ನನಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದಗಳು ಹಾಗೂ ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಹೋಂ ಗಾರ್ಡ್ ಸಿಬ್ಬಂದಿ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು
ಕಾರ್ಯಕ್ರಮ ದಲ್ಲಿ ಜೈ ಭೀಮ್ ಕಾರ್ಯಕಾರಿ ಸಮಿತಿಯ ತಮ್ಮಣ್ಣ, ಯಲ್ಲಪ್ಪ ಯುವ ಮುಖಂಡ ಚಂದ್ರಶೇಖರ್, ಮುರುಗನ್, ನಿಂಗಣ್ಣ, ಮಲ್ಲೇಶ್ ಜಾನಪದ ಕಲಾವಿದ ಶ್ರೀನಿವಾಸ್, ರಮೇಶ್, ಲೋಕೇಶ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ ಶ್ರೀ ಕುಮಾರ್ ಹಾಗು ಬುಧ್ದನಗರ ಅಂಭೇಡ್ಕರ್ ಬೀದಿಯ ಜನರು ಉಪಸ್ಥರಿದ್ದರು.

Leave a Reply

Your email address will not be published. Required fields are marked *

You may have missed