April 25, 2024

Chitradurga hoysala

Kannada news portal

ಬುದ್ಧ,ಕಬೀರ,ಫುಲೆ ನನ್ನ ಗುರುಗಳು*

1 min read

*ಬುದ್ಧ,ಕಬೀರ,ಫುಲೆ ನನ್ನ ಗುರುಗಳು*
 *ಬುದ್ಧ,ಕಬೀರ,ಫುಲೆ ನನ್ನ ಗುರುಗಳು* 
ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ 60 ವರ್ಷಗಳು ತುಂಬಿದ ನಂತರ ದಿನಾಂಕ 28-10-1954 ರಂದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಮುಂಬೈನ ಪುರಂದರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದರು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಹಾಗೂ ಜನತೆಯನ್ನುದ್ದೇಶಿಸಿ ಮಾಡಿದ ಭಾಷಣದ ಆಯ್ದಭಾಗ:

*ನನ್ನ ಜೀವನದಲ್ಲಿ ಎಂತಹ ಮಹತ್ವದ ಬದಲಾವಣೆಯಾಗಿದೆಯೆಂಬುದನ್ನು ತಾವು ಊಹಿಸಬಹುದು ಹೆಚ್ಚೆಂದರೆ ನಾನೊಬ್ಬ ಕುರಿಕಾಯುವವನಾಗಬೇಕಾಗಿತ್ತು, ದನಕಾಯುವವನಾಗಬೇಕಾಗಿತ್ತು ಅಥವಾ ಗದ್ದೆಗಳಲ್ಲಿ ಕಷ್ಟಪಡುವ ಕೂಲಿಯಾಗಿರಬೇಕಾಗಿತ್ತು ಆಗ ನಾನು ನನ್ನ ಇಂದಿನ ಸ್ಥಿತಿಯನ್ನು ತಲುಪುತ್ತಿರಲಿಲ್ಲ.ಹಗುರಾದ ಕೆಲಸ ಕಲಿತುಕೂಳ್ಳಲು ನನ್ನ ತಂದೆ ನನಗೆ ಸದಾ ಹೇಳುತ್ತಿದ್ದರು.*

*ನನ್ನ ಬಾಲ್ಯದಲ್ಲಿ ನನ್ನ ಜೀವನ ಸಾಗಿದ್ದು ನೆನಪಿಸಿಕೂಂಡರೆ ಅತೀ ಹೆಚ್ಚೆಂದರೆ ನಾನೊಬ್ಬ ಗುಣಸಂಪನ್ನ ಮನುಷ್ಯನಾಗಬಹುದಿತ್ತು ಆದರೆ ನನ್ನಲ್ಲಿ ನನ್ನದೇ ಆದ ಸಹಜ ಪ್ರವೃತ್ತಿಗಳಿದ್ದವು ನನ್ನ ಜೀವನದ ಪಥ ಬದಲಾಗಲು ಕಾರಣಗಳೇನು.? ಮತ್ತು ಹೇಗೆ.? ಎಂಬುದಕ್ಕೆ ನಾನು ಈಗ ನಿಮಗೆ ಹೇಳಬಯಸುತ್ತೇನೆ*.

ಎಲ್ಲರಿಗೂ ಒಬ್ಬ ಗುರು ಇದ್ದರೆ, ನನಗೆ ಮೂರು ಗುರುಗಳಿದ್ದಾರೆ.ನನ್ನ ಸರ್ವೋಚ್ಛ ಗುರು *ಬುದ್ಧ* ನನ್ನ ತಂದೆ *ಕಬೀರ* ಪಂಥದ ಆರಾಧಕ. ನನ್ನ 12-13 ವರುಷ ವಯಸ್ಸಿನಲ್ಲಿ ನನಗೆ ನೆನಪಿರುವ ಹಾಗೆ ನನ್ನ ತಂದೆಯ ಮನೆ ಧರ್ಮದ ಕೇಂದ್ರವಾಗಿತ್ತು ಹಾಗೇನೆ ಶಿಕ್ಷಣದ ಕೇಂದ್ರವೂ ಆಗಿತ್ತೆಂದು ಹೇಳಬಹುದು.ನನ್ನ ‌ಬಾಲ್ಯದಲ್ಲೇ ಅವರು ನನ್ನನ್ನು ರಾಮಾಯಣ ಮಹಾಭಾರತ ಮತ್ತು ಇತರೇ ಧರ್ಮ ಗ್ರಂಥಗಳನ್ನು ಓದಲು ಹೇಳುತ್ತಿದ್ದರು. ಇವುಗಳ ಓದಿನಿಂದ ನನ್ನ ಮನಸ್ಸಿನ ಮೇಲೆ ಅವುಗಳದೇ ಆದ ಪ್ರಭಾವಗಳುಂಟಾಗಿತ್ತು.

*ನಾವು ಬಡವರು ಆದರೆ ಅಂಜಬಾರದು* *ನೀನು ಯಾಕೆ ವಿದ್ಯಾವಂತನಾಗಬಾರದು..?* ಎಂದು ನನ್ನ ತಂದೆ ನನಗೆ ಹೇಳುತ್ತಿದ್ದರು.ನಾನು ನನ್ನ ಮೆಟ್ರಿಕ್ಯೂಲೇಷನ್ ಪರೀಕ್ಷೆ ಪಾಸಾದೆ. ಆಗ ಸಮಾರಂಭವೊಂದರಲ್ಲಿ *ದಾದಾ ಸಾಹೇಬ್ ಕೇಳೂಸ್ಕರ್* ಅವರು *ಬುದ್ಧನ ಜೀವನ ಚರಿತ್ರೆಯ* ಪುಸ್ತಕವನ್ನು ನನಗೆ ಬಹುಮಾನ ನೀಡಿದರು. *ಆ ಪುಸ್ತಕ ಓದಿದಮೇಲೆ ನನಗೆ ಹೊಸಜ್ಞಾನ ದೊರೆಯಿತು ರಾಮಾಯಣ ಮಹಾಭಾರತ ಅದು ಯಾವುದೂ ನನ್ನ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಆದರೆ ಆ ಬುದ್ಧನ ಪುಸ್ತಕ ಓದಿದ ಮೇಲೆ ಇನ್ನಷ್ಟು ಬುದ್ಧನ ಕುರಿತು ಓದಬೇಕೆನ್ನಿಸಿತು.ಬೌದ್ಧ ಧಮ್ಮ ನನ್ನ ಮನಸ್ಸಿನ ಮೇಲೆ ಅಚ್ಚೋತ್ತಿದಂತಿದೆ. ವಿಶ್ವದ ವಿಮೋಚನೆಗೆ ಬೌದ್ಧ ಧಮ್ಮದಿಂದ ಮಾತ್ರ ಸಾಧ್ಯವೆಂದು ನಾನು ಬಲವಾಗಿ ನಂಬಿದ್ದೇನೆ. ಹಿಂದೂಗಳೂ ತಮ್ಮ ರಾಷ್ಟ್ರ ಬದುಕುಳಿಯಬೇಕೆಂದು ಬಯಸಿದ್ದರೆ ಬುದ್ಧನ ಮಾರ್ಗವನ್ನು ಅವರು ಅನುಕರಿಸಲೇಬೇಕು ಇದನ್ನು ಅವರಿಗೆ ಸದಾ ಹೇಳುತ್ತಲೇ ಇದ್ದೇನೆ*

*ನನ್ನ ಎರಡನೇ ಗುರು ಕಬೀರ* ನನ್ನ ತಂದೆ ಕಬೀರರ ಅನುಯಾಯಿ ಆದ್ದರಿಂದ ನನ್ನ ಜೀವನದ ಮೇಲೆ *ಕಬೀರರ ದೋಹೆ* ಗಳು ಗಾಢವಾದ ಪ್ರಭಾವ ಬೀರಿವೆ.ನನ್ನ ನಿಜ ಅಭಿಪ್ರಾಯದಲ್ಲಿ ಕಬೀರರು ಬುದ್ಧನ ಸಿದ್ದಾಂತಗಳ ಒಳತಿರುಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ನಾನು ಯಾರನ್ನೂ ದೊಡ್ಡವರೆಂದು ಗೌರವಿಸಿಲ್ಲ ಗಾಂಧಿಯವರಿಗೆ ನಾನು ಎಂದೂ ‘ಮಹಾತ್ಮ’ನೆಂದು ಹೇಳಿಲ್ಲ ಯಾಕೆಂದರೆ ಕಬೀರರು ಒಂದು ಪದ್ಯದಲ್ಲೇ ಹೇಳುತ್ತಾರೆ *ಮನುಷ್ಯತ್ವವನ್ನು ತಲುಪುವುದೇ ಕಠಿಣವಾಗಿರುವಾಗ ಮಹಾತ್ಮನಾಗುವುದು ಅದು ಹೇಗೆ ಸಾಧ್ಯ..?* ಎಂದು.

*ನನ್ನ ಮೂರನೇ ಗುರು ‘ಜ್ಯೋತಿಬಾ ಫುಲೆ* ಇವರು ನಿಜವಾಗಿಯೂ ಎಲ್ಲಾ ಶೋಷಿತ ಜನಾಂಗಕ್ಕೆ ಮಾನವತೆಯ ಪಾಠ ಹೇಳಿಕೊಟ್ಟರು ಇವರು ತೋರಿದ ದಾರಿಯಲ್ಲಿ ನಾವು ನಡೆಯೋಣ.

ನನಗೆ ಮೂರು ದೇವತೆಗಳು *ಒಂದು-‘ಜ್ಞಾನ*’ ಜ್ಞಾನವಿಲ್ಲದೆ ಶಾಂತಿ ಮತ್ತು ಅಂತಸ್ತುಗಳನ್ನು ಮನುಕುಲ ಪಡೆಯಲಾರದು ಜ್ಙಾನ ಎಲ್ಲರಿಗೂ ದೊರೆಯುವಂತಾಗಬೇಕು ಇದು ಸಮುದ್ರವಿದ್ದಂತೆ, ಬೌದ್ಧ ಧಮ್ಮ ಪವಿತ್ರವೆಂದು ಬುದ್ದದೇವ ಹೇಳಿದ್ದಾನೆ ಅದರಲ್ಲಿ ಭೇಧಭಾವಗಳಿಲ್ಲ.

*ಎರಡನೆಯದು – ‘ಸ್ವಾಭಿಮಾನ’* ನಾನು ಯಾರಲ್ಲೂ ಭಿಕ್ಷೆ ಬೇಡಿಲ್ಲ, ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳಬೇಕೆಂಬುದು ನನ್ನ ಗುರಿ.
ನನ್ನ ಜನಗಳ ಬದುಕನ್ನೂ ನಾನೇ ರೂಪಿಸಬೇಕು.
ಡಾ.ಪರಾಂಜಪೆಯವರ ಒತ್ತಾಯದ ಮೇರೆಗೆ ನಾನು ಕಾಲೇಜಿನಲ್ಲಿ ಅರ್ಥಶಾಸ್ತ್ರ ಬೋಧಿಸಲು ಸಾಧ್ಯವಾಯಿತು.

*ಮೂರನೇಯ ದೇವತೆ-‘ಶೀಲ*’ ನನ್ನ ಸ್ವಾರ್ಥಕ್ಕಾಗಿ ನಾನು ಎಂದೂ ಕಳ್ಳತನ ಮಾಡಲಿಲ್ಲ,ಮೋಸ ಮಾಡಲಿಲ್ಲ,ಪಾಪೆವೆಸಗಲಿಲ್ಲ.ನನಗೆ ನೆನಪಿರುವಂತೆ ಇಂತಹ ಕೆಟ್ಟ ಕೆಲಸಗಳನ್ನು ನಾನು ಎಂದೂ ಮಾಡಲೇ ಇಲ್ಲ,ದುಶ್ಚಟಗಳಿಗೂ ಬಲಿಯಾಗಲಿಲ್ಲ.
ಈ ಮೂರು ನನ್ನ ದೇವತೆಗಳು.

1919 ರಿಂದ ಗಾಂಧಿಯವರ ರಾಜಕೀಯ ಪ್ರವೇಶ ದಿನದಿಂದಲೂ ನಾನು ರಾಜಕೀಯ ಕ್ಷೇತ್ರದಲ್ಲಿ ಇದ್ದೇನೆ ಆದರೂ ಅವರೊಡನೆ ನನಗೆ ಹೊಂದಾಣಿಕೆ ಆಗಲಿಲ್ಲ.
ನಾವು ಸಾಕಷ್ಟು ಚಳವಳಿಗಳನ್ನು ಮಾಡಿದ್ದೇವೆ ಅದೊಂದು ಮಹಾಡ್ ನೀರು ಸತ್ಯಾಗ್ರಹ ಆಗಿರಬಹುದು ದೇವಾಲಯ ಪ್ರವೇಶ ಚಳವಳಿ ಆಗಿರಬಹುದು.ಆದರೆ ಯಾರೂ ನಮ್ಮ ಮೇಲೆ ಕರುಣೆ ತೋರಿಸಲಿಲ್ಲ ಸುದ್ದಿ ಪತ್ರಿಕೆಗಳು ನಮ್ಮ ಮೇಲೆ ವ್ಯಂಗಚಿತ್ರಗಳನ್ನು ಪ್ರಕಟಿಸಿದವು ಯಾವ ವರದಿಗಾರನೂ ನಮ್ಮ ಬಳಿಗೆ ಬರುತ್ತಿರಲಿಲ್ಲ ನಾನು 1919ರಿಂದ 1942 ರವರೆಗೆ ‘ಬಹಿಷ್ಕೃತ ಭಾರತ’ ಪತ್ರಿಕೆಯ ಸಂಪಾದಕನಾಗಿದ್ದೆ.ಪೂನಾದಿಂದ ಪ್ರಕಟವಾಗುತ್ತಿದ್ದ ಬಾಲಗಂಗಾಧರ ತಿಲಕರ ದಿನಪತ್ರಿಕೆ ‘ಕೇಸರಿ’ಗೆ ನಾನೊಂದು ಜಾಹೀರಾತು ಕಳುಹಿಸಿದ್ದೆ ಮೂರು ರೂಪಾಯಿ ಬಿಲ್ಲೊಂದನ್ನು ಅದಕ್ಕೆ ಲಗತ್ತಿಸಿದೆ ಆದರೆ ಅದನ್ನು ತಿರಸ್ಕರಿಸಿದರು. ನಾನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಫೋನ್ ಮಾಡಿದೆ. ಎಲ್ಲಿಂದ ಬಂದರು ಈ ಭಿಕ್ಷುಕರು..! ಎಂದು ಅವರು ಗೊಣಗಿದರು.ಅವರು ನನ್ನ ಜಾಹೀರಾತನ್ನು ಪ್ರಕಟಿಸಲೇ ಇಲ್ಲ. ಆದರೆ ಇಂದು ನನ್ನದೊಂದು ಹೇಳಿಕೆಯನ್ನು ಪಡೆಯಲು ವರದಿಗಾರರು ನನ್ನನ್ನು ಮುತ್ತಿಕೊಳ್ಳುತ್ತಿದ್ದಾರೆ ಇದು ಇಂದಿನ ಪರಿಸ್ಥಿತಿ.ನಮ್ಮ ಚಳುವಳಿ ಇಷ್ಟೊಂದು ಪ್ರಾಮುಖ್ಯತೆಯನ್ನು ಗಳಿಸಿದ ಮೇಲೆ ನಾನು ದಲಿತರಿಗೆ ಚಿರುಋಣಿಯಾಗಿದ್ದೇನೆ.
ದಲಿತರ ಬೆಂಬಲದಿಂದ ಇಷ್ಟನ್ನು ನಾನು ಸಾಧಿಸಲು ಸಾಧ್ಯವಾಯಿತು.

ನನ್ನ ಮೂವತ್ತು ವರುಷಗಳ ಅನುಭವ ದಲಿತರು ಹೋರಾಟದ ವೀರರು ಇವರು ಹೋರಾಟ ಮಾಡಬಲ್ಲರು,ತ್ಯಾಗ ಮಾಡಬಲ್ಲರು. ಬೇರೆ ಯಾವುದೇ ಜನಾಂಗ ಅದನ್ನು ಮಾಡಲು ಸಾಧ್ಯವಿಲ್ಲ.ಆದ್ದರಿಂದ ನನ್ನ ದೃಷ್ಟಿಯಲ್ಲಿ ನಾನು ಅವರ ಋಣ ತೀರಿಸಬೇಕಾಗಿದೆ ಕೆಲವೊಬ್ಬರು ನನ್ನನ್ನು ಜಾತೀವಾದಿಯೆಂದು ಕರೆಯಬಹುದು ಆದರೆ *ನಾನು ಹುಟ್ಟಿದ ಜಾತಿಯ ಬಗ್ಗೆ ನನ್ನಲ್ಲಿ ಅತ್ಯಂತ ಅಭಿಮಾನವಿದೆ…*

-ಬಿ. ಆರ್. ಅಂಬೇಡ್ಕರ್

ಸಂಗ್ರಹ – 

About The Author

Leave a Reply

Your email address will not be published. Required fields are marked *