Recent Posts

October 17, 2021

Chitradurga hoysala

Kannada news portal

ಮಾನವೀಯತೆ ಮೆರೆದ ಸೈಯದ್ ಯಾಹಿಯಾ ಅವರ ಸೇವೆ ಶ್ಲಾಘನೀಯ: ಎಂ.ಹನೀಫ್ ಕೋಟೆ

1 min read

ಮಾನವೀಯತೆ ಮೆರೆದ ಆಟೋ ಡ್ರೈವರ್ ಸೈಯದ್ ಯಾಹಿಯಾ ಅವರಿಗೆ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಸನ್ಮಾನ
ಮಾನವೀಯತೆ ಮೆರೆದ ಸೈಯದ್ ಯಾಹಿಯಾ ಅವರ ಸೇವೆ ಶ್ಲಾಘನೀಯ: ಎಂ.ಹನೀಫ್ ಕೋಟೆ

ಚಿತ್ರದುರ್ಗ: ಪ್ರಸ್ತುತ ಸಮಾಜದಲ್ಲಿ ಹಣದ ಹಪಾಹಪಿಯಲ್ಲಿ ತೊಡಗಿರುವ ಪರಿಸ್ಥಿತಿಯಲ್ಲಿ ಸುಮಾರು ೨ ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಸೈಯದ್ ಯಾಹಿಯಾ ಅವರ ಸೇವೆ ಶ್ಲಾಘನೀಯ ಎಂದು ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಕೋಟೆ ತಿಳಿಸಿದರು.
ನಗರದ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಜಿಲ್ಲಾ ಕಛೇರಿಯಲ್ಲಿ ಸೈಯದ್ ಯಾಹಿಯಾ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲಿ ಆಟೋ ಚಾಲಕರ ಬದುಕು ತುಂಬಾ ಚಿಂತಾಜನಕವಾಗಿತ್ತು. ಬಹುಮುಖ್ಯವಾಗಿ ಆರ್ಥಿಕತೆಯಿಂದ ಬಳಲುವಂತಾಗಿದ್ದರು. ಇಂತಹ ಸಂದರ್ಭದಲ್ಲೂ ಪರರ ಸ್ವತ್ತು ನಮ್ಮದಲ್ಲ ಎಂದು ಮನಗೊಂಡು ವೆನಿಟಿ ಬ್ಯಾಗ್ ಹಾಗು ಅದರಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಒಡವೆ ಹಾಗು ಹಣವನ್ನು ಹಿಂದಿರುಗಿಸಿದ ಆಟೋ ಚಾಲಕ ಸೈಯದ್ ಯಾಹಿಯಾ ಅವರ ಆದರ್ಶ ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಫೈರೋಜ್ ಖಾನ್, ಗೌರವಾಧ್ಯಕ್ಷರಾದ ಟಿ.ಶಫಿವುಲ್ಲಾ, ಜಾನಪದ ಹಾಡುಗಾರ ಎಚ್. ಪ್ಯಾರೆಜಾನ್ ಹಾಗು ಮಹಮ್ಮದ್ ಆಸಿಫ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed