April 25, 2024

Chitradurga hoysala

Kannada news portal

ಭೋವಿ ಸಮಾಜ ಬಲಾಢ್ಯವಾಗಲು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಕೊಡಿಗೆ ಅಪಾರ. ಚಂದ್ರಪ್ಪ

1 min read

ಭೋವಿ ಸಮಾಜ ಬಲಾಢ್ಯವಾಗಲು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಕೊಡಿಗೆ ಅಪಾರ. ಚಂದ್ರಪ್ಪ


ಭೋವಿ ಸಮಾಜ ಬಲಾಢ್ಯವಾಗಲು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಕೊಡಿಗೆ ಅಪಾರವೆಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಹಾಗೂ ಹೊಳಲ್ಕೆರೆ ಶಾಸಕರಾದ ಎಂ. ಚಂದ್ರಪ್ಪರವರು ತಿಳಿಸಿದರು.
ನಗರದ ಭೋವಿ ಗುರುಪೀಠದಲ್ಲಿ ಭಾನುವಾರ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ೩೬ನೇ ವಸಂತೋತ್ಸವ ೨೨ನೇ ಸಮಾಜ ಸೇವಾ ದೀಕ್ಷೆ ೧೧ನೇ ಪಟ್ಟಾಧಿಕಾರದ ಅಂಗವಾಗಿ ಹಮ್ಮಿಕೊಂಡಿದ್ದ ಭೋವಿ ಜನೋತ್ಸವದಲ್ಲಿ ಮಾನತಾಡಿದ ಅವರು, ಸಮುದಾಯದವರೆಲ್ಲರೂ ಒಂದೇಡೆ ಶ್ರೀಗಳಿಂದ ಸೇರುವಂತಾಗಿದೆ.

ಸಮಾಜ ಅಭಿವೃದ್ಧಿಯ ಕಡೆ ಸಾಗುತ್ತಿದ್ದೆ. ಬಿಡಿ ಬಿಡಿಯಾಗಿರುವ ಸಮುದಾಯ ಶಕ್ತಿಯಾಗಿ ಬೆಳೆಯಲು ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ದೇಶದಲ್ಲಿ, ರಾಜ್ಯದಲ್ಲಿ ಜನಾಂಗದ ಅಭಿವೃದ್ಧಿ ಬಹಳ ಮುಖ್ಯವಾಗಿದೆ. ಆ ಅಭಿವೃದ್ಧಿಯನ್ನು ಸ್ವಾಮೀಜಿಯವರ ಮೂಲಕ ಹೆಚ್ಚಳ ಆಗಬೇಕಾಗಿದೆ. ಎಲ್ಲಾರು ಒಟ್ಟಾಗಿ ಶ್ರೀಗಳ ಜೊತೆ ನಡೆದರೆ ಯಶಸ್ವಿ ಸಾಧ್ಯ. ದೇಶದ ಅಭಿವೃದ್ಧಿ ಜನರ ಅಭಿವೃದ್ಧಿಯಲ್ಲಿದೆ. ಆ ದೆಸೆಯಲ್ಲಿ ಅಭಿವೃದ್ಧಿ ಕಡೆ ಸಾಗುವಂತಹ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಮಾನಪ್ಪ ವಜ್ಜಲ್ ಮಾತನಾಡಿ, ಭೋವಿ ಜನೋತ್ಸವ ಭೋವಿ ಜನಾಂಗದ ಹಬ್ಬ, ಶ್ರೀಗಳು ಕೊರೋನಾ ಕಾಲದಲ್ಲಿ ಮಾಡಿದ ದಾನ, ಧರ್ಮ ಸ್ಮರಣಿಯವಾದದ್ದು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಶ್ರೀಗಳ ಮಾಡಿರುವ ಕಾರ್ಯಗಳು ಸಮಾಜದ ಮುನ್ನೆಡೆಗೆ ಸಾಕ್ಷಿಕರಿಸುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಬಸವಾದಿ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ದೇಶದೆಲ್ಲೇಡೆ ಶ್ರೀಗಳು ಮಾಡುತ್ತಿರುವ ಪ್ರಚಾರ, ಸಮಾನತೆ, ಸಂಸ್ಕೃತಿ ಹೆಚ್ಚಿಸಿದಂತೆ ಸ್ವಾಮೀಜಿಗಳು ನೂರಾರು ವರ್ಷ ಬಾಳಿ ಸಮಾಜದ ಶಕ್ತಿಯನ್ನು ಎತ್ತರದ ಮಟ್ಟಕ್ಕೆ ಕೊಂಡೋಯ್ಯಲಿ ಎಂದರು.
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಭೋವಿ ಜನಾಂಗ ರಸ್ತೆ, ಕಟ್ಟಡ, ಕೂಲಿಗಾಗಿ ಊರುರು ತಿರುಗುವ ಅರೆ ಅಲೆಮಾರಿಗಳಾಗಿದ್ದಾರೆ. ಈ ಸಮುದಾಯಕ್ಕೆ ಶಿಕ್ಷಣ ದೊಡ್ಡ ಅಸ್ತçವಾಗಬೇಕು. ಮಕ್ಕಳಿಗೆ ಏನಾದರು ಕೊಡಬೇಕೆಂದರೆ ಅದು ಶಿಕ್ಷಣ ಎಂಬುವ ಮಟ್ಟಕ್ಕೆ ಪ್ರೇರಣೆಯನ್ನು ಹೊಂದಬೇಕು. ಶ್ರಮಿಕ ಸಮಾಜ ಶಿಕ್ಷಣ ಪಡೆಯುವ ಸಾಧನೆ ಮಾಡಿದರೆ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದರು. ಶಿಕ್ಷಣ ಪಡೆದವರು ಸರ್ಕಾರಿ ಉದ್ಯೋಗದ ಕಡೆ ಮುಖ ಮಾಡಬಾರದು. ಸ್ವ-ಉದ್ಯೋಗದ ಕಡೆ ಗಮನ ಹರಿಸಿದರೆ ಔದ್ಯೋಗಿಕ ಕ್ರಾಂತಿ ಮಾಡಬಹುದು. ವಿದ್ಯೆ ಪಡೆದ ಉದ್ಯೋಗ ಹರಿಸುವ ಬದಲು ಉದ್ಯೋಗ ಸೃಷ್ಠಿಸಬೇಕು ಆಗ ಮಾತ್ರ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಹೇಳಿದಂತೆ ರಾಜಕೀಯ, ಶೈಕ್ಷಣಿಕ, ಸಮಾಜಿಕ ಸಮಾನತೆಗೆ ಶಿಕ್ಷಣವೇ ಮದ್ದು ಎಂದರು.
ಕಂದಾಚಾರ, ಮೂಢನಂಬಿಕೆ ಬಿಟ್ಟು ವೈಚಾರಿಕ ಧರ್ಮ ಪಾಲಿಸಬೇಕು. ಯಾರು ವೈಚಾರಿಕ ಧರ್ಮ ಪಾಲಿಸುತ್ತಾರೋ ಅವರು ರಾಷ್ಟç ಆಳಲಿಕೆ ಸಾಧ್ಯ, ರಾಷ್ಟç ಆಳಲು ಜ್ಞಾನ-ವಿಜ್ಞಾನ, ವೈಚಾರಿಕತೆ ಬಹಳ ಮುಖ್ಯವಾಗಿದೆ. ಪ್ರತಿಷ್ಠೆ-ಸ್ವ ಪ್ರತಿಷ್ಠೆ ಬಿಟ್ಟು ಸಂಘಟಿಸಿದರೆ ಮಾತ್ರ ಸಂಘಟನೆ ಮತ್ತು ಸೌಹಾರ್ದ ವಾತವರಣ ನಿರ್ಮಾಣ ಮಾಡಲು ಮತ್ತು ಸದೃಢ ಸಮಾಜ ಕಟ್ಟಬಹುದು ಎಂದು ಹೇಳಿದರು.
ಈ ಸಮಾರಾಂಭದಲ್ಲಿ
OCCI ರಾಷ್ಟ್ರೀಯ ಅಧ್ಯಕ್ಷ ರವಿ ಮಾಕಳಿ, ರಾಜ್ಯ ಅಧ್ಯಕ್ಷ ಆನಂದಪ್ಪ,
ಜಿಲ್ಲಾ ಸರ್ಕಾರ ನೌಕರ ಸಂಘದ ಅಧ್ಯಕ್ಷ ಕೆ.ಮಂಜುನಾಥ್,  ಜಿಲ್ಲಾ ಭೋವಿ ಸಂಘದ ಕಾರ್ಯರ್ಶಿ ಲಕ್ಷö್ಮಣ, ಮಂಜುನಾಥ್, ಕೃಷ್ಣಮೂರ್ತಿ, ಚಂದ್ರಶೇಖರ್, ಡಿ.ಸಿ ಮೊಹನ್, ನಗರ ಸಭೆ ನಾಮ ನಿರ್ದೇಶಕನ ಸದಸ್ಯ ತಿಮ್ಮಣ್ಣ, ಮುಖಂಡ ಹನುಮಂತಪ್ಪ ಮತ್ತಿತ್ತರರು ಭಾಗವಹಿಸಿದ್ದರು.
ಶಾಂತವೀರ ಸ್ವಾಮೀಜಿ, ಬಸವಮೂರ್ತಿ ಮದಾರ ಚೆನ್ನಯ್ಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಯಾದವಾನಂದ ಸ್ವಾಮೀಜಿ, ಬಸವ ಪ್ರಭು ಸ್ವಾಮೀಜಿ, ಕೊರಟಿಗೆರೆ ಮಹಾಲಿಂಗ ಸ್ವಾಮೀಜಿ, ಶಿರಸಿ ಮಲ್ಲಿಕಾರ್ಜುನ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಕಿರಣ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಮಡಿವಾಳ ಮಾಚಿ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *