ಮಳೆ ವರದಿ: ಮಾಡದಕೆರೆ 72 ಮಿ.ಮೀ ಮಳೆ
1 min readಮಳೆ ವರದಿ: ಮಾಡದಕೆರೆ 72 ಮಿ.ಮೀ ಮಳೆ
ಚಿತ್ರದುರ್ಗ,ಜುಲೈ18:
ಚಿತ್ರದುರ್ಗ ಜಿಲ್ಲೆಯಲ್ಲಿ ಜುಲೈ 18 ರಂದು ಬಿದ್ದ ಮಳೆಯ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 72 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 43.2, ಬಾಗೂರು 7, ಮತ್ತೋಡು 5.2, ಶ್ರೀರಾಂಪುರ 15.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ58.2, ಚಿತ್ರದುರ್ಗ-2ರಲ್ಲಿ 55, ಹಿರೇಗುಂಟನೂರು 3, ಭರಮಸಾಗರ 34.2, ಸಿರಿಗೆರೆ 42, ಐನಹಳ್ಳಿ 66.2, ತುರುವನೂರಿನಲ್ಲಿ 58.8 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 22.4, ಬಬ್ಬೂರು 17.4, ಇಕ್ಕನೂರು 19.6, ಈಶ್ವರಗೆರೆ 36.8, ಸುಗೂರಿನಲ್ಲಿ 12 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 11.3, ರಾಯಾಪುರ 20.3, ದೇವಸಮುದ್ರದಲ್ಲಿ 2.3 ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 17, ಪರಶುರಾಂಪುರ 20, ತಳಕು 36.2, ನಾಯಕನಹಟ್ಟಿ 44.8, ದೇವರಮರಿಕುಂಟೆ 22.3 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 52.2, ರಾಮಗಿರಿ 38.4, ಚಿಕ್ಕಜಾಜೂರು 48.2, ಬಿ.ದುರ್ಗ 36, ಹೆಚ್.ಡಿ.ಪುರ 64, ತಾಳ್ಯ 6.2 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ 26 ಮನೆಗಳಿಗೆ ಹಾನಿ, 3 ಎಕರೆ ಬೆಳೆ ನಾಶ: ಮಳೆಯಿಂದಾಗಿ ಚಿತ್ರದುರ್ಗದಲ್ಲಿ 5 ಮನೆ, ಚಳ್ಳಕೆರೆ 6 ಮನೆ, ಹಿರಿಯೂರು-1, ಹೊಳಲ್ಕೆರೆ-6, ಹೊಸದುರ್ಗ-6 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 26 ಮನೆಗಳಿಗೆ ಹಾನಿಯಾಗಿದ್ದು, ಚಳ್ಳಕೆರೆ ತಾಲ್ಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ 3 ಎಕರೆ ಬೆಳೆ ನಾಶವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.