ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರ ಭೇಟಿ ಮಾಡಿದ ಶಾಸಕರ ಮತ್ತು ಸಂಸದರ ನಿಯೋಗ.
1 min readಬೆಂಗಳೂರು ;ಇಂದು ಬೆಂಗಳೂರಿನ ಕುಮಾರಕೃಪಾ ನ್ಯೂ ಗೆಸ್ಟ್ ಹೌಸ್ ನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಯವರ ನೇತೃತ್ವದಲ್ಲಿ ಸಮುದಾಯದ ಸಚಿವರು, ಸಂಸದರು, ಹಾಗೂ ಶಾಸಕರ ಸಭೆ ಕರೆಯಲಾಗಿತ್ತು….
ಸಭೆಯಲ್ಲಿ 7.5% ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಸಚಿವರಿಗೆ ಮತ್ತು ಪಕ್ಷದ ಶಾಸಕರಿಗೆ ಜವಾಬ್ದಾರಿ ನೀಡಲಾಯಿತು. ಹಾಗೂ ಪ್ರತ್ಯೇಕ ಸಚಿವಾಲಯ ರಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವುದು… ಮತ್ತು ತಳವಾರ ಮತ್ತು ಪರಿವಾರ ವಿಷಯ ಗಂಭೀರವಾಗಿ ಚರ್ಚಿಸಿ ತೀರ್ಮಾನಿಸಲಾಯಿತು…. ಸಭೆಯಲ್ಲಿ ಸಚಿವರಾದ ಶ್ರೀರಾಮುಲು, ರಮೇಶ್ ಜಾರಕಿಹೊಳಿ ಮಾಜಿ ಸಚಿವರಾದ ಶಾಸಕರಾದ ಸತೀಶ್ ಜಾರಕಿಹೊಳಿ ಸಂಸದರಾದ ದೇವೇಂದ್ರಪ್ಪ, ಸುರಪುರ ಶಾಸಕರಾದ ರಾಜೂಗೌಡ, ಶಿವನಗೌಡ ನಾಯಕ್, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಶಾಸಕರಾದ ಬಸವನ ಗೌಡ ದದ್ದಲ್, ಕಂಪ್ಲಿ ಶಾಸಕ ಗಣೇಶ್, ಸಂಡೂರು ಶಾಸಕರಾದ ತುಕಾರಾಂ, ಸಿರಗುಪ್ಪ ಶಾಸಕರಾದ ಸೋಮಲಿಂಗಪ್ಪ, ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಎಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪನಾಯಕ, ಕೂಡ್ಲಿಗಿ ಶಾಸಕರಾದ ಎನ್ ವೈ ಗೋಪಾಲಕೃಷ್ಣ, ನಿವೃತ್ತ ಕೆ.ಪಿ.ಎಸ್.ಸಿ ನಿರ್ದೇಶಕರು ಜಿ. ಟಿ. ಚಂದ್ರಶೇಖರಪ್ಪ ಹಾಗೂ ಕ.ವಾ.ನಾ.ಮಹಾಸಭಾ (ರಿ) ರಾಜ್ಯಾಧ್ಯಕ್ಷರಾದ ಸಿರಿಗೆರೆ ತಿಪ್ಪೇಶ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು.ಎನ್. ಕಾರ್ಯದರ್ಶಿ ರಮೇಶ್ ಸಹ ಕಾರ್ಯದರ್ಶಿ ಜಗದೀಶ್ ರಾಮಗಿರಿ ಮತ್ತು ಜಿತೇಂದ್ರ ಮುಂತಾದ ಮುಖಂಡರು ಹಾಜರಿದ್ದರು….
ಸಭೆ ಮುಗಿದ ನಂತರ
ಪರಮಪೂಜ್ಯರ ನೇತೃತ್ವದಲ್ಲಿ ಸಮುದಾಯದ ಎಲ್ಲಾ ಸಚಿವರು ಸಂಸದರು ಹಾಗೂ ಶಾಸಕರು ಮಾನ್ಯ ಸಮಾಜಕಲ್ಯಾಣ ಸಚಿವರಾದ ಗೋವಿಂದ ಎಂ ಕಾರಜೋಳ ಅವರನ್ನು ಭೇಟಿ ಮಾಡಿ ತಳವಾರ ಮತ್ತು ಪರಿವಾರ ವಿಷಯವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿ ಕೊಳ್ಳಲಾಯಿತು. ಈ ವಿಷಯವಾಗಿ ಸಮುದಾಯದವರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ… ನಂತರ ಎಲ್ಲಾ ಸಚಿವರು, ಸಂಸದರು, ಶಾಸಕರೊಂದಿಗೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನವರನ್ನು ಬೇಟಿಯಾಗಿ, 7.5% ಮೀಸಲಾತಿ ಹೆಚ್ಚಿಸಲು ಹಾಗೂ ಪ್ರತ್ಯೇಕ ಸಚಿವಾಲಯ ರಚಿಸುವಂತೆ ಮನವಿ ಸಲ್ಲಿಸಲಾಯಿತು….