April 18, 2024

Chitradurga hoysala

Kannada news portal

ಡಿ.ವಿ.ಎಸ್-ಪಿ.ಯು.ಕಾಲೇಜು ಭರಮಸಾಗರ ಚೈತ್ರಾ.ಜಿ.ಎನ್.600ಕ್ಕೆ 598 ಅಂಕ ಕಾಲೇಜಿಗೆ ಪ್ರಥಮ ಸ್ಥಾನ ಮತ್ತು ಅನುಷ.ಬಿ.600ಕ್ಕೆ 591 ಅಂಕ ದ್ವೀತಿಯ ಸ್ಥಾನ

1 min read

ಡಿ.ವಿ.ಎಸ್-ಪಿ.ಯು.ಕಾಲೇಜು ಭರಮಸಾಗರ
ಚೈತ್ರಾ.ಜಿ.ಎನ್.600ಕ್ಕೆ 598 ಅಂಕ ಕಾಲೇಜಿಗೆ ಪ್ರಥಮ ಸ್ಥಾನ ಮತ್ತು ಅನುಷ.ಬಿ.600ಕ್ಕೆ 591 ಅಂಕ ದ್ವೀತಿಯ ಸ್ಥಾನ

ಗ್ರಾಮೀಣ ಮಕ್ಕಳ ಪ್ರತಿಭಾನ್ವೇಷಣೆಯಲ್ಲಿ ಯಶಸ್ಸು ಕಂಡ ಡಿ.ವಿ.ಎಸ್. ಕಾಲೇಜು

ಭರಮಸಾಗರ:- ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ 2019ನೇ ಸಾಲಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡಿ.ವಿ.ಎಸ್. ವಸತಿಯುತ ಪಿ.ಯು.ಕಾಲೇಜಿನ 2020-21ನೇ ಸಾಲಿನ ದ್ವಿತೀಯ ಪಿ.ಯು.ನ ಪ್ರಥಮ ಫಲಿತಾಂಶವು ನೂರಕ್ಕೆ ನೂರರಷ್ಟಿದೆ. ಕೋವಿಡ್-19 ರ ಕಾರಣದಿಂದ ಈ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆ ನಡೆಯದಿದ್ದರೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಳೆದ ವರ್ಷಗಳ ಎಸ್.ಎಸ್.ಎಲ್.ಸಿ ಮತ್ತು ಪ್ರಥಮ ಪಿ.ಯು.ಸಿ.ಯಲ್ಲಿ ಹೆಚ್ಚು ಪರಿಶ್ರಮದಿಂದ ಓದಿದ್ದರ ಪರಿಣಾಮವಾಗಿ ಇಂದು ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ಚೈತ್ರಾ.ಜಿ.ಎನ್. ವಿದ್ಯಾರ್ಥಿನಿಯು 600ಕ್ಕೆ 598 ಅಂಕಗಳನ್ನು ಪಡೆದು 99.66% ರಷ್ಟು ಫಲಿತಾಂಶದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾಳೆ ಅಂತೆಯೇ ಅನುಷ.ಬಿ.ವಿದ್ಯಾರ್ಥಿನಿಯು 600ಕ್ಕೆ 591 ಅಂಕಗಳನ್ನು ಗಳಿಸಿ ದ್ವೀತಿಯ ಸ್ಥಾನ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿನ 52 ವಿದ್ಯಾರ್ಥಿಗಳನ್ನು 23 ಡಿಸ್ಟಿಂಕ್ಷನ್ 29 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಅದೇ ರೀತಿ ವಾಣಿಜ್ಯ ವಿಭಾಗದ 27 ವಿದ್ಯಾರ್ಥಿಗಳಲ್ಲಿ 2 ಡಿಸ್ಟಿಂಕ್ಷನ್ 22 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ವಿಷಯಾವಾರು ಕನ್ನಡದಲ್ಲಿ 11 ವಿದ್ಯಾರ್ಥಿಗಳು ಇಂಗ್ಲೀಷ್ ನಲ್ಲಿ 01, ಭೌತಶಾಸ್ತ್ರದಲ್ಲಿ 02, ರಸಾಯನಶಾಸ್ತ್ರದಲ್ಲಿ 01, ಗಣಿತಶಾಸ್ತ್ರದಲ್ಲಿ 02, ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣ, ಎಲ್ಲಾ ವೃತ್ತಿಪರ ಕೋರ್ಸ್‍ಗಳಿಗೆ ಬೇಕಾಗಿರುವ ತರಬೇತಿಗಳನ್ನು ನೀಡುತ್ತಾ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹೆಚ್ಚು ಪರಿಶ್ರಮವಹಿಸುತ್ತಾ ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳ ಸಾಲಿನಲ್ಲಿ ಸೇರ್ಪಡೆಗೊಂಡಿದೆ. ಡಿ.ವಿ.ಎಸ್. ಪಿ.ಯು.ಕಾಲೇಜು ಈ ಎಲ್ಲಾ ವಿದ್ಯಾರ್ಥಿಗಳಿಗೂ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ ವರ್ಗದವರೂ ಶುಭಕೋರಿದ್ದಾರೆ.

 

About The Author

Leave a Reply

Your email address will not be published. Required fields are marked *